ರಾಣೆಬೆನ್ನೂರ: ಸಂಸತ ಭಾರತದ ಮೂಲ ಭಾಷೆ. ಇದರ ಆಳ ಅಗಲವನ್ನು ಅಳೆಯಲು ಸರಳ ಸಂಸತ ಸಂಭಾಷಣೆ ಒಂದು ಪ್ರಮುಖ ಸಾಧನವಾಗಲಿದೆ. ಭಾರತವನ್ನು ತಿಳಿಯಬೇಕೆಂದರೆ ಸಂಸತದ ಅಧ್ಯಯನ ಅನಿವಾರ್ಯ ಎಂದು ಡಾ. ಶಿವಪ್ರಕಾಶ ತಂಡಿ ಹೇಳಿದರು.
ಸಂಸತ ಭಾರತಿ ಕರ್ನಾಟಕ ಉತ್ತರ ಸಂಘಟನೆ ವತಿಯಿಂದ ತಾಲೂಕಿನ ಕಮದೋಡ ಬಳಿಯ ರೇನ್ಬೋ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಉತ್ತರ ಕರ್ನಾಟಕದ ಆಯ್ದ ಕೆಲವು ಕಾರ್ಯಕರ್ತರ ಪ್ರಬೋಧನ ವರ್ಗದಲ್ಲಿ ಅವರು ಮಾತನಾಡಿದರು. ವಿದ್ಯಾಲಯದ ಸಂಸ್ಥಾಪಕ ಸುರೇಶ ಸಿ.ಟಿ. ಸಮಾರಂಭ ಉದ್ಘಾಟಿಸಿದರು. ಕರ್ನಾಟಕ ಉತ್ತರ ಪ್ರಾಂತದ ಉಪಾಧ್ಯಕ್ಷ ಚಂದ್ರಶೇಖರ ಮತ್ತು ವಕೀಲೆ ಶಾರದಾ ಕುಲಕಣಿರ್ ಉಪನ್ಯಾಸ ನೀಡಿದರು. ಓಂ ವಿದ್ಯಾಲಯದ ಸಂಸ್ಥಾಪಕಿ ಶಿಲ್ಪಾ ಸಾವಕಾರ, ಜಿ.ಆರ್. ಅಂಬಲಿ, ವರ್ಗದ ಆಯೋಜಕಿ ರತ್ನಾ ಭೈರಣ್ಣನವರ, ಮುಕುಂದ ಜಠಾರ, ಗಣೇಶ ಸವಣೂರ, ಸಂಟನೆಯ ದಕ್ಷಿಣ ವಿಭಾಗ ಸಂಘಟನಾ ಮಂತ್ರಿ ಲಕ್ಷಿ$್ಮನಾರಾಯಣ ಭುವನಕೋಟೆ ಮತ್ತಿತರರು ಉಪಸ್ಥಿತರಿದ್ದರು.