ನವದೆಹಲಿ: 2008ರಲ್ಲಿ ಮುಂಬೈ ತಾಜ್ ಹೋಟೆಲ್ ಮೇಲೆ ನಡೆದ 26/11 ಭಯೋತ್ಪಾದಕ ದಾಳಿಯ ಬಗ್ಗೆ ಎಲ್ಲರಿಗೂ ಗೊತ್ತೇ ಇರುತ್ತದೆ. ಈ ಸಂದರ್ಭದಲ್ಲಿ ನಡೆದ ‘ಆಪರೇಷನ್ ಬ್ಲ್ಯಾಕ್ ಟಾರ್ನಾಡೋ’ದಲ್ಲಿ ಪಾಲ್ಗೊಂಡು ಗುಂಡೇಟಿನಿಂದ ಗಾಯಗೊಂಡಿದ್ದವರು ಭಾರತೀಯ ನೌಕಾಪಡೆಯ ಕಮಾಂಡೋ ಆಗಿದ್ದ ಪ್ರವೀಣ್ ತಿಯೋಟಿಯಾ. ಅವರ ಈ ಸಾಹಕ್ಕೆ ಶೌರ್ಯಚಕ್ರ ನೀಡಿ ಗೌರವಿಸಲಾಗಿತ್ತು.
ಈಗ ಮ್ಯಾರಥಾನ್ ಓಟಗಾರರಾಗಿರುವ ಪ್ರವೀಣ್ ಅವರು ಹಲವು ಮ್ಯಾರಥಾನ್ಗಳಲ್ಲಿ ಭಾಗವಹಿಸಿ ಅವರು ಸಾಕಷ್ಟು ಪದಕಗಳನ್ನೂ ಗೆದ್ದಿದ್ದರು. ಈಗ ಕೋವಿಡ್-19 ಸೋಂಕಿನ ವಿರುದ್ಧ ಹೋರಾಡಲು ತಮ್ಮ 40 ಪದಕಗಳನ್ನು ಆನ್ಲೈನ್ನಲ್ಲಿ ಹರಾಗಿಟ್ಟಿದ್ದಾರೆ.
ಈಗಾಗಲೇ ಹರಾಜಾದ ಎರಡು ಪದಕಗಳಿಂದ ಬಂದ 2 ಲಕ್ಷ ರೂ.ಗಳನ್ನು ಪಿಎಂ ಕೇರ್ಸ್ ಫಂಡ್ಗೆ ದೇಣಿಗೆ ನೀಡಿದ್ದಾರೆ.