ನ್ಯೂಸ್

ಬೈಕ್​ಗೆ ಮತ್ತೊಂದು ಬೈಕ್​ ಡಿಕ್ಕಿ, ಓರ್ವ ಸಾವು

ಹಾವೇರಿ: ಬೈಕ್​ಗೆ ಮತ್ತೊಂದು ಬೈಕ್​ ಡಿಕ್ಕಿಯಾಗಿ ಓರ್ವ ಯುವಕ ಮೃತಪಟ್ಟ ಟನೆ ನಗರದ ಗುತ್ತಲ ರಸ್ತೆಯಲ್ಲಿ ಭಾನುವಾರ ಸಂಭವಿಸಿದೆ.
ತಾಲೂಕಿನ ಯತ್ತಿನಹಳ್ಳಿ ನಿವಾಸಿ ಸುಭಾಸ ಮಲ್ಲಪ್ಪ ಹರಿಜನ (19) ಮೃತ ಯುವಕ.
ಇವರು ಬೈಕ್​ ಮೇಲೆ ಹಾವೇರಿಯಿಂದ ಗುತ್ತಲಕ್ಕೆ ತೆರಳುತ್ತಿದ್ದ ಸಮಯದಲ್ಲಿ ಮತ್ತೊಂದು ಬೈಕ್​ಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಸುಭಾಸನನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್​ಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಸಂಚಾರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.