ನ್ಯೂಸ್

ಕಲಬುರಗಿ ನಗರದಲ್ಲಿ ಟೈಟ್ ಪೊಲೀಸ್ ಬಂದೋಬಸ್ತ್ ; ಜಿಲ್ಲೆಯ ಎಲ್ಲಡೆ ಅಲರ್ಟ್


ಕಲಬುರಗಿ : ಬಿಜೆಪಿ ಮುಖಂಖ ಮಣಿಕಂಠ ರಾಠೋಡ‌ ಮೇಲೆ ಮೇಲೆ ಹಲ್ಲೆ ಮಾಡಿದವರ ಬಂಧನಕ್ಕೆ ಆಗ್ರಹಿಸಿ ನಗರದಲ್ಲಿ ಇಂದು ಪ್ರತಿಭಟನೆ ಹಿನ್ನೆಲೆಯಲ್ಲಿ ಭಾರಿ ಟೈಟ್ ಬಂದೋಬಸ್ತ್ ಮಾಡಲಾಗಿದೆ.

ನಗರದ ಎಸ್ ವಿ ಪಿ ವೃತ್ತ, ಡಿಸಿ ಕಚೇರಿ ಸೇರಿದಂತೆ ಎಲ್ಲಡೆ ಖಾಕಿ ಪಡೆ ಫುಲ್ ಅಲರ್ಟ್ ಆಗಿದ್ದು, ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗಿದೆ.

ಪ್ರತಿಭಟನೆಯಲ್ಲಿ ಭಾಗಿಯಾಗಲು ಜಿಲ್ಲೆಯ ವಿವಿಧ‌ಕಡೆಗಳಿಂದ ತಾಂಡಾಗಳಿಂದ‌ಬರುತ್ತಿರುವ‌ ಜನರ‌ ವಾಹನಗಳನ್ನು ಪೊಲೀಸರು ಜಿಲ್ಲೆಯ ವಿವಿಧ ಕಡೆ ತಡೆದು ವಾಪಸು ಕಳುಹಿಸುತ್ತಿದ್ದಾರೆ.