ನ್ಯೂಸ್

ಅರಬ್‌ ದೇಶಕ್ಕೂ ನಿದ್ದೆಗೆಡಿಸಿರೋ ‘ಚಿನ್ನದ ರಾಣಿ’- ಗೋಳೋ ಎನ್ನುತ್ತಿರುವ ಅಧಿಕಾರಿಗಳು

suchetana

ತಿರುವನಂತಪುರ: ತಿರುವನಂತಪುರದ ವಿಮಾನ ನಿಲ್ದಾಣದಲ್ಲಿ ಸಿಕ್ಕ 30 ಕೆ.ಜಿ. ಚಿನ್ನದ ಬ್ಯಾಗ್‌ ವಿವಾದ ಇತ್ತ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಖುರ್ಚಿಯನ್ನು ಅಲ್ಲಾಡಿಸತೊಡಗಿದ್ದರೆ, ಅತ್ತ ಅರಬ್‌ ದೇಶಕ್ಕೂ ತಲೆಬಿಸಿ ಶುರುವಾಗಿದೆ.

ಡಿಪ್ಲೊಮ್ಯಾಟಿಕ್ ಬ್ಯಾಗೇಜ್‌ನಲ್ಲಿ ಯುಎಇಯಿಂದ ಕೇರಳಕ್ಕೆ 30 ಕಿಲೋ ಚಿನ್ನ ಕಳ್ಳಸಾಗಣೆ ಮಾಡಿದ ಪ್ರಕರಣ ಇದಾಗಿದೆ. ಈ ಪ್ರಕರಣ ರೂವಾರಿ ಎಂದೇ ಆರೋಪಿಸಲಾಗಿರುವ ‘ಚಿನ್ನದ ರಾಣಿ’ ಸ್ವಪ್ನಾ ಸುರೇಶ್‌ ಇದೀಗ ಎಲ್ಲರ ನಿದ್ದೆಗೆಡಿಸಿದ್ದಾಳೆ.

ಇತ್ತ ಕೇರಳ ಮುಖ್ಯಮಂತ್ರಿ ಕಚೇರಿಯ ನಿಕಟವರ್ತಿ ಎಂದೇ ಗುರುತಿಸಿಕೊಂಡಿರುವ ಈಕೆಯಿಂದಾಗಿ ಪಿಣರಾಯಿ ವಿಜಯನ್‌ ಅವರ ರಾಜೀನಾಮೆಗೆ ರಾಜಕೀಯ ವಲಯದಿಂದ ಭಾರಿ ಕೂಗು ಕೇಳಿಬರುತ್ತಿದೆ. ಈಗ ಯುಎಇ (ಯುನೈಟೆಡ್‌ ಅರಬ್‌ ಎಮಿರೇಟ್ಸ್‌) ಭಾರತದತ್ತನೇ ನೇರ ಬೊಟ್ಟು ಮಾಡಿ ತೋರಿಸತೊಡಗಿದೆ. ಈ ಪ್ರಕರಣದಲ್ಲಿ ತನ್ನದೇನೂ ತಪ್ಪಿಲ್ಲ. ಆದರೆ ಭಾರತದಲ್ಲಿ ಯುಎಇಯ ವರ್ಚಸ್ಸಿಗೆ ಧಕ್ಕೆ ತರುವ ನಿಟ್ಟಿನಲ್ಲಿ ಇಂಥದ್ದೊಂದು ಕೃತ್ಯವನ್ನು ಎಸಗಲಾಗಿದೆ. ನಾವು ಸುಮ್ಮನೇ ಬಿಡುವುದಿಲ್ಲ ಎಂದು ಸೌದಿ ಅರೆಬಿಯಾ ದೂತಾವಾಸ ಕಚೇರಿಯ ಅಧಿಕಾರಿಗಳು ಕಿಡಿ ಕಾರತೊಡಗಿದ್ದಾರೆ.

ಏಕೆಂದರೆ, ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಸ್ವಪ್ನಾ ಸೌದಿ ಅರೆಬಿಯಾ ದೂತಾವಾಸ ಕಚೇರಿಯ ಮಾಜಿ ಅಧಿಕಾರಿ ಹಾಗೂ ಕೇರಳ ರಾಜ್ಯ ಮಾಹಿತಿ ತಂತ್ರಜ್ಞಾನ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನ ಸ್ಪೇಸ್ ಪಾರ್ಕ್‌ ಮಾರ್ಕೆಟಿಂಗ್ ಸಂಪರ್ಕ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದರಿಂದ ನೇರವಾಗಿ ತಮ್ಮ ಮೇಲೆಯೇ ಆರೋಪ ಬಂದಿರುವುದಕ್ಕೆ ಯುಎಇ ಅಧಿಕಾರಿಗಳು ತೀವ್ರ ಅಸಮಾಧಾನ ಹೊರಹಾಕತೊಡಗಿದ್ದಾರೆ.

ತಮಗೆ ಈ ಚಿನ್ನದ ಬಗ್ಗೆ ಯಾವುದೇ ಮಾಹಿತಿಯೂ ಇಲ್ಲ. ಇದಕ್ಕೆ ಸಂಬಂಧಿಸಿದಂತೆ ನಾವು ಇದಾಗಲೇ ಸ್ಥಳೀಯ ಉದ್ಯೋಗಿಯನ್ನು ಬಂಧಿಸಿದ್ದೇವೆ. ಇನ್ನೊಬ್ಬನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ತನಿಖೆಯನ್ನು ನಾವೂ ಆರಂಭಿಸಿದ್ದೇವೆ ಎಂದಿರುವ ಯುಎಇ ಅಧಿಕಾರಿಗಳು, ತಮ್ಮ ಖ್ಯಾತಿಯನ್ನು ಸಹಿಸದ ಕಾರಣದಿಂದ ಇಂಥದ್ದೊಂದು ದುಷ್ಕ್ಯತ್ಯ ಎಸಗಲಾಗಿದೆ ಎಂದಿದ್ದಾರೆ. ಇದೇ ವೇಳೆ, ಅಪರಾಧದ ಮೂಲವನ್ನು ಹುಡುಕಲು ನಾವು ಭಾರತದ ಜತೆ ಸಹಕರಿಸುತ್ತೇವೆ ಎಂದಿದ್ದಾರೆ.

ಅದೇ ಇನ್ನೊಂದೆಡೆ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ರಾಜೀನಾಮೆಗೆ ಬಲವಾದ ಒತ್ತಡಗಳು ಕೇಳಿಬರತೊಡಗಿದೆ.

ಏನಿದು ಪ್ರಕರಣ: ಈ ಲಿಂಕ್‌ ನೋಡಿ-