ನ್ಯೂಸ್

Tirupati laddu row| ಪ್ರಕಾಶ್​ ರಾಜ್​​ಗೆ ಪವರ್​ ಸ್ಟಾರ್​​ ವಾರ್ನಿಂಗ್​​​.. ನಿಮಗೇನು ಸಂಬಂಧ ಎಂದಿದ್ದೇಕೆ ಪವನ್​​ ಕಲ್ಯಾಣ್​​?

ಅಮರಾವತಿ: ಕೋಟ್ಯಂತರ ಮಂದಿಯ ಆರಾಧ್ಯದೈವ ತಿರುಪತಿ(Tirupati ) ವೆಂಕಟೇಶ್ವರ ಸನ್ನಿಧಿಯಲ್ಲಿ ನೀಡಲಾಗುವ ಲಡ್ಡುಗಳಲ್ಲಿ(Laddu) ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ವಿವಾದ ದೇಶಾದ್ಯಂತ ಪ್ರಾಮುಖ್ಯತೆ ಪಡೆದುಕೊಂಡಿದೆ. ಸದ್ಯ ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್​ ಕಲ್ಯಾಣ್​​ ಪ್ರಾಯಶ್ಚಿತ್ತ ದೀಕ್ಷೆಯಲ್ಲಿರುವುದು ಗೊತ್ತೆ ಇದೆ. ಇದರ ಸಲುವಾಗಿ ಬೆಜವಾಡ ಕನಕರು ದುರ್ಗಮ್ಮನವರ ಮೆಟ್ಟಿಲು ತೊಳೆಸಿ ಅರಿಶಿನ ಕುಂಕುಮ ಬರೆಯುವ ಮೂಲಕ ಪವರ್​ಸ್ಟಾರ್​​ ಪವನ್​​ ದೀಕ್ಷೆ ಪಡೆಕೊಂಡಿದ್ದಾರೆ.

ಇದೇ ವೇಳೆ ನಟ ಪ್ರಕಾಶ್​ ರಾಜ್​​​ ತಿರುಪತಿ ಲಡ್ಡು ವಿಚಾರವಾಗಿ ನೀಡಿರುವ ಹೇಳಿಕೆಗೆ ಪವನ್​ ಕಲ್ಯಾಣ್​ ಛೀಮಾರಿ ಹಾಕಿದ್ದಾರೆ. ಒಬ್ಬ ವ್ಯಕ್ತಿಯಾಗಿ ನಿಮ್ಮ ಮೇಲೆ ನನಗೆ ಗೌರವವಿದೆ, ಅದು ನಿಮಗೂ ಗೊತ್ತು. ಆದರೆ ಈ ರೀತಿ ಮಾತುಗಳನ್ನು ಆಡುತ್ತಾ ನಿಮ್ಮ ಮೇಲಿನ ಗೌರವ ಕಡಿಮೆ ಮಾಡಿಕೊಳ್ಳಬೇಡಿ. ಸೆಕ್ಯುಲರಿಸಂ ಎಂದರೆ ಎರಡು ದಾರಿ .. ಒಂದು ದಾರಿ ಅಲ್ಲ. ತಿರುಮಲ ಲಡ್ಡು ಕಲಬೆರಕೆ ಎಂದು ಅವರು ಭಾವಿಸಿ ಜಗಳವಾಡುತ್ತಿದ್ದರೆ, ನೀವೇನು ಮಾಡುತ್ತಿದ್ದೀರಿ? ತಿರುಪತಿ ಲಡ್ಡಿಗೂ ನಿಮಗೂ ಏನು ಸಂಬಂಧ? ನೀವು ಮಧ್ಯದಲ್ಲಿ ಏಕೆ ಮಾತನಾಡುತ್ತಿದ್ದೀರಿ. ಸಹ ಹಿಂದೂಗಳ ಬಗ್ಗೆ ತಪ್ಪಾಗಿ ಮಾತನಾಡುತ್ತಿದ್ದರೆ ಸುಮ್ಮನಿರುವುದಿಲ್ಲ ಎಂದಿದ್ದಾರೆ.

ಅಲ್ಲದೆ ವೈಎಸ್​ಆರ್​ಸಿಪಿಯನ್ನು ವಿಮರ್ಶಿಸುವವರಿಗೂ ಚಳಿ ಬಿಡಿಸಿದ್ದಾರೆ. ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದುರ, ನನ್ನನ್ನು ರಸ್ತೆಗೆಳೆದರು ನಾನು ಮೌನವಾಗಿಯೇ ಇದ್ದೇನೆ. ಆದರೆ ವೈಸಿಪಿಯನ್ನು ವಿರ್ಮಶಿಸುವವರಿಗೆ ಪ್ರತ್ಯೇಕವಾಗಿ ಹೇಳುತ್ತಿದ್ದೇನೆ, ಸನಾತನ ಧರ್ಮದ ವಿಚಾರಕ್ಕೆ ಬರಬೇಡಿ. ತಪ್ಪು ನಡೆದಿದ್ದರೆ ತಪ್ಪು ಎಂದು ಒಪ್ಪಿಕೊಳ್ಳಿ, ಇಲ್ಲದಿದ್ದರೆ ನಮಗೆ ಸಂಬಂಧವಿಲ್ಲ ಎಂದು ಹೇಳಿ. ಅದನ್ನು ಹೊರತು ಪಡಿಸಿ ಅಡ್ಡದಿಡ್ಡಿ ಮಾತನಾಡಿದರೆ ಕ್ಷಮಿಸಲಾಗುವುದಿಲ್ಲ. ನೀವು ಹಿಂದೂಗಳೆ ಎನ್ನುವುದನ್ನು ಮರೆಯಬೇಡಿ ಎಂದು ವಾರ್ನಿಂಗ್​ ನೀಡಿದ್ದಾರೆ.

ಪ್ರಕಾಶ್​ ರಾಜ್​ ಹೇಳಿದ್ದೇನು?

ನೀವು ಉಪಮುಖ್ಯಮಂತ್ರಿ ಆಗಿರುವ ರಾಜ್ಯದಲ್ಲೇ ಈ ವಿವಾದ ನಡೆದಿದೆ. ದಯವಿಟ್ಟು ಈ ಬಗ್ಗೆ ತನಿಖೆ ನಡೆಸಿ, ಆರೋಪಿಗಳನ್ನು ಪತ್ತೆಹಚ್ಚಿ ಕಠಿಣ ಕ್ರಮ ತೆಗೆದುಕೊಳ್ಳಿ. ಅದನ್ನು ಬಿಟ್ಟು ನೀವೇಕೆ ಆತಂಕಗಳನ್ನು ಹರಡುತ್ತಿದ್ದೀರಿ ಮತ್ತು ಸಮಸ್ಯೆಯನ್ನು ರಾಷ್ಟ್ರಮಟ್ಟದಲ್ಲಿ ಬಿಂಬಿಸುತ್ತಿದ್ದೀರಿ. ದೇಶದಲ್ಲಿ ಈಗಾಗಲೇ ಸಾಕಷ್ಟು ಕೋಮುಗಲಭೆಗಳಿವೆ ಎಂದಿದ್ದರು. ಪ್ರಕಾಶ್​ ರಾಜ್​ ಅವರ ಈ ಹೇಳಿಕೆಗೆ ಪವನ್​ ಕಲ್ಯಾಣ್​​ ಸದ್ಯ ತಿರುಗೇಟಿ ನೀಡಿದ್ದಾರೆ. ಪವನ್ ಕಲ್ಯಾಣ್ ಅವರ ಕಾಮೆಂಟ್‌ಗಳಿಗೆ ಪ್ರಕಾಶ್ ರಾಜ್ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್​​)