ನ್ಯೂಸ್

ತಿರುಪತಿ ಲಡ್ಡು ವಿವಾದ: ಪಾವಿತ್ರ್ಯತೆ ಮರುಸ್ಥಾಪಿಸಲು ದೇವಸ್ಥಾನದಲ್ಲಿ ಶಾಂತಿ ಹೋಮ ಆರಂಭ

 ತಿರುಪತಿ: ನೂರಾರು ವರ್ಷಗಳ ಇತಿಹಾಸ, ಗುಣಮಟ್ಟ ಕಾಪಾಡಿಕೊಂಡು ಬಂದಿದ್ದ ತಿರುಪತಿ ತಿಮ್ಮಪ್ಪ ದೇವಾಲಯದ ಪವಿತ್ರ ಲಡ್ಡು ಪ್ರಸಾದಕ್ಕೆ  ಪ್ರಾಣಿಗಳ ಕೊಬ್ಬು ಬಳಕೆ ಮಾಡಲಾಗಿದೆ ಎನ್ನುವ ಸುದ್ದಿ ಕಳೆದ ಕೆಲವು ದಿನಗಳಿಂದ ಚರ್ಚೆಯಲ್ಲಿದೆ.  ಈ ಸುದ್ದಿ ಬೆನ್ನಲ್ಲೇ ದೇವಸ್ಥಾನದ ಆಢಳಿತ ಮಂಡಳಿ  ದೇವಸ್ಥಾನ ಶುದ್ಧೀಕರಣಕ್ಕೆ ಮುಂದಾಗಿದೆ.

ಲಡ್ಡು ಪ್ರಸಾದಕ್ಕೆ ಈ ಹಿಂದೆ ಬಳಸಿದ ತುಪ್ಪದಲ್ಲಿ ವಿದೇಶಿ ಸಂಸ್ಥೆಗಳಿಂದ ತರಿಸಿಕೊಂಡ ವಿವಿಧ ಪ್ರಾಣಿಗಳ ಕೊಬ್ಬು ಸೇರಿಸಲಾಗಿತ್ತು ಎಂಬ ಅಂಶವನ್ನು ಲ್ಯಾಬ್ ಪರೀಕ್ಷೆಗಳು ಬಹಿರಂಗಪಡಿಸಿದ ನಂತರ ಈ ವಿಷಯ ದೇಶ, ವಿದೇಶಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದು ತುಪ್ಪ ಪೂರೈಕೆದಾರರಲ್ಲಿ ಬದಲಾವಣೆ ಮತ್ತು ರಾಜ್ಯ ಸರ್ಕಾರದಿಂದ ವಿಚಾರಣೆಗೆ ಕಾರಣವಾಗಿದೆ.

ತಿರುಮಲ ಶ್ರೀವಾರಿ ದೇವಸ್ಥಾನದಲ್ಲಿ ಶಾಂತಿ ಹೋಮ ಆರಂಭವಾಗಿದೆ. ಪಂಡಿತರು ಹಾಗೂ ಅರ್ಚಕರು ದೇವಸ್ಥಾನದ ಯಾಗಶಾಲೆಯಲ್ಲಿ ಹೋಮ ನಡೆಸುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಇಒ ಶ್ಯಾಮಲಾ ರಾವ್, ಹೆಚ್ಚುವರಿ ಇಒ ವೆಂಕಯ್ಯ ಚೌಧರಿ ಭಾಗವಹಿಸಿದ್ದರು.  ಶಾಂತಿ ಹೋಮ ನಡೆಯಲಿದೆ. ಹೋಮ ಮುಗಿದ ನಂತರ ದೇವಸ್ಥಾನದಲ್ಲಿ ಲಡ್ಡು ಪೋಟು ಸಹಿತ ಪಂಚಗವ್ಯಗಳೊಂದಿಗೆ ಸಂಪ್ರೋಕ್ಷಣೆ ಕಾರ್ಯಕ್ರಮ ನಡೆಯಲಿದೆ.

ಇಂದು ರೋಹಿಣಿ ನಕ್ಷತ್ರ ಶ್ರೀಗಳಿಗೆ ಮುಹೂರ್ತದ ಬಲವಿರುವುದರಿಂದ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಶಾಂತಿ ಹೋಮ ನಡೆಸಲಾಗುತ್ತಿದೆ. ಮೊದಲಿಗೆ ಶಾಂತಿ ಯಾಗ ಮತ್ತು ವಾಸ್ತು ಹೋಮ ನಡೆಸಲಾಗುತ್ತದೆ. ಅಂತಿಮವಾಗಿ ಅರ್ಚಕರು ಪಂಚಗವ್ಯಗಳೊಂದಿಗೆ ಸಂಪ್ರೋಕ್ಷಣೆ ನಡೆಸಲಿದ್ದಾರೆ. ಆದರೆ, ಆಗಮ ಪಂಡಿತರು ಭಗವಂತನಿಗೆ ಮಾಡುವ ಪುಣ್ಯಕಾರ್ಯಗಳಿಗೆ ಅಡ್ಡಿಯಾಗದಂತೆ ಒಂದು ದಿನ ಮಾತ್ರ ಯಾಗ ಮಾಡಲು ನಿರ್ಧರಿಸಿದ್ದಾರೆ.

ತಿರುಮಲ ಇವೊ ಶ್ಯಾಮಲಾ ರಾವ್ ಹೇಳಿದರು. ಇದಕ್ಕೆ ಪ್ರಾಯಶ್ಚಿತ್ತವಾಗಿ ಹೋಮ ನಡೆಸುತ್ತಿರುವುದಾಗಿ ತಿಳಿಸಿದರು.