ಬೆಂಗಳೂರು: ಮೆಕಾನಿಕ್ ಅಂಗಡಿ ಬಳಿ ಟೈರ್ ಒಡೆದ ಪರಿಣಾಮ 19ರ ಯುವಕ ಗಾಳಿಯಲ್ಲಿ ಪಲ್ಟಿ ಹೊಡೆದಿದ್ದಾನೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗಾಳಿಯಲ್ಲಿ ಪಲ್ಟಿ ಹೊಡೆದ ಪರಿಣಾಮ ಅಬ್ದುಲ್ ರಾಜೀದ್(19) ಎಂಬ ಯುವಕ ತೀವ್ರವಾಗಿ ಗಾಯಗೊಂಡಿದ್ದಾನೆ. ಈ ಘಟನೆ ಡಿ.21ರಂದು ಉಡುಪಿ ಜಿಲ್ಲೆಯ ಕೋಟೆಶ್ವರ ಪ್ರದೇಶದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಹೆಚ್ಚುವರಿ ಭದ್ರತಾ ಠೇವಣಿಗೆ ನೋಟಿಸ್ಗಳ ಸರಮಾಲೆ
ವಿಡಿಯೋದಲ್ಲಿ ಏನಿದೆ?
ಯುವಕ ಅಬ್ದುಲ್ ದೊಡ್ಡ ಟೈರ್ಗಾಳಿಯನ್ನು ತುಂಬುತ್ತಿದ್ದಾನೆ. ಏಕಾಏಕಿ ಟೈರ್ ಬ್ಲಾಸ್ಟ್ ಆಗಿದ್ದು, ಅವರ ಬಲ ಭಾಗದಿಂದ ಹಲವಾರು ಅಡಿ ಮೇಲೆಕ್ಕೆ ಹೋಗಿ ಪಲ್ಟಿ ಹೊಡೆದು ಕೆಳಕ್ಕೆ ಬಿದ್ದಿದ್ದಾರೆ. ಖಾಸಗಿ ಶಾಲಾ ಬಸ್ನ ಟೈರ್ಗೆ ಪಂಕ್ಚರ್ ಹಾಕುತ್ತಿದ್ದರು ಎಂದು ಹೇಳಲಾಗಿದ್ದು, ಇದೀಗ ಈ ವಿಡಿಯೋ ಭಾರೀ ವೈರಲ್ ಆಗಿದೆ.
ಸ್ಫೋಟದಲ್ಲಿ ಅಬ್ದುಲ್ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದೆ. ಅವರ ತೋಳಿನಲ್ಲಿ ಫ್ರಾಕ್ಚರ್ ಆಗಿರುವುದಾಗಿ ವರದಿಯಾಗಿದೆ,(ಏಜೆನ್ಸೀಸ್).