ನ್ಯೂಸ್

'ನಾಮಕರಣದಲ್ಲಿ ಮಕ್ಕಳು ಧರಿಸಿದ್ದ ಪೆಂಡೆಂಟ್​​​ನಲ್ಲಿದ್ದ ಹುಲಿ ಉಗುರು ಅಸಲಿಯಲ್ಲ': ನಟಿ ಅಮೂಲ್ಯ ಸ್ಪಷ್ಟನೆ

ಬೆಂಗಳೂರು: ಸ್ಯಾಂಡಲ್​​​ವುಡ್​​​ ನಟಿ ಅಮೂಲ್ಯ ಅವರ ಇಬ್ಬರು ಮಕ್ಕಳೂ ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ಕುರಿತಂತೆ ನಟಿ ಸ್ಪಷ್ಟನೆ ನೀಡಿದ್ದಾರೆ.

ಹೌದು, ಅಮೂಲ್ಯ ಅವರ ಇಬ್ಬರು ಮಕ್ಕಳೂ ಧರಿಸಿರುವುದು ಅಸಲಿ ಉಗುರುಗಳೇ ಅಲ್ಲವಂತೆ. ಮಕ್ಕಳು ನಾಮಕರಣದ ವೇಳೆ ಧರಿಸಿದ್ದ ಪೆಂಡೆಂಟ್ ನಲ್ಲಿದ್ದ ಹುಲಿ ಉಗುರು ಅಸಲಿ ಅಲ್ಲ. ಸಿಂಥೆಟಿಕ್. ಅಂತಹ ನಕಲಿ ಉಗುರುಗಳು 500-600ರೂ.ಗೆ ಸಿಗುತ್ತವೆ. ಅರಣ್ಯ ಅಧಿಕಾರಿಗಳು ಪರಿಶೀಲನೆಗೆ ಬಂದರೆ ಖಂಡಿತ ಅವುಗಳನ್ನು ನೀಡುತ್ತೇನೆ. ಉಗುರುಗಳು ಅಸಲಿಯಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.

ಸಂತೋಷ್​​​​ಗೆ ಜಾಮೀನು

ಹುಲಿ ಉಗುರು ಧರಿಸಿದ್ದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದ ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ರಿಯಾಲಿಟಿ ಶೋ ಸ್ಪರ್ಧಿ ವರ್ತೂರು ಸಂತೋಷ್​ ಅವರಿಗೆ ಶುಕ್ರವಾರ (ಅ.27) ಜಾಮೀನು ಸಿಕ್ಕಿದೆ.

ಮೃಣಾಲ್‌ ಕೊರಳಲ್ಲಿ ಹುಲಿ ಉಗುರು ಹೋಲುವ ಪೆಂಡೆಂಟ್

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ, ಯುವ ಕಾಂಗ್ರೆಸ್ ಮುಖಂಡ ಮೃಣಾಲ್‌ ಹೆಬ್ಬಾಳ್ಕರ್ ಅವರು ಹುಲಿ ಉಗುರು ಹೋಲುವ ಪೆಂಡೆಂಟ್ ಧರಿಸಿರುವ ಫೋಟೋಗಳು ಮಾಧ್ಯಮಗಳಲ್ಲಿ ಪ್ರಕಟವಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮೃಣಾಲ್‌ ಹೆಬ್ಬಾಳ್ಕರ್ ಅವರ ಮನೆಗೆ ಶುಕ್ರವಾರ ತೆರಳಿದ್ದರು. ಈ ವೇಳೆ ಆ ಪೆಂಡೆಂಟ್ ಅನ್ನು ಮೃಣಾಲ್ ಅವರು ಅಧಿಕಾರಿಗಳಿಗೆ ಹಸ್ತಾಂತರಿಸಿದ್ದು, ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.