ರೋಹಿತ್ ಶೆಟ್ಟಿ ನಿರ್ದೇಶನದ ಸಿಂಗಂ ಎಗೇನ್ ಚಿತ್ರದ ನಿರ್ದೇಶಕರು ಭಾನುವಾರ ದೀಪಿಕಾ ಪಡುಕೋಣೆ ಅವರ ಪಾತ್ರದ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ. ನಟಿ ಖಡಕ್ ಪೊಲೀಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಶಕ್ತಿ ಶೆಟ್ಟಿ ಎಂಬ ಹೆಸರಿನ ಅವರ ಕೈಯಲ್ಲಿ ಗನ್ ಹಿಡಿದಿದ್ದಾರೆ.
ಇದೀಗ ನಟ ಟೈಗರ್ ಶ್ರಾಫ್ ಕೂಡಾ ಸಿಂಗಮ್ ಅಗೇನ್ ಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲಿ ಮಿಂಚೋಕೆ ಸಿದ್ಧವಾಗಿದ್ದು, ತಮ್ಮ ಇನ್ಸ್ಟಾಗ್ರಾಂನಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಗೆಟ್ ಅಪ್ನಲ್ಲಿರುವ ಫಸ್ಟ್ ಲುಕ್ ಫೋಟೋವನ್ನ ಹಂಚಿಕೊಂಡಿದ್ದು, ಸದ್ಯ ಇದು ಪ್ರೇಕ್ಷಕರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಮುಂಬರುವ ಚಿತ್ರ 'ಸಿಂಗಮ್ ಎಗೇನ್' ನಲ್ಲಿ ನಟ ಎಸಿಪಿ ಸತ್ಯ ಪಾತ್ರವನ್ನು ಟೈಗರ್ ಶ್ರಾಫ್ ನಿರ್ವಹಿಸಲಿದ್ದಾರೆ. ರೋಹಿತ್ ಶೆಟ್ಟಿ ಅವರನ್ನು ಸ್ವಾಗತಿಸಿ, "ವಿಶೇಷ ಕಾರ್ಯಪಡೆಯ ಅಧಿಕಾರಿ ಎಸಿಪಿ ಸತ್ಯಾ ಅವರನ್ನು ಭೇಟಿ ಮಾಡಿ ಎಂದು ಈ ಫೋಟೋಗೆ ಟೈಗರ್ ಶ್ರಾಫ್ ಕ್ಯಾಪ್ಶನ್ ನೀಡಿದ್ದಾರೆ.
ಸಿಂಗಂ ಸರಣಿಯ ಮೂರನೇ ಚಿತ್ರ ಇದಾಗಿದ್ದು, 2011ರಲ್ಲಿ ಸಿಂಗಂ ಸಿನಿಮಾ ತೆರೆಕಂಡಿತ್ತು. ನಂತರ ಸಿಂಗಮ್ ರಿಟರ್ನ್ಸ್ (2014) ನಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ಕರೀನಾ ಕಪೂರ್ ಮತ್ತು ರಣವೀರ್ ಸಿಂಗ್ ಮೊದಲ ಬಾರಿಗೆ ಒಟ್ಟಿಗೆ ತೆರೆಹಂಚಿಕೊಂಡಿದ್ದರು.
ಅಜಯ್ ದೇವಗನ್ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ರೋಹಿತ್ ಶೆಟ್ಟಿ ಅವರ ಸಿಂಬಾ ಚಿತ್ರದ ಭಾಗವಾಗಿದ್ದ ರಣವೀರ್ ಸಿಂಗ್ ಕೂಡ ನಟಿಸಿದ್ದಾರೆ. ಅವರು ಇನ್‌ಸ್ಪೆಕ್ಟರ್ ಸಂಗ್ರಾಮ್ ಭಲೇರಾವ್ ಪಾತ್ರವನ್ನು ಪುನರಾವರ್ತಿಸಲಿದ್ದಾರೆ. ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಕರೀನಾ ಕಪೂರ್ ಕೂಡ ಇದ್ದಾರೆ.