ಪೌರ ಕಾರ್ಮಿಕ ದಸರಾದಲ್ಲಿ ಹುಲಿ ಕುಣಿತಕ್ಕೆ ಹೆಜ್ಜೆ ಹಾಕಿದ ಶಾಸಕ ಎಸ್.ಎನ್.ಚನ್ನಬಸಪ್ಪ.  
ನ್ಯೂಸ್

ಶಿವಮೊಗ್ಗ ಶಾಸಕರಿಂದ ಹುಲಿ ಕುಣಿತ

ಅರವಿಂದ ಅಕ್ಲಾಪುರ

ಶಿವಮೊಗ್ಗ: ಪೌರ ಕಾರ್ಮಿಕ ದಸರಾ ಅಂಗವಾಗಿ ಪೌರ ಕಾರ್ಮಿಕರು ನಾಟಕ ಪ್ರದರ್ಶಿಸಿ ಗಮನಸೆಳೆದರು. ಅವರಿಗಾಗಿ ವಿಶೇಷ ಮನರಂಜನೆಯ ಆಟಗಳನ್ನು ಆಯೋಜಿಸಲಾಗಿತ್ತು. ನೃತ್ಯ, ಹಾಡು, ಸಾಂಪ್ರದಾಯಿಕ ಉಡುಗೆ ಮೂಲಕ ಪೌರ ಕಾರ್ಮಿಕರು ಮಿಂಚಿದರು. ಈ ನಡುವೆ ಕೆಲ ಮಂದಿ ಹುಲಿ ಕುಣಿತ ಪ್ರದರ್ಶಿಸುತ್ತಿದ್ದ ಸಂದರ್ಭ ಶಾಸಕ ಎಸ್.ಎನ್.ಚನ್ನಬಸಪ್ಪ ಸಹ ವೇದಿಕೆ ಮೇಲೆ ಹುಲಿ ಕುಣಿತಕ್ಕೆ ಹೆಜ್ಜೆ ಹಾಕಿದರು.

ಕಲಾ ದಸರಾದ ಅಂಗವಾಗಿ ಮಂಗಳವಾರ ಸಂಜೆ ಶಿವಪ್ಪನಾಯಕ ವೃತ್ತದಿಂದ ಗಾಂಧಿ ಬಜಾರ್, ಎಸ್‌ಪಿಎಂ ರಸ್ತೆ ಮೂಲಕ ಶಿವಪ್ಪನಾಯಕ ಅರಮನೆವರೆಗೆ ಸಾಗಿದ ಕಲಾ ಜಾಥಾ ವೈವಿಧ್ಯಮಯವಾಗಿತ್ತು. ವಿವಿಧ ಕಲಾ ತಂಡಗಳು, ಮಹಿಳಾ ಸಂಘಗಳು ಇದರಲ್ಲಿ ಹೆಜ್ಜೆ ಹಾಕಿದವು. ದೇವಿ ವೇಷಧಾರಿ ಮಹಿಳೆಯರು ವಿಭಿನ್ನವಾಗಿ ಕಂಗೊಳಿಸಿದರು. ಡೊಳ್ಳು ಕುಣಿತ, ವೀರಗಾಸೆ, ಕೀಲು ಕುದುರೆ ತಂಡಗಳು ಜಾಥಾ ಪ್ರಮುಖ ಆಕರ್ಷಣೆಗಳಾಗಿದ್ದವು