ಬೆಂಗಳೂರು: ಹುಲಿಯೊಂದು ಹಸುವನ್ನು ಬೇಟೆಯಾಡಿ ಬಾಯಿ ಮೂಲಕವೇ ಎಳೆದೊಯ್ಯುತ್ತಿರುವ ಅಪರೂಪದ ದೃಶ್ಯ ವೈರಲ್ ಆಗಿದೆ.
ತನಗಿಂತಲೂ ತೂಕ ಹೆಚ್ಚಿರುವ ಹಸುವನ್ನು ಬೇಟೆಯಾಡಿದ ಹುಲಿರಾಯ, ಅದನ್ನು ತನ್ನ ಬಾಯಿಯಲ್ಲೇ ಕಚ್ಚಿಕೊಂಡು ಎಳೆದೊಯ್ಯುತ್ತಿದೆ. ಅಬ್ಬಾ! ಹುಲಿಯ ಆ ಶಕ್ತಿಯನ್ನು ಕಂಡ ನೆಟ್ಟಿಗರು ಅಚ್ಚರಿಪಟ್ಟಿದ್ದಾರೆ. ಬಹುತೇಕರು ಹಸುವಿನ ಬಗ್ಗೆಯೂ ಮರುಕ ವ್ಯಕ್ತಪಡಿಸಿದ್ದಾರೆ. ಆದರಿದು ಆಹಾರ ಸರಪಣಿ ಎಂದೂ ಕೆಲವರು ಹೇಳಿದ್ದಾರೆ.
ಈ ಘಟನೆ ಕೇಂದ್ರ ಭಾರತೀಯ ಹುಲಿ ಮೀಸಲು ಪ್ರದೇಶದಲ್ಲಿ ಸಂಭವಿಸಿದೆ. ಹಸುವನ್ನು ಹುಲಿ ಎಳೆದೊಯ್ಯುತ್ತಿರುವ 14 ಸೆಕೆಂಡ್ಗಳ ವಿಡಿಯೋ ತುಣುಕನ್ನು ಐಎಫ್ಎಸ್ ಅಧಿಕಾರಿ ಸುಸಂತ ನಂದ ಅವರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಸೂರ್ಯ ಕೇಸರಿ ಎಂಬುವವರು ಶೇರ್ ಮಾಡಿದ್ದ ಈ ವಿಡಿಯೋವನ್ನು ತನ್ನ ಟ್ವಿಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿಕೊಂಡಿರುವ ಸುಸಂತ ನಂದ ಅವರು, ಹುಲಿಯ ಶಕ್ತಿ ವಿಸ್ಮಯಕಾರಿ ಎಂದಿದ್ದಾರೆ.