death 
ನ್ಯೂಸ್

ಅಪಘಾತಕ್ಕೆ ಹುಲಿ ವೇಷ ಕಲಾವಿದ ಬಲಿ

ಬ್ರಹ್ಮಾವರ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬ್ರಹ್ಮಾವರ ಹೇರೂರು ರುಡ್‌ಸೆಟ್ ವೃತ್ತದ ಬಳಿ ಬುಧವಾರ ನಡೆದ ಅಪಘಾತದಲ್ಲಿ ಹುಲಿ ವೇಷ ಕಲಾವಿದ ಉಡುಪಿ ಸಂತೆಕಟ್ಟೆ ಲಕ್ಷ್ಮೀಂದ್ರನಗರ ನಿವಾಸಿ ಮಂಜುನಾಥ(43) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಉಡುಪಿ ಕಡೆ ಹೋಗುತ್ತಿದ್ದ ಎಕ್ಸ್‌ಪ್ರೆಸ್ ಬಸ್ ಏಕಾಏಕಿ ಬ್ರೇಕ್ ಹಾಕಿದ ಕಾರಣ ಹಿಂದಿನಿಂದ ಬಂದ ಇನೋವಾ ಕಾರು ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರಿನಲ್ಲಿದ್ದ ಮಂಜುನಾಥ ಮೃತಪಟ್ಟಿದ್ದಾರೆ. ಮಂಜುನಾಥ ಹುಲಿ ವೇಷ ಕಲಾವಿದರಾಗಿ ಜನಾನುರಾಗಿಯಾಗಿದ್ದರು. ಕಾರಿನಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.