ನ್ಯೂಸ್

ಕಾವೇರಿ ನೀರು ಕುಡಿದ ನಂತರ ಕನ್ನಡ ಬರಲೇ ಬೇಕು! ನಿರರ್ಗಳವಾಗಿ ಕನ್ನಡ ಮಾತನಾಡಿದ ವಿದೇಶಿಗ.. kannada

kannada:ಟಿಬೆಟಿಯನ್ ವ್ಯಕ್ತಿಯೊಬ್ಬ ನಿರರ್ಗಳವಾಗಿ ಕನ್ನಡ ಮಾತನಾಡುತ್ತಿರುವ ವಿಡಿಯೋವೊಂದು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ಈ ವಿಡಿಯೋ ನೆಟಿಜನ್‌ಗಳ ಹೃದಯ ಗೆದ್ದಿದೆ.

ವಿಡಿಯೋದಲ್ಲಿ, ಈ ವ್ಯಕ್ತಿ ಕನ್ನಡವನ್ನು ಎಷ್ಟು ಚೆನ್ನಾಗಿ ಮಾತನಾಡುತ್ತಾನೆ ಎಂದರೆ ನೀವು ಊಹಿಸಲೂ ಸಾಧ್ಯವಿಲ್ಲ. ವಿದೇಶಿಯರಿಂದ ಕನ್ನಡ ಕೇಳುತ್ತಿರುವಂತೆ ನಿಮಗೆ ಅನಿಸುವುದಿಲ್ಲ.

ವೈರಲ್ ಆಗಿರುವ ವಿಡಿಯೋದಲ್ಲಿ, ಈ ವ್ಯಕ್ತಿ, ನನಗೆ ಅನೇಕ ಟಿಬೆಟಿಯನ್ನರು ಗೊತ್ತು, ಅವರು ತಮ್ಮ ಮಾತೃಭಾಷೆಗಿಂತ ಕನ್ನಡವನ್ನು ಹೆಚ್ಚು ಮಾತನಾಡುತ್ತಾರೆ .  ನಾನು ಕನ್ನಡ ಮಾತನಾಡುವಾಗ ಜನರು ನನ್ನನ್ನು ತುಂಬಾ ಗೌರವಿಸುತ್ತಾರೆ. ಏಕೆಂದರೆ, ವಿದೇಶಿಯೊಬ್ಬ ತಮ್ಮ ಸ್ಥಳೀಯ ಭಾಷೆಯನ್ನು ಮಾತನಾಡುತ್ತಿದ್ದಾನೆ ಎಂದು ಅವರು ಹೆಮ್ಮೆಪಡುತ್ತಾರೆ" ಎಂದು ಹೇಳಿದರು.

ಆಗಾಗ್ಗೆ ಕೇಳಿಬರುವುದು ನನಗೆ ಕನ್ನಡ ಗೊತ್ತಿಲ್ಲ ಎಂಬ ವಾಕ್ಯವನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತೇವೆ .   ಕಾವೇರಿ ನೀರು ಕುಡಿದ ನಂತರ ಕನ್ನಡ ಬರಲೇ ಬೇಕು ಎಂದು ಆ ವ್ಯಕ್ತಿ ಹೇಳುವುದನ್ನ ವಿಡಿಯೋದಲ್ಲಿ ನೋಡಬಹುದಾಗಿದೆ.

ಟಿಬೆಟಿಯನ್ ವ್ಯಕ್ತಿಯ ಈ ವೀಡಿಯೊ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೇಗವಾಗಿ ವೈರಲ್ ಆಗುತ್ತಿದೆ, ಇದನ್ನು ನೋಡಿದ ನಂತರ ಅನೇಕ ನೆಟಿಜನ್‌ಗಳು ಆ ವ್ಯಕ್ತಿಯ ಮನೋಭಾವವನ್ನು ಶ್ಲಾಘಿಸಿದ್ದಾರೆ