ಪನ್ನಾ: ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಗಣಿಯೊಂದರಲ್ಲಿ ಬುಡಕಟ್ಟು ಮಹಿಳೆಯೊಬ್ಬರಿಗೆ ಲಕ್ಷಾಂತರ ರೂ ಬೆಲೆ ಬಾಳುವ ಮೂರು ವಜ್ರಗಳು ಸಿಕ್ಕಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: 2001ರ ಉದ್ಯಮಿ ಜಯಾ ಶೆಟ್ಟಿ ಕೊಲೆ ಕೇಸ್; ಛೋಟಾ ರಾಜನ್ ಜಾಮೀನು ರದ್ದುಗೊಳಿಸಿದ ಸುಪ್ರೀಂಕೋರ್ಟ್| Bail Cancel
ಇನ್ನೂ ಈ ಬಗ್ಗೆ ವಜ್ರ ಕಚೇರಿಯ ಅಧಿಕಾರಿಯೊಬ್ಬರು ಮಾತನಾಡಿದ್ದು, ಬದ್ವಾರ ಗ್ರಾಮದ ನಿವಾಸಿ ಶಂಬು ಅವರ ಪತ್ನಿ ವಿನಿತಾ ಗೊಂಡ್ ಅವರು ವಜ್ರದ ಸ್ಥಳವನ್ನು ಗುತ್ತಿಗೆಗೆ ತೆಗೆದುಕೊಂಡಿದ್ದಾರೆ. ಅಗೆಯುವಾಗ, ಕ್ರಮವಾಗಿ 0.7 ಕ್ಯಾರೆಟ್, 0.20 ಕ್ಯಾರೆಟ್ ಮತ್ತು 1.48 ಕ್ಯಾರೆಟ್ ತೂಕದ ಮೂರು ಬಣ್ಣವಿಲ್ಲದ ವಜ್ರದ ತುಣುಕುಗಳು ಕಂಡುಬಂದಿವೆ. ಆಕೆಯ ಪತಿ ಮೂರು ವಜ್ರಗಳನ್ನು ಠೇವಣಿ ಇಡಲು ಕಚೇರಿಗೆ ಬಂದರು. ಅವುಗಳನ್ನು ಮುಂಬರುವ ವಜ್ರ ಹರಾಜಿನಲ್ಲಿ ಇಡಲಾಗುವುದು ಎಂದಿದ್ದಾರೆ.
ಈ ವಜ್ರಗಳು 1.48 ಕ್ಯಾರೆಟ್ ಮತ್ತು 20 ಹಾಗೂ 7 ಸೆಂಟ್ಸ್ ತೂಕವನ್ನು ಹೊಂದಿದ್ದು, ಅವುಗಳನ್ನು ಹರಾಜಿಗೆ ಇಡಲಾಗುವುದು. ನಂತರ ಅಲ್ಲಿ ಅವುಗಳ ನಿಖರವಾದ ಬೆಲೆ ಸಿಗಲಿದೆ ಎಂದು ಅಧಿಕಾರಿ ಅನುಪಮ್ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ: ನಿನ್ನೆಯ ಚಾಂಪಿಯನ್ ನಾಳೆಯ ವಿಜೇತನಾಗಿರುವುದಿಲ್ಲ… ಬದಲಾವಣೆಗೆ ತಕ್ಕಂತೆ ಹೂಡಿಕೆ ಇರಲಿ! Thematic mutual funds
(ಏಜೆನ್ಸೀಸ್)
ಈ ಮೂರು ವಜ್ರಗಳಲ್ಲಿ ಒಂದು ರತ್ನದ ಗುಣವನ್ನು ಹೊಂದಿದ್ದು, ಅದು ಅತ್ಯಂತ ಉತ್ತಮ ಗುಣಮಟ್ಟದ್ದಾಗಿದೆ ಎಂದು ಪರಿಗಣಿಸಲಾಗಿದೆ. ಉಳಿದ ಇನ್ನೆರಡು ಕಲ್ಲುಗಳು ಕಡಿಮೆ ಗುಣಮಟ್ಟದ್ದಾಗಿವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಜಿಲ್ಲೆಯ ರಾಜ್‌ಪುರದ ನಿವಾಸಿಯಾದ ವಿನಿತಾ ಗೊಂಡ್ ಎಂಬುವವರು, ಕಚೇರಿಯಿಂದ ಗುತ್ತಿಗೆ ಪಡೆದ ನಂತರ ತನ್ನ ಸಹಚರರೊಂದಿಗೆ ಪಾಟಿ ಪ್ರದೇಶದಲ್ಲಿ ಗಣಿ ಸ್ಥಾಪಿಸಿದ್ದರು ಎಂದು ಸಿಂಗ್ ಹೇಳಿದ್ದಾರೆ ಎನ್ನಲಾಗಿದೆ.