ನ್ಯೂಸ್

ಕಂಟೇನರ್​ಗೆ ಹಿಂಬದಿಯಿಂದ ಕಾರು ಡಿಕ್ಕಿ; ಸ್ಥಳದಲ್ಲೇ ಮೂವರು ಸಾವು

ಕೊಪ್ಪಳ: ಕಂಟೇನರ್​ಗೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿ ಭೀಕರವಾದ ಸಂಭವಿಸಿದೆ. ಕುಷ್ಟಗಿ ಪಟ್ಟಣದ ಹೊರವಲಯದಲ್ಲಿ ನಡೆದ ಈ ಅಪಘಾತದಲ್ಲಿ ಮೂವರ ಸಾವನ್ನಪ್ಪಿದ್ದಾರೆ.

ಪ್ರವೀಣ್ ಕುಮಾರ್ ಭೋಜಪ್ಪ (27), ಸುರೇಶ್ ಈರಸಂಗಪ್ಪ ಹಂಡರಗಲ್ (43) ಹಾಗೂ ಗೌರಮ್ಮ ಹನುಮಗೌಡ ಕನ್ನೂರು (60) ಮೃತರು. ಮೃತರು ಮೂದ್ದೇಬಿಹಾಳ ಮೂಲದವರಾಗಿದ್ದಾರೆ.

ಕಾರ್ ಗುದ್ದಿದ ಸ್ಥಳದಲ್ಲಿಯೇ ಮೂವರು ಸಾವನ್ನಪ್ಪಿದ್ದಾರೆ. ಮೃತ ದೇಹಗಳನ್ನ ಕುಷ್ಟಗಿ ತಾಲೂಕು ಆಸ್ಪತ್ರೆಗರ ರವಾನೆ ಮಾಡಲಾಗಿದೆ. ಇಂದು ಬೆಳಗಿನ ಜಾವ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಕುಷ್ಟಗಿ ಪೊಲೀಸರ ಭೇಟಿ ನೀಡಿದ್ದಾರೆ.