ನ್ಯೂಸ್

ಮೂವರು ವಿದೇಶಿ ಪ್ರಜೆಗಳ ಸೆರೆ

ಗೋವಿಂದರಾಜು ಚಿನ್ನಕುರ್ಚಿ

ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಮೂವರು ವಿದೇಶಿ ಪ್ರಜೆಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಸೂಡಾನ್ ದೇಶದ ಮೊಹಮ್ಮದ್ ಇಬ್ರಾಹಿಂ ಅಹ್ಮದ್, ಖಲೀದ್ ಫಕ್ರೀ ಮೊಹಮ್ಮದ್ ಹಾಗೂ ನೈಜೀರಿಯಾದ ಇಮ್ಯುಯಲ್ ಬಂಧಿತರು. ಬಾಣಸವಾಡಿ ಮತ್ತು ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ನೆಲೆಸಿದ್ದರು ಎಂದು ಪೊಲೀರು ತಿಳಿಸಿದ್ದಾರೆ.

ಶೈಕ್ಷಣಿಕ ವೀಸಾದಡಿ 2019ರಲ್ಲಿ ನೈಜೀರಿಯಾ ಹಾಗೂ 2022ರಲ್ಲಿ ಸೂಡಾನ್ ದೇಶದ ಪ್ರಜೆಗಳು ಭಾರತಕ್ಕೆ ಬಂದಿದ್ದರು. ನಗರದ ಖಾಸಗಿ ಕಾಲೇಜಿನಲ್ಲಿ ಅವರು ಪ್ರವೇಶ ಪಡೆದಿದ್ದರು. ವೀಸಾ ಅವಧಿ ಮುಗಿದ ಬಳಿಕ ಸ್ವದೇಶಕ್ಕೆ ಮರಳಿದ ಆರೋಪಿಗಳು ಅನಧಿಕೃತವಾಗಿ ನೆಲೆಸಿದ್ದರು.

ಈ ಬಗ್ಗೆ ಖಚಿತ ಮಾಹಿತಿ ಪಡೆದು ವಿದೇಶಿ ಪ್ರಜೆಗಳನ್ನು ಸಿಸಿಬಿ ವಶಕ್ಕೆ ಪಡೆದು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ ಹಾಜರುಪಡಿಸಲಾಯಿತು. ಇವರ ಆದೇಶದ ಮೇರೆಗೆ ದೊಡ್ಡ ಗುಬ್ಬಿಯಲ್ಲಿರುವ ಹೋಪ್ ಆಫ್ ಹೋಫ್ ಫಾರಿನರ್ಸ್ ಡಿಟೆನಷನ್ ಸೆಂಟರ್‌ಗೆ ಆರೋಪಿಗಳನ್ನು ಬಿಡಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.