ನ್ಯೂಸ್

ಮೂರು ಕಣ್ಣಿನ ‘ಪವಾಡ ಮಗು’- ಏನಿದರ ಮರ್ಮ?

ಜರ್ಮನಿ: ಮೂರು ಕಣ್ಣುಗಳನ್ನು ಹೊಂದಿರುವ ಮಗುವಿನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸುದ್ದಿ ಮಾಡುತ್ತಿದೆ.

ಇದೊಂದು ಪವಾಡ ಮಗು, ಶಿವನ ಅವತಾರ ಎಂದೆಲ್ಲಾ ಹೇಳಲಾಗುತ್ತಿದೆ. ಪವಾಡ ಮಗುವೊಂದು ಹುಟ್ಟಿಬರಲಿದೆ, ಇದು ಶಿವನ ಅವತಾರ ಎಂದು ಹಿಂದೆಯೇ ಭವಿಷ್ಯ ನುಡಿದಿದ್ದರು. ಆ ಮಗುವೇ ಇದು ಎಂಬ ಸಂದೇಶದೊಂದಿಗೆ ಎಲ್ಲೆಡೆ ಮಗುವಿನ ಫೋಟೋ ಹಾಗೂ ವಿಡಿಯೋ ಹರಿದಾಡುತ್ತಿದೆ.

ಭಾರತದ ಪ್ರಸಿದ್ಧ ಋಷಿಯೊಬ್ಬರು ಕರೊನಾ ವೈರಸ್‌ 2020ರಂದು ಇಡೀ ವಿಶ್ವವನ್ನೇ ಕಾಡಲಿದೆ ಎಂದು ಹೇಳಿದ್ದರು, ಅದೇ ಸನ್ಯಾಸಿ ಇದೇ ವರ್ಷ ಮೂರು ಕಣ್ಣಿನ ಪವಾಡ ಮಗುವೊಂದು ಹುಟ್ಟಲಿದೆ ಎಂದೂ ಹೇಳಿದ್ದರು. ಅವರ ಭವಿಷ್ಯ ನಿಜವಾಗಿದೆ. ದೇವರ ಅಪರಾವತಾರ ಭೂಮಿಯ ಮೇಲೆ ಇಳಿದಿದೆ ಎಂಬೆಲ್ಲಾ ಸಂದೇಶಗಳು ಹರಿದಾಡುತ್ತಿವೆ.

ಮಗು ಜರ್ಮನಿಯಲ್ಲಿ ಜನಿಸಿದ್ದರೂ ಇದರ ಕ್ಲಿಪಿಂಗ್‌ ಮಾತ್ರ ಭಾರತದಲ್ಲಿ ವ್ಯಾಪಕವಾಗಿ ಶೇರ್‌ ಆಗುತ್ತಿದೆ. ಇದಕ್ಕೆ ಕಾರಣ, ಭಾರತದ ಋಷಿ ಹೇಳಿದ ಮಾತು ಎಂಬು ನಂಬಿರುವುದು!

ಹಾಗಿದ್ದರೆ ಇದು ನಿಜವೇ? ವಿಡಿಯೋದಲ್ಲಿ ಕಾಣಿಸುತ್ತಿರುವ ಮಗುವಿಗೆ ನಿಜವಾಗಿಯೂ ಮೂರನೇ ಕಣ್ಣು ಇದೆಯೆ? ಇದರ ಸತ್ಯ ಏನು ಎಂಬುದನ್ನು ಇದೀಗ ತಜ್ಞರು ಬಹಿರಂಗ ಪಡಿಸಿದ್ದಾರೆ.

ಅಸಲಿಗೆ ಈ ಮಗುವಿಗೆ ಇರುವುದು ಎರಡೇ ಕಣ್ಣು. ಹಾಗಿದ್ದರೆ ಮೂರನೇ ಕಣ್ಣಿನಂತೆ ಹಣೆಯ ಮೇಲೆ ಕಾಣಿಸುವುದು ಯಾವುದು ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಇದು ವಿಡಿಯೋ ಎಡಿಟಿಂಗ್ ಸಾಫ್ಟ್‌ವೇರ್ ಮೂಲಕ ತಿರುಚಲಾದ ವಿಡಿಯೋ ಅಷ್ಟೇ.

ಇದನ್ನು ಸೂಕ್ಷ್ಮವಾಗಿ ನೋಡಿದರೆ ತಿಳಿಯುತ್ತದೆ. ಮಗುವಿನ ಎಡಗಡೆಯ ಕಣ್ಣನ್ನು ಕಾಪಿ ಮಾಡಿ ಹಣೆಯ ಮೇಲೆ ಪೇಸ್ಟ್‌ ಮಾಡಲಾಗಿದೆ. ಆದ್ದರಿಂದ ಎಡಗಡೆಯ ಕಣ್ಣಿನ ಗುಡ್ಡೆ ಹೇಗೆ ಹೊರಳುತ್ತದೆಯೋ ಹಾಗೆಯೇ ಹಣೆಯ ಮೇಲಿರುವ ಮತ್ತೊಂದು ಕಣ್ಣಿನ ಗುಡ್ಡೆಯೂ ಹೊರಳುತ್ತದೆ. ಇದನ್ನು ಸಾಫ್ಟ್‌ವೇರ್‌ ಬಲ್ಲ ಯಾರು ಬೇಕಾದರೂ ಸುಲಭದಲ್ಲಿ ಮಾಡಬಹುದು ಎಂದಿದ್ದಾರೆ. (ಏಜೆನ್ಸೀಸ್‌)