ನ್ಯೂಸ್

ಮೂರು ನಡೆಯಲಿರುವ ಬಿಲ್ಡ್​ ಎಕ್ಸಪೋಗೆ ಚಾಲನೆ

ರಾಣೆಬೆನ್ನೂರ: ನಗರದ ಜನತೆಗೆ ಒಂದೇ ಸೂರಿನಡಿ ಗೃಹ ನಿಮಾರ್ಣ ಹಾಗೂ ಒಳಾಂಗಣ ಅಲಂಕಾರಕ್ಕೆ ಬೇಕಾದ ವಸ್ತುಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಫೋರಮ್​ ಆಫ್​ ರಾಣೆಬೆನ್ನೂರ ಸಿವಿಲ್​ ಇಂಜಿನಿಯರ್ಸ್​ (ಫೋರ್ಸ್​) ಹಾಗೂ ಬೆಂಗಳೂರಿನ ಮೆಗಾ ಎಕ್ಸಿಬಿಟರ್ಸ್​ ವತಿಯಿಂದ ನಗರದ ಮೃತ್ಯಂಜಯ ಕಲ್ಯಾಣ ಮಂಟಪದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಬಿಲ್ಡ್​ ಎಕ್ಸ್​ಪೋಗೆ ಶುಕ್ರವಾರ ಚಾಲನೆ ನೀಡಲಾಯಿತು.

ಶಾಸಕ ಪ್ರಕಾಶ ಕೋಳಿವಾಡ ಪ್ರದರ್ಶನಕ್ಕೆ ಚಾಲನೆ ನೀಡಿದರು. ಮೂರು ದಿನಗಳ ಕಾಲ ನಡೆಯುವ ಪ್ರದರ್ಶನದಲ್ಲಿ ಮನೆ ನಿಮಾರ್ಣಕ್ಕೆ ಅಗತ್ಯವಾದ ಎಲ್ಲ ಸಾಂಪ್ರದಾಯಿಕ ಮತ್ತು ವಿನೂತನ ಸಾಮಗ್ರಿಗಳು, ಒಳಾಂಗಣ ಅಲಂಕಾರಕ್ಕೆ ಬೇಕಾಗುವ ವಸ್ತುಗಳು, ಪೀಠೋಪಕರಣಗಳು, ಸುರಕ್ಷತಾ ಅಗತ್ಯತೆಗಳು ಹಾಗೂ ಕಟ್ಟಡ ನಮಾರ್ಣಕ್ಕೆ ಲಭ್ಯವಿರುವ ಸಾಲ ಸೌಲಭ್ಯಗಳು ಸಾರ್ವಜನಿಕರಿಗೆ ಮಾಹಿತಿ ಒದಗಿಸಲಾಗುತ್ತಿದೆ. ಸಾರ್ವಜನಿಕರು ಈ ಅವಕಾಶದ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಫೋರ್ಸ್​ ಅಧ್ಯಕ್ಷ ವೀರೇಶ ಮಕರಿ ಹೇಳಿದರು.

ನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದಶಿರ್ ಬಿ.ಆರ್​. ರವಿಕಿರಣ, ಪ್ರಮುಖರಾದ ವಿ.ಎಫ್​. ಮರಬಸಣ್ಣನವರ, ರಾಕೇಶ ರಡ್ಡೇರ, ಬಸವರಾಜ ಐರಣಿ, ಅಶೋಕ ಯೋಗಿ, ಜಗನ್ನಾಥ ಬಲ್ಲೂರ, ದೇವರಾಜ ಹುಲ್ಮನಿ, ಕೆ.ಎನ್​. ಷಣ್ಮುಖ, ಆನಂದ ಮೆಂಡಾ ಇನ್ನಿತರರು ಉಪಸ್ಥಿತರಿದ್ದರು.