ಮಹಾರಾಷ್ಟ್ರ: ಭಾರತದಲ್ಲಿ ಕರೊನಾ ವೈರಸ್ ಹೆಚ್ಚಾಗಿ ಕಾಣಿಸಿಕೊಂಡಿರುವ ಮಹಾರಾಷ್ಟ್ರದಲ್ಲಿ ಯಾದಗಿರಿ ಕಾರ್ಮಿಕರಿಗೆ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ.
ಕಳೆದ ನಾಲ್ಕು ತಿಂಗಳ ಹಿಂದೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೊಡೇಕಲ, ಅರಕೇರಾ ಕೆ. ಸೇರಿ ಹಲವು ಗ್ರಾಮಗಳಿಂದ ಸುಮಾರು 140 ಕಾರ್ಮಿಕರು ಮಹಾರಾಷ್ಟ್ರಕ್ಕೆ ತೆರಳಿದ್ದಾರೆ. ಆದರೆ ಅಲ್ಲಿ ಈಗ ಕರೊನಾ ವೈರಸ್ ಹೆಚ್ಚುತ್ತಿದೆ. ಈ ಬೆನ್ನಲ್ಲೇ ಎಲ್ಲ ಕಡೆ ಲಾಕ್ಡೌನ್ ಆಗಿದ್ದರಿಂದ ಕಾರ್ಮಿಕರು ಮರಳಿ ಬರಲು ಪರದಾಡುತ್ತಿದ್ದಾರೆ.
ಆದರೆ ಈ ಕಾರ್ಮಿಕರಿಗೆ ಮಹಾರಾಷ್ಟ್ರ ಖೆಡಿ ಗ್ರಾಮಸ್ಥರು ಬೆದರಿಕೆ ಹಾಕುತ್ತಿದ್ದಾರೆ. ನಿಮಗೆಲ್ಲ ಕರೊನಾ ಬಂದಿದೆ. ನೀವು ಕೂಡಲೇ ನಿಮ್ಮ ಊರಿಗೆ ವಾಪಸ್ ಹೋಗದಿದ್ದರೆ, ಗುಡಿಸಲುಗಳನ್ನೆಲ್ಲ ಸುಟ್ಟುಹಾಕುತ್ತೇವೆ ಎಂದು ಹೆದರಿಸುತ್ತಿದ್ದಾರೆ. ಅವರನ್ನು ಬೇರೆ ಕಡೆಗೆ ಹೋಗಲೂ ಬಿಡುತ್ತಿಲ್ಲ ಎನ್ನಲಾಗಿದೆ. ಈ ಬಗ್ಗೆ ಕಾರ್ಮಿಕರು ಅಳಲು ತೋಡಿಕೊಳ್ಳುತ್ತಿದ್ದಾರೆ.