ಮಣಿಪುರ ಸಿಎಂ ಮನೆ  
ನ್ಯೂಸ್

ಅರ್ಧರಾತ್ರೀಲಿ ಮಣಿಪುರ ಸಿಎಂ ಮನೆ ಮೇಲೆ ದಾಳಿ

ಇಂಫಾಲ: ಈಶಾನ್ಯ ರಾಜ್ಯ ಮಣಿಪುರ ಮುಖ್ಯಮಂತ್ರಿ ಎನ್‌. ಬಿರೇನ್‌ ಸಿಂಗ್‌ ಅವರ ಮನೆ ಮೇಲೆ ಗುರುವಾರ ಮಧ್ಯರಾತ್ರಿ ಸಾವಿರಾರು ಪ್ರತಿಭಟನಾಕಾರರು ದಾಳಿಗೆ ಯತ್ನಿಸಿದ್ದು, ಪೊಲೀಸರು ಗಾಳಿಯಲ್ಲಿ ಗುಂಡುಹಾರಿಸಿ ತಡೆದಿದ್ದಾರೆ.

ಗಿರಿಜನ ಮತ್ತು ಗಿರಿಜನೇತರರ ನಡುವೆ ಮೀಸಲಾತಿಗಾಗಿ ಪ್ರಾರಂಭವಾದ ಘರ್ಷಣೆಗಳು ಕೆಲವು ದಿನಗಳಿಂದ ನಿಂತಿದ್ದವಾದರೂ, ಜುಲೈನಲ್ಲಿ ನಾಪತ್ತೆಯಾಗಿದ್ದ ತಮ್ಮ ಸಮುದಾಯದ ಇಬ್ಬರು ಕೊಲೆಗೀಡಾದ ಕಾರಣ ಗಿರಿಜನ ವಿದ್ಯಾರ್ಥಿಗಳು ಮತ್ತೆ ಬೀದಿಗಿಳಿದು ಹಿಂಸಾತ್ಮಕ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ಮುಂದುವರಿದ ಭಾಗವಾಗಿ ಗುರುವಾರ ರಾತ್ರಿ ಮುಖ್ಯಮಂತ್ರಿಯವರಿಗೆ ಸೇರಿದ ಇಂಫಾಲ್​ನನ ಮನೆ ಮೇಲೆ ದಾಳಿ ನಡೆಸಿದ್ದಾರೆ.

ಇದನ್ನೂ ಓದಿ

ಗುಂಪು ಮುಖ್ಯಮಂತ್ರಿಯವರ ಮನೆ ಮೇಲೆ ದಾಳಿ ನಡೆಸಿದಾಗ ಮನೆಯಲ್ಲಿ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅಥವಾ ಅವರ ಕುಟುಂಬದವರು ಅಲ್ಲಿ ಇರಲಿಲ್ಲ. ಮುಖ್ಯಮಂತ್ರಿಯವರು ಇಂಫಾಲ್​ನ ಮಧ್ಯಭಾಗದಲ್ಲಿರುವ ಸರ್ಕಾರದ ಅಧಿಕೃತ ನಿವಾಸದಲ್ಲಿ ವಾಸವಿದ್ದಾರೆ.

ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ನಾಲ್ಕು ತಿಂಗಳ ಹಿಂದೆ ಪ್ರಾರಂಭವಾದ ಹಿಂಸಾತ್ಮಕ ಘಟನೆಗಳಿಗೆ ಕೆಲವು ದಿನಗಳಿಂದ ಬ್ರೇಕ್​ ಬಿದ್ದದ್ದರೂ ಮತ್ತೆ ತಾರಕಕ್ಕೇರುತ್ತಿವೆ. ಈ ನಡುವೆ ಮುತ್ತಿಗೆ ಹಾಕಲು ಯತ್ನಿಸಿದ್ದು, ಸುವ್ಯವಸ್ಥೆ ಕಾಪಾಡಲು ಹೆಚ್ಚುವರಿ ಪಡೆಗಳನ್ನು ಕರೆಸಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಖ್ಯಮಂತ್ರಿ ಎನ್‌. ಬಿರೇನ್‌ ಸಿಂಗ್‌ ಅವರು ಇಂಫಾಲ್‌ನ ಮಧ್ಯಭಾಗದಲ್ಲಿರುವ ಪ್ರತ್ಯೇಕ, ಸುಸಜ್ಜಿತ ಅಧಿಕೃತ ಮನೆಯಲ್ಲಿ ವಾಸಿಸುತ್ತಿದ್ದಾರೆ.
ಮಣಿಪುರದಲ್ಲಿ ಮತ್ತೆ ಹಿಂಸಾಚಾರ ತಲೆದೋರಿರುವುದರಿಂದ ಭದ್ರತೆ ಬಿಗಿಗೊಳಿಸಲಾಗಿದೆ.