Smoke Cigarettes:ಇಟಲಿಯ ಮಿಲನ್ ನಗರ ವಿಶ್ವದ ಫ್ಯಾಷನ್ ನಗರ ಎಂದೇ ಕರೆಯಲಾಗುತ್ತದೆ. ಇಲ್ಲಿ ಸಿಗರೇಟ್ ಸೇದುವುದೆ ಒಂದು ಫ್ಯಾಷನ್.ಇದೀಗ ಈ ನಗರದಲ್ಲಿ ಧೂಮಪಾನ ನಿಯಂತ್ರಣ ಮಾಡುವ ಉದ್ದೇಶದಿಂದ ಇಲ್ಲಿ ಸಿಗರೇಟ್ ಸೇದುವವರು ಜನಸಾಮಾನ್ಯನರಿಂದ 33 ಅಡಿ ಅಂತರ ಕಾಯ್ದುಕೊಳ್ಳಬೇಕು ಎಂಬ ಹೊಸ ಕಾನೂನು ಜಾರಿ ಮಾಡಿದೆ.
ಹೌದು, 1960ರಲ್ಲಿ ಫೆಲಿನಿಯ 'ಲಾ ಡೋಲ್ಸ್ ವೀಟಾ' ಎಂಬ ಚಲನಚಿತ್ರ ಇಟಲಿಯನ್ನು ಧೂಮಪಾನಿಗಳಿಗೆ ಸ್ವರ್ಗವೆಂದು ಚಿತ್ರದಲ್ಲಿ ತೋರಿಸಲಾಗಿತ್ತು. ಈ ಸಿನಿಮಾದಲ್ಲಿ ಸಿಗರೇಟುಗಳನ್ನು ಹೆಚ್ಚಾಗಿ ಗ್ಲಾಮರ್‌ನೊಂದಿಗೆ ಸಂಯೋಜಿಸಲಾಗಿದೆ. ಅಂದರೆ ಇಟಲಿ ಮತ್ತು ಮಿಲನ್ನಲ್ಲಿ ಸಿಗರೇಟ್ ಎಂದರೆ ಅಷ್ಟು ಹುಚ್ಚಿದೆ ಎಂದು ತೋರಿಸುತ್ತದೆ. ಈಗ ಧೂಮಪಾನ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕಾನೂನು ಕ್ರಮ ಜಾರಿ ಮಾಡಿದ್ದು, ಇದೀಗ ಏಕಾಏಕಿ ಅಲ್ಲಿನ ಸರ್ಕಾರದ ವಿರುದ್ಧ ಪ್ರಶ್ನೆಗಳನ್ನೆತ್ತಿದ್ದಾರೆ.
ಸಾರ್ವಜನಿಕ ಪ್ರದೇಶಗಳಲ್ಲಿ ಸಿಗರೇಟ್ ಸೇದುವಂತಿಲ್ಲ. ಒಂದು ವೇಳೆ ಸೇದಬೇಕು ಎಂದಿನಿಸಿದರೆ ಜನಸಾಮಾನ್ಯರಿಂದ ಅಂದ್ರೆ ಒಬ್ಬ ವ್ಯಕ್ತಿಯಿಂದ 33 ಅಡಿ ದೂರದಲ್ಲಿ ಧೂಮಪಾನ ಮಾಡಬೇಕು. ತನ್ನ ಸುತ್ತಮುತ್ತಲು ಯಾರು ಇಲ್ಲದಂತೆ ಎಚ್ಚರವಹಿಸಬೇಕು. ಇಲ್ಲವಾದರೆ ಕಾನೂನಿನ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಸರ್ಕಾರ ತನ್ನ ಆದೇಶದಲ್ಲಿ ಹೊರಡಿಸಿದೆ. ಈ ಮೂಲಕ ಧೂಮಪಾನ ಮಾಡದವರು ಸಹ ಧೂಮಪಾನ ತಪ್ಪಿಸಿದಂತಾಗುತ್ತದೆ ಎಂದು ಮಿಲನ್ ನಗರದ ಉಪ ಮೇಯರ್ ಅನ್ನಾ ಸ್ಕ್ಯಾವುಝೋ ಹೇಳಿದ್ದಾರೆ.
ಇದನ್ನೂ ಓದಿ:ನಟನ ವಿರುದ್ಧ ಅರೆಸ್ಟ್ ವಾರಂಟ್ ಜಾರಿ ಮಾಡಿದ ಕೋರ್ಟ್: ಬಂಧನ ಭೀತಿಯಲ್ಲಿ ಸೋನುಸೂದ್: ಏನಿದು ಪ್ರಕರಣ? | Sonu Sood
ಮಿಲನ್ ಫ್ಯಾಷನ್ ಮತ್ತು ಡಿಸೈನರ್ ವೇಷಭೂಷಣಗಳಿಗೆ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಹೀಗಾಗಿ, ಸರ್ಕಾರದ ಈ ನಿರ್ಧಾರವನ್ನು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಮತ್ತು ಮಿಲನ್ ನಗರದ ಜನರು ಟೀಕಿಸಿದ್ದಾರೆ.(ಏಜೆನ್ಸೀಸ್)