PM ಮೋದಿ: "ನಮ್ಮ ಸಹೋದರಿಯರ ಹಣೆಯಿಂದ ಸಿಂಧೂರವನ್ನು ಅಳಿಸಲು ಧೈರ್ಯ ಮಾಡುವವರ ನಿರ್ಮೂಲನೆ ಖಚಿತ" ಎಂದು ಪ್ರಧಾನಿ ನರೆಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ.
ಇಂದು ಸೋಮವಾರ (ಮೇ.26) ಗುಜರಾತ್‌ನ ದಾಹೋದ್‌ನಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿದ ಸಶಸ್ತ್ರ ಪಡೆಗಳ ಕ್ರಮವನ್ನು ಮತ್ತೊಮ್ಮೆ ಶ್ಲಾಘಿಸಿ, ಪಾಕಿಸ್ತಾನದ 'ಧೈರ್ಯ'ವನ್ನು ಸೋಲಿಸಿ ಭಾರತದ 'ವಿಕಸಿತ ಭಾರತ'ದ ಬದ್ಧತೆಯನ್ನು ಪುನರುಚ್ಛರಿಸಿದರು.
ಇದನ್ನೂ ಓದಿ: ಪಾಕಿಸ್ತಾನ ಪರ ಬೇಹುಗಾರಿಕೆ ಆರೋಪ;ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾಗೆ 14 ದಿನ ನ್ಯಾಯಾಂಗ ಬಂಧನ| Jyothi malhotra
'ವಿಭಜನೆಯ ನಂತರ ಅಸ್ತಿತ್ವಕ್ಕೆ ಬಂದ ಪಾಕಿಸ್ತಾನವು ಭಾರತದ ಮೇಲೆ ನಿರಂತರವಾಗಿ ದ್ವೇಷ ಸಾಧಿಸುತ್ತಲೇ ಇದೆ. ಆದರೆ, ನಮ್ಮ ದೇಶದ ಪ್ರಮುಖ ಗುರಿಯೆಂದರೆ ಬಡತನ ನಿರ್ಮೂಲನೆ, ಆರ್ಥಿಕ ಅಭಿವೃದ್ಧಿ ಸಾಧಿಸುವುದು ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವುದಾಗಿ' ಎಂದು ಅವರು ಹೇಳಿದ್ದಾರೆ.
" ಆಪರೇಷನ್ ಸಿಂಧೂರ ಕೇವಲ ಮಿಲಿಟರಿ ಕಾರ್ಯಾಚರಣೆಯಲ್ಲ - ಇದು ನಮ್ಮ ಭಾರತೀಯ ಮೌಲ್ಯಗಳ ಪ್ರತಿಬಿಂಬ ಮತ್ತು ನಮ್ಮ ಹೃದಯಕ್ಕೆ ಹತ್ತಿರವಿರುವ ಆಳವಾದ ಭಾವನೆಗಳ ಪ್ರತಿಬಿಂಬ," ಎಂದು ಅವರು ತಿಳಿಸಿದರು.
ದೇಶದಾದ್ಯಂತ ವಂದೇ ಭಾರತ್ ರೈಲುಗಳು 70 ಮಾರ್ಗಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಹಿಂದುಳಿದ ಪ್ರದೇಶಗಳಲ್ಲಿ ಅಭಿವೃದ್ಧಿ ಸಾಧಿಸುವುದು ನಮ್ಮ ಸರ್ಕಾರದ ಪ್ರಮುಖ ನೀತಿಯಾಗಿದೆ. ಪ್ರಗತಿಗೆ ಬೇಕಾದ ಎಲ್ಲಾ ಸಾಮಗ್ರಿಗಳನ್ನು ಭಾರತದಲ್ಲಿಯೇ ಉತ್ಪಾದಿಸಬೇಕು ಎಂದು ಮೋದಿ ಕರೆ ನೀಡಿದ್ದಾರೆ.
ಹೋಳಿ, ದೀಪಾವಳಿ ಮತ್ತು ಗಣೇಶ ಪೂಜೆಯಂತಹ ಹಬ್ಬಗಳ ಸಮಯದಲ್ಲಿ ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಖರೀದಿಸಿ ಬಳಸುವಂತೆ ಅವರು ಜನರನ್ನು ಒತ್ತಾಯಿಸಿದರು.
ಪ್ರಧಾನಿ ಮೋದಿ ಇಂದಿನಿಂದ ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿದ್ದಾರೆ. ಇದಕ್ಕೂ ಮುನ್ನ ಅವರು ದಹೋದ್‌ನಲ್ಲಿ ಭಾರತೀಯ ರೈಲ್ವೆಯ ಲೋಕೋಮೋಟಿವ್ ಉತ್ಪಾದನಾ ಘಟಕವನ್ನು ಉದ್ಘಾಟಿಸಿದರು, ಇದು ದೇಶೀಯ ಉದ್ದೇಶಗಳಿಗಾಗಿ ಮತ್ತು ರಫ್ತಿಗಾಗಿ 9000 HP ಯ ವಿದ್ಯುತ್ ಲೋಕೋಮೋಟಿವ್‌ಗಳನ್ನು ಉತ್ಪಾದಿಸುತ್ತದೆ. ಲೋಕೋಮೋಟಿವ್‌ಗಳು ಭಾರತೀಯ ರೈಲ್ವೆಯ ಸರಕು ಸಾಗಣೆ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಘಟಕದಿಂದ ತಯಾರಿಸಲ್ಪಟ್ಟ ಮೊದಲ ವಿದ್ಯುತ್ ಲೋಕೋಮೋಟಿವ್‌ಗೆ ಪ್ರಧಾನಿ ಮೋದಿ ಇಂದು ಚಾಲನೆ ನೀಡಿದರು. (ಏಜೆನ್ಸೀಸ್)