ನ್ಯೂಸ್

ಭಾರತದಲ್ಲಿ ಹುಟ್ಟಿದವರೆಲ್ಲರೂ ಹಿಂದೂ: ಕೇರಳ ರಾಜ್ಯಪಾಲ ಅರಿಫ್​ ಮೊಹಮದ್ ಖಾನ್​

ಕೊಚ್ಚಿ: ಹಿಂದೂ ವಿಚಾರವಾಗಿ ಆಗಾಗ ಧಾರ್ಮಿಕ ಸಂಘರ್ಷದ ಮಾತುಗಳು ಕೇಳಿ ಬರುತ್ತಿರುತ್ತವೆ. ಅದೇ ರೀತಿ ಇದೀಗ ವಿವಾದಾತ್ಮಕ ಎನಿಸುವಂಥ ಹೇಳಿಕೆಯೊಂದು ಹೊರಬಿದ್ದಿದೆ. ಕೇರಳದ ರಾಜ್ಯಪಾಲ ಅರಿಫ್ ಮೊಹಮದ್​ ಖಾನ್ ಈ ಹೇಳಿಕೆ ನೀಡಿದ್ದಾರೆ.

ಹಿಂದೂ ಎನ್ನುವ ಪದ ಭೌಗೋಳಿಕವಾದುದು. ಹೀಗಾಗಿ ಯಾರು ಭಾರತದಲ್ಲಿ ಹುಟ್ಟಿರುತ್ತಾರೋ, ಭಾರತದಲ್ಲೇ ನೀರು ಆಹಾರ ಸೇವಿಸಿ ಬೆಳೆದಿರುತ್ತಾರೋ ಅಂಥವರನ್ನೆಲ್ಲ ಹಿಂದೂ ಎಂದೇ ಕರೆಯಬೇಕು ಎಂಬುದಾಗಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಉತ್ತರ ಅಮೆರಿಕದಲ್ಲಿ ನೆಲೆಸಿರುವ ಮಲಯಾಳಿ ಹಿಂದೂಗಳು ತಿರುವನಂತಪುರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹಿಂದೂ ಸಮಾವೇಶವನ್ನು ಉದ್ಘಾಟಿಸಿ ಅರಿಫ್ ಮೊಹಮದ್ ಖಾನ್ ಈ ಹೇಳಿಕೆ ನೀಡಿದ್ದರು.