ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಜೈವಿಕ ತಂತ್ರಜ್ಞಾನ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಸ್ವಾಯತ್ತ ಸಂಸ್ಥೆಯಾದ, ಫರೀದಾಬಾದ್ನ ಟ್ರಾನ್ಸ್ಲೇಷನಲ್ ಹೆಲ್ತ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಇನ್ಸ್ಟಿಟ್ಯೂಟ್ನಲ್ಲಿ (ಟಿಎಚ್ಎಸ್ಟಿಐ) ಸೈಂಟಿಸ್ಟ್ ಸಿ (ಕ್ಲಿನಿಕಲ್) ಹುದ್ದೆ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಎಂಬಿಬಿಎಸ್/ ಬಿಡಿಎಸ್ /ಬಿವಿಎಸ್ಸಿ ಬೇಸಿಕ್ ಪದವಿ ಜತೆಗೆ ಮೆಡಿಸಿನ್ /ಲೈಫ್ ಸೈನ್ಸಸ್ ವಿಷಯದಲ್ಲಿ ಎಂಡಿ/ಪಿಎಚ್.ಡಿ ಆಗಿರಬೇಕು. ಕ್ಲಿನಿಕಲ್ ಎಪಿಡೆಮಿಯಾಲಜಿ/ ಡೇಟಾ ಸೈನ್ಸ್/ ಇಮ್ಯೂನೊಲಜಿ/ಜಿನೆಟಿಕ್ಸ್ / ಬಯಾಲಜಿ/ ಬಯೋಮೆಡಿಕಲ್ ಇಂಜಿನಿಯರಿಂಗ್ನಲ್ಲಿ ಕನಿಷ್ಠ ಒಂದು ವರ್ಷ ಕಾರ್ಯಾನುಭವ ಹೊಂದಿರಬೇಕು. ಸಂಶೋಧನಾ ವಿಧಾನ ಹಾಗೂ ಪ್ರಮಾಣಾತ್ಮಕ ವಿಧಾನ ತಿಳಿವಳಿಕೆ ಇರಬೇಕು.
ಗರಿಷ್ಠ 50 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ, ಅಂಗವಿಕಲ ಅಭ್ಯಥಿರ್ಗಳಿಗೆ 10 ವರ್ಷ ವಯೋ ಸಡಿಲಿಕೆ ಇದೆ. ಮಾಸಿಕ 1,26,276 ರೂಪಾಯಿ ವೇತನ ನಿಗದಿಪಡಿಸಲಾಗಿದೆ. ಸಾಮಾನ್ಯ, ಇಡಬ್ಲ್ಯುಎಸ್, ಒಬಿಸಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 500 ಇರುತ್ತದೆ. ಆನ್ಲೈನ್ ಮೂಲಕ ಶುಲ್ಕ ಪಾವತಿಸಬೇಕು. ಎಸ್ಸಿ, ಎಸ್ಟಿ, ಅಂಗವಿಕಲ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು https://bit.ly/33QQOVf ನಲ್ಲಿರುವ ಮಾಹಿತಿ ಅನುಸಾರ ಏಪ್ರಿಲ್ 16 ರೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ https://thsti.in