ನ್ಯೂಸ್

ಈ ವಾರ ಹೊರಬೀಳಲಿದೆ ಸ್ಟಾರ್​​ ನಟರ ಬಹುನಿರೀಕ್ಷಿತ ಸಿನಿಮಾಗಳ ಮಾಹಿತಿ!

ಮುಂಬೈ: ಭಾರತೀಯ ಚಿತ್ರರಂಗದಲ್ಲಿ ಈ ವಾರ ಸ್ಟಾರ್​ ನಟರ ಬಹುನಿರೀಕ್ಷಿತ ಸಿನಿಮಾಗಳ ಹೊಸ ಮಾಹಿತಿಗಳು ಪ್ರೇಕ್ಷಕರಿಗೆ ತಲುಪಲಿದೆ.

ಸ್ಟಾರ್​ ನಟರ ಪೈಕಿ ರಾಷ್ಟ್ರೀಯ ಪ್ರಶಸ್ತಿ ವಿಜೇತ, ಟಾಲಿವುಡ್​ನ ಸ್ಟೈಲಿಶ್ ಸ್ಟಾರ್, ನಟ​ ಅಲ್ಲು ಅರ್ಜುನ್​ ಅಭಿನಯದ 'ಪುಷ್ಪಾ 2: ದಿ ರೂಲ್'​ ಚಿತ್ರ ಬಿಡುಗಡೆಗೂ ಮುನ್ನವೇ ಭಾರೀ ಸದ್ದು ಮಾಡುತ್ತಿದೆ. 2024 ರಲ್ಲಿ ಸಿನಿಮಾ ಬಿಡುಗಡೆಯಾಗಲಿದ್ದು, ಸದ್ಯ ಚಿತ್ರದ ಸ್ಪೆಷಲ್​ ಸಾಂಗ್​ನ ಚಿತ್ರೀಕರಣ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ ಎಂಬುದು ಇತ್ತೀಚಿನ ವರದಿಯಲ್ಲಿ ತಿಳಿದುಬಂದಿದೆ. ಈ ವಾರ ಚಿತ್ರ ತಯಾರಕರಿಂದ ಸಿನಿಮಾದ ಬಗ್ಗೆ ಹೊಸ ಮಾಹಿತಿಯನ್ನು ನಿರೀಕ್ಷಿಸಬಹುದಾಗಿದೆ.

ಇದರ ಬೆನ್ನಲ್ಲೇ ತೆಲುಗು ಚಿತ್ರರಂಗದ ಹಿರಿಯ ನಟ, ಬಾಲಯ್ಯ ಎಂದೇ ಖ್ಯಾತರಾಗಿರುವ ನಂದಮೂರಿ ಬಾಲಕೃಷ್ಣ ಅಭಿನಯದ 'ಭಗವಂತ ಕೇಸರಿ' ಚಿತ್ರದ ಫಸ್ಟ್​ ಸಾಂಗ್​ ಕೂಡ ಈ ವಾರ ರಿಲೀಸ್​ ಆಗಲಿದೆ. ಮತ್ತು ಚಿತ್ರತಂಡದಿಂದ ಹೊಸ ಅಪ್ಡೇಟ್​ ಕೂಡ ದೊರೆಯಲಿದೆ ಎಂದು ನಿರೀಕ್ಷಿಸಲಾಗಿದೆ.

ಟಾಲಿವುಡ್​ನ ರೆಬೆಲ್​ ಸ್ಟಾರ್​ ಪ್ರಭಾಸ್​ ಮತ್ತು ಕನ್ನಡ ಚಿತ್ರರಂಗದ ಸ್ಟಾರ್​ ನಿರ್ದೇಶಕ ಪ್ರಶಾಂತ್​ ನೀಲ್​ ಕಾಂಬಿನೇಷ್​ನಲ್ಲಿ ತೆರೆ ಮೇಲೆ ಅಪ್ಪಳಿಸಲು ಸಜ್ಜಾಗಿರುವ ಪ್ಯಾನ್​ ಇಂಡಿಯಾ ಚಿತ್ರ ಸಲಾರ್​ ಬಗ್ಗೆ ಕೂಡ ಹೊಸ ಅಪ್ಡೇಟ್​ ಲಭಿಸಲಿದೆ. ಚಿತ್ರದ ಕುರಿತು ಹೆಚ್ಚಿನ ಮಾಹಿತಿ ತಿಳಿಯಲು ಪ್ರಭಾಸ್​ ಫ್ಯಾನ್ಸ್ ಇದೀಗ ತೀವ್ರ ಕಾತರದಿಂದ ಕಾಯುತ್ತಿದ್ದಾರೆ,(ಏಜೆನ್ಸೀಸ್).