ನ್ಯೂಸ್

ವಿಮಾನ ಹತ್ತಲ್ಲ, ಹೋಟೆಲ್ ಬುಕ್ ಮಾಡಲ್ಲ…ಆದ್ರೂ ಫ್ರೀಯಾಗಿ ವರ್ಲ್ಡ್ ಟೂರ್ ಮಾಡ್ತಾಳೆ ಈ ಯುವತಿ!

ನವದೆಹಲಿ: ಪ್ರಪಂಚದಾದ್ಯಂತ ಬಹುತೇಕ ಜನರು ಪ್ರವಾಸಕ್ಕೆ ತೆರಳಲು ಇಷ್ಟಪಡುತ್ತಾರೆ. ಆದರೆ ಅವರಲ್ಲಿ ಕೆಲವರು ಖರ್ಚು ವೆಚ್ಚ ನೋಡಿಕೊಂಡು ಹಿಂದೇಟು ಹಾಕುತ್ತಾರೆ. ಆದರೆ ಇಲ್ಲೊಬ್ಬರು ಮಹಿಳೆ ಜಗತ್ತನ್ನು ಸುತ್ತುತ್ತಿದ್ದಾರೆ. ಅದೂ ಉಚಿತವಾಗಿ. ಹಾಗಾದರೆ ವರ್ಲ್ಡ್ ಟೂರ್ ಮಾಡುತ್ತಿರುವ ಈಕೆ ಅದೆಷ್ಟು ಶ್ರೀಮಂತಳಿರಬಹುದು?, ಈಕೆಯ ಹಿನ್ನೆಲೆ ಏನು? ಎಂಬ ಕುತೂಹಲ ಹೆಚ್ಚುತ್ತಿದ್ದರೆ ಮುಂದೆ ಓದಿ....

ಪ್ರವಾಸದ ಖರ್ಚು ಭರಿಸುವವರು ಯಾರು?
ಲಂಡನ್‌ ನಿವಾಸಿಯಾದ 30 ವರ್ಷದ ಮೆಲ್ಲಿ ಮೈಯರ್ಸ್ ತಮ್ಮ ಹೆಚ್ಚಿನ ಸಮಯವನ್ನು ಪ್ರಯಾಣಿಸಲು ಮತ್ತು ಜಗತ್ತನ್ನು ನೋಡುವುದರಲ್ಲಿ ಕಳೆಯುತ್ತಾರೆ. ಇಂಟ್ರೆಸ್ಟಿಂಗ್ ವಿಚಾರವೆಂದರೆ ಈಕೆ ಈ ಸ್ಥಳಗಳನ್ನು ನೋಡಲು ವಿಮಾನದಲ್ಲಿ ಹೋಗುವುದಾಗಲಿ ಅಥವಾ ಹೋಟೆಲ್ ಬುಕಿಂಗ್‌ ಮಾಡುವುದಾಗಲಿ ಮಾಡುವುದಿಲ್ಲ. ಹೀಗಿರುವಾಗ ಈಕೆಯ ಪ್ರವಾಸದ ಖರ್ಚು ಯಾರು ಭರಿಸುತ್ತಾರೆ ಎಂಬ ಪ್ರಶ್ನೆ ಮೂಡುತ್ತದೆ.

ಈವೆಂಟ್ ಮ್ಯಾನೇಜರ್ ಆಗಿದ್ದ ಮೆಲ್ಲಿ
ಡೈಲಿ ಸ್ಪಾರ್‌ನ ಸುದ್ದಿ ಪ್ರಕಾರ, ಕೆಲವು ಸಮಯದ ಹಿಂದೆ ಮೆಲ್ಲಿ ಮೈಯರ್ಸ್ ಹಿಲ್ಸನ್ ಹೋಟೆಲ್​​​ನಲ್ಲಿ ಈವೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಕೋವಿಡ್ ಪರಿಣಾಮ ಹೋಟೆಲ್ 2 ವರ್ಷಗಳಿಂದ ಸಾಕಷ್ಟು ಸಂಕಷ್ಟ ಅನುಭವಿಸಿತು. ಇತರರಂತೆ ಮೆಲ್ಲಿ ಕೂಡ ತನ್ನ ಕೆಲಸ ಕಳೆದುಕೊಂಡಳು. ಇಂತಹ ಸಮಯದಲ್ಲಿ ಮೆಲ್ಲಿ ನೋಡಿದ ಅಕೆಯ ಸ್ನೇಹಿತರು ಸೋಶಿಯಲ್ ಮೀಡಿಯಾ ಬಗ್ಗೆ ಸಲಹೆ ನೀಡಿದರು. ಕೊನೆಗೆ ಮೆಲ್ಲಿ ಸೋಶಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟರು.

ಉಚಿತ ಕ್ರೂಸ್ ಟ್ರಿಪ್​​​
ಮೆಲ್ಲಿ ತನ್ನ ಬಿಡುವಿನ ವೇಳೆಯನ್ನು ಉಪಯೋಗಿಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾದರು. ಆಗ ಅನುಯಾಯಿಗಳು ಹೆಚ್ಚಾಗತೊಡಗಿದರು. Instagram ನಲ್ಲಿ ಮೆಲ್ಲಿ ಸುಮಾರು 66,000 ಅನುಯಾಯಿಗಳನ್ನು ಹೊಂದಿದ್ದಾರೆ. ಅಷ್ಟೇ ಅಲ್ಲ, ಅತ್ಯುತ್ತಮ ಕಂಟೆಂಟ್ ಕ್ರಿಯೇಟರ್ 2022 ವಿಜೇತರಾಗಿ, ಉಚಿತ ಕ್ರೂಸ್ ಟ್ರಿಪ್​​​ ಪಡೆದರು.

ಟೂರ್ ಆಪರೇಟರ್‌ಗಳ ಸಹಯೋಗ
ಸೋಶಿಯಲ್ ಮೀಡಿಯಾ ಸ್ಟಾರ್ ಆಗಿರುವ ಮೆಲ್ಲಿ ಈಗ ಟ್ರೆಂಡಿಂಗ್ ಟ್ರಾವೆಲ್ ಮತ್ತು ಟೂರ್ ಆಪರೇಟರ್‌ಗಳ ಸಹಕಾರದೊಂದಿಗೆ ಪ್ರವಾಸ ಮಾಡುತ್ತಾರೆ. ಉದಾಹರಣೆಗೆ, ಬಾರ್ಸಿಲೋನಾ ಮತ್ತು ಐಬಿಜಾದಂತಹ ಸ್ಥಳಗಳಲ್ಲಿ 7-ದಿನದ ಮೆಡಿಟರೇನಿಯನ್ ಕ್ರೂಸ್​​ನಲ್ಲಿ ಅವರನ್ನು ಕರೆದೊಯ್ಯಲಾಯಿತು.
ವರ್ಜಿನ್ ವೊಯೇಜನ್ ಪ್ರವಾಸದಲ್ಲಿ ಕಾಂಪ್ಲಿಮೆಂಟರಿ ಪ್ರಯಾಣದ ಪ್ರಸ್ತಾಪದ ಬಗ್ಗೆ ಮೆಲ್ಲಿಗೆ ಕೇಳಿದಾಗ, "ನಾನು ತುಂಬಾ ಸಂತೋಷಪಟ್ಟೆ, ಪ್ರಯಾಣವು ಅದ್ಭುತವಾಗಿದೆ, ಹಾಗಾಗಿ ಟ್ರೆಂಡಿಂಗ್ ಟ್ರಾವೆಲ್‌ ಜೊತೆಗೆ ಕಂಟೆಂಟ್ ರಚನೆಕಾರರಾಗಿ ಕೆಲಸ ಮಾಡಲು ನನಗೆ ಸಂತೋಷವಾಗಿದೆ. ವಿಶ್ವ ಪರ್ಯಟನೆ ಆರಂಭಿಸಿದಾಗಿನಿಂದ ಕಳೆದ 2 ವರ್ಷಗಳಲ್ಲಿ 52.38 ಲಕ್ಷ ರೂಪಾಯಿ ಉಳಿತಾಯವಾಗಿದೆ'' ಎನ್ನುತ್ತಾರೆ ಮೆಲ್ಲಿ.