ನ್ಯೂಸ್

ಈ ಬಾರಿಯ ಸಿಇಟಿ ಅರ್ಜಿ ಸಲ್ಲಿಕೆ: ಎಐ ಆಧಾರಿತ

ಎನ್.ಎಲ್. ಶಿವಮಾದು

ಬೆಂಗಳೂರು: ಇಂಜಿನಿಯರಿಂಗ್ ಸೇರಿ ವಿವಿಧ ವೃತ್ತಿಪರ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ 2025ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಗೆ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಗುರುವಾರದಿಂದ ಆರಂಭಿಸಿದೆ. ಮೊದಲ ದಿನ 3,738 ಅರ್ಜಿಗಳು ಸಲ್ಲಿಕೆಯಾಗಿವೆ.

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಾಗೂ ಅವರ ಮಾಹಿತಿ ದುಬರ್ಳಕೆ ತಡೆಯುವ ಉದ್ದೇಶದಿಂದ ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿದೆ. ಪ್ರತಿಹಂತದಲ್ಲಿಯೂ ಒಟಿಪಿ ಹಾಗೂ ಮುಖ ಚಹರೆಯ ದೃಢೀಕರಣದ ನಂತರವೇ ಅರ್ಜಿಗೆ ಲಾಗಿನ್ ಮಾಡಬೇಕಾಗುತ್ತದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.

ಅಭ್ಯರ್ಥಿಗಳು ವೆಬ್‌ಸೈಟ್‌ನಲ್ಲಿ ಇರುವ ಮಾಹಿತಿ ಪುಸ್ತಕವನ್ನು ಓದಿ, ಮನನ ಮಾಡಿಕೊಂಡ ನಂತರವೇ ಭರ್ತಿ ಮಾಡಬೇಕು. ಂಜಿನಿಯರಿಂಗ್ ಅಲ್ಲದೆ, ನೀಟ್ (ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್ ಕೋರ್ಸ್‌ಗಳ) ಮೂಲಕ ಪ್ರವೇಶ ಬಯಸುವ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬೇಕು ಎಂದು ಅವರು ಹೇಳಿದರು.

ಮೊದಲ ದಿನದ ಅರ್ಜಿ ಸಲ್ಲಿಕೆಯು ಯಶಸ್ವಿಯಾಗಿ ಆರಂಭವಾಗಿದೆ ಎಂದು ತಿಳಿಸಿದ್ದಾರೆ.

ಅರ್ಜಿ ಸಲ್ಲಿಸುವ ವೇಳೆ ಈ ಅಂಶಗಳನ್ನು ಗಮನಿಸಿ

  •  ಅರ್ಜಿ ಸಲ್ಲಿಸುವ ವೇಳೆ ಇತ್ತೀಚಿನ ಭಾವಚಿತ್ರ ಹಾಗೂ ಸಹಿ ಜೆಪಿಜಿ ರೂಪದಲ್ಲಿರಬೇಕು. ಬೇರೆ ಮಾದರಿಯ ಪ್ರಮಾಣ ಪತ್ರ ಅಥವಾ ದಾಖಲೆಗಳನ್ನು ಪರಿಗಣಿಸುವುದಿಲ್ಲ
  •  ಅರ್ಜಿ ಭರ್ತಿ ಮಾಡುವಾಗ ಅಭ್ಯರ್ಥಿಗಳು ಯಾವ ಮೀಸಲಾತಿಗಳನ್ನು ಪಡೆಯಲು ಬಯಸುತ್ತೀರಿ ಎಂಬ ಮಾಹಿತಿ ಮತ್ತು ಆರ್.ಡಿ. ಸಂಖ್ಯೆಯನ್ನು ತಪ್ಪದೇ ನಮೂದಿಸಬೇಕು.
  •  ಅರ್ಜಿ ಭರ್ತಿಗೂ ಮುನ್ನ ಎಸ್‌ಎಸ್‌ಎಲ್‌ಸಿ ಅಂಕ ಪಟ್ಟಿ, ಮೀಸಲಾತಿ ಪ್ರಮಾಣ ಪತ್ರಗಳ ಪ್ರತಿಗಳನ್ನು ತಮ್ಮೊಡನೆ ಇಟ್ಟುಕೊಂಡಿರಬೇಕು.
  •  ಅಭ್ಯರ್ಥಿಗಳು ಪ್ರಾಧಿಕಾರದ ವೆಬ್ಸೈಟ್ ಠಿಠಿ://್ಚಛಿಠಿಟ್ಞ್ಝಜ್ಞಿಛಿಚ್ಟ್ಞಠಿಜಟಜ್ಞಿ/ಛಿ/ ಗೆ ಭೇಟಿ ನೀಡಿ, ಖಾಲಿ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ತಮ್ಮ ಪಾಲಕರೊಂದಿಗೆ ಸಮಾಲೋಚಿಸಿದ ನಂತರ ಭರ್ತಿ ಮಾಡಬೇಕು.
  •  ಅರ್ಜಿ ಅಂತಿಮಗೊಳಿಸುವುದಕ್ಕೂ ಮುನ್ನ ಪ್ರಿಂಟ್ ಔಟ್ ತೆಗೆದುಕೊಂಡು ಒಮ್ಮೆ ಓದಬೇಕು. - ಸಂಪೂರ್ಣವಾದ ಮಾಹಿತಿಗೆ (ಅರ್ಹತೆ ಷರತ್ತುಗಳು, ಶೈಕ್ಷಣಿಕ ಮಾನದಂಡಗಳು, ಇತ್ಯಾದಿ) ಅಭ್ಯರ್ಥಿಗಳು ಪ್ರಾಧಿಕಾರದ ವೆಬ್ಸೈಟಿನಲ್ಲಿ ಪ್ರಕಟಿಸಿರುವ ಇ-ಮಾಹಿತಿ ಪುಸ್ತಕವನ್ನು ಓದಿಕೊಳ್ಳಬೇಕು