ನ್ಯೂಸ್

ಪ್ರೇಮಿಗಳಿಗಾಗಿ 2 ದಿನ ಸಂಬಳ ಸಹಿತ ರಜೆ ಘೋಷಿಸಿದ ಕಂಪನಿ

ಥೈಲ್ಯಾಂಡ್​: ಡೇಟಿಂಗ್ ಸಂಸ್ಕೃತಿ ಭಾರತಕ್ಕಿಂತ ವಿದೇಶಗಳಲ್ಲಿ ಸಾಮಾನ್ಯವಾಗಿದೆ. ಥೈಲ್ಯಾಂಡ್‌ನ ಕಂಪನಿಯೊಂದು ತನ್ನ ಸಿಬ್ಬಂದಿಗಾಗಿಯೇ ವಿನೂತನವಾಗಿ ಪ್ಲಾನ್​ವೊಂದು ಜಾರಿ ಮಾಡಿದೆ.

ಥೈಲ್ಯಾಂಡ್ ಮೂಲದ ಮಾರ್ಕೆಟಿಂಗ್ ಏಜೆನ್ಸಿ ವೈಟ್‌ಲೈನ್ ಗ್ರೂಪ್ ತನ್ನ ಉದ್ಯೋಗಿಗಳಿಗೆ ‘ಟಿಂಡರ್ ಲೀವ್’ ಘೋಷಿಸಿದೆ. 6 ತಿಂಗಳೊಮ್ಮೆ ಉದ್ಯೋಗಿಗಳಿಗೆ ತಮ್ಮ ಗೆಳತಿಯರೊಂದಿಗೆ ಡೇಟ್ ಮಾಡಲು ವೇತನ ಸಹಿತ ರಜೆ ನೀಡಲಾಗುತ್ತಿದೆ ಎಂದು ಅದು ಹೇಳಿದೆ.

ಉದ್ಯೋಗಿಗಳು ಜುಲೈ ಮತ್ತು ಡಿಸೆಂಬರ್ ನಡುವೆ ಯಾವುದೇ ಸಮಯದಲ್ಲಿ ಈ ರಜೆಗಳನ್ನು ಬಳಸಬಹುದು.ನೌಕರರ ಕಲ್ಯಾಣಕ್ಕಾಗಿ ಈ ಹೊಸ ‘ಟಿಂಡರ್ ಲೀವ್’ ಜಾರಿ ಮಾಡಿದೆ. ಆದರೆ, ಟಿಂಡರ್ ಲೀವ್ ಹೆಸರಿನಲ್ಲಿ ಎಷ್ಟು ದಿನ ರಜೆ ನೀಡಲಾಗಿದೆ ಎಂಬುದನ್ನು ಕಂಪನಿ ಮಾಹಿತಿ ನೀಡಿಲ್ಲ. ಈ ರಜೆಗಾಗಿ ಅರ್ಜಿ ಸಲ್ಲಿಸುವ ನೌಕರರು ಒಂದು ವಾರ ಮುಂಚಿತವಾಗಿ ತಿಳಿಸಬೇಕು. ಸಂಸ್ಥೆಯು ಕೈಗೊಂಡಿರುವ ಈ ವಿನೂತನ ನಿರ್ಧಾರದಿಂದ ಉದ್ಯೋಗಿಗಳು ತಮ್ಮ ಕೆಲಸ ಚೆನ್ನಾಗಿ ಕೆಲಸ ಮಾಡಬೇಕು ಎಂದು ವ್ಯವಸ್ಥಾಪಕರು ಹೇಳಿದ್ದಾರೆ.

ಅನೇಕರು ಕೆಲಸದಿಂದ ಸ್ವಲ್ಪ ಬಿಡುವಿನ ವೇಳೆಗೆ ತಮ್ಮ ಗೆಳತಿಯರೊಂದಿಗೆ ಡೇಟ್‌ಗೆ ಹೋಗುತ್ತಾರೆ. ಇನ್ಮುಂದೆ ಅದಕ್ಕೆ ತಲೆನೋವು ಇರೋದಿಲ್ಲ ಬಿಡಿ.