ಜಮ್ಮು: ವೈಷ್ಣೋ ದೇವಿಯ ಗುಹಾ ದೇಗುಲಕ್ಕೆ ಈ ವರ್ಷ ಇಲ್ಲಿಯವರೆಗೆ 93.50 ಲಕ್ಷಕ್ಕೂ ಹೆಚ್ಚು ಭಕ್ತಾಧಿಗಳು ಭೇಟಿ ನೀಡಿದ್ದು, ಇದು ದಶಕದಲ್ಲೇ ಅತಿ ಹೆಚ್ಚು ಎಂದು ವರದಿ ಉಲ್ಲೇಖಿಸಿದೆ. ದೇಗುಲದ ಅಧಿಕಾರಿಗಳ ಪ್ರಕಾರ, ಸೋಮವಾರದ ವೇಳೆಗೆ ಒಟ್ಟು 93.50 ಲಕ್ಷ ಜನರು ಜಮ್ಮುವಿನ ರಿಯಾಸಿ ಜಿಲ್ಲೆಯ ತ್ರಿಕೂಟ ಬೆಟ್ಟಗಳ ದೇವಾಲಯಕ್ಕೆ ಭೇಟಿ ನೀಡಿದ್ದು, ಇದು 2013ರ ಅಂಕಿ ಅಂಶ 93.24 ಲಕ್ಷವನ್ನು ಮೀರಿಸಿದೆ.
"93.24 ಲಕ್ಷಕ್ಕೂ ಹೆಚ್ಚು ಯಾತ್ರಿಕರ ಹೊಸ ದಾಖಲೆಯೊಂದಿಗೆ ತೀರ್ಥಯಾತ್ರೆಯು ಕಳೆದ ಹತ್ತು ವರ್ಷಗಳಲ್ಲಿ ಅತ್ಯಧಿಕವಾಗಿದೆ. ತೀರ್ಥಯಾತ್ರೆಯ ಇತಿಹಾಸದಲ್ಲಿ 2012ರಲ್ಲಿ 1,04,09,569 ಭಕ್ತರು, ನಂತರ 2011ರಲ್ಲಿ 1,01,15,647 ಅತ್ಯಧಿಕ ಸಂಖ್ಯೆಯ ಭಕ್ತರು ಭೇಟಿ ನೀಡಿದ್ದರು. 37,000ರಿಂದ 44,000 ಭಕ್ತರು ಪ್ರತಿದಿನ ದೇಗುಲಕ್ಕೆ ಪಾದಯಾತ್ರೆಯನ್ನು ಪ್ರಾರಂಭಿಸುತ್ತಿದ್ದಾರೆ" ಎಂದು ಶ್ರೀ ಮಾತಾ ವೈಷ್ಣೋದೇವಿ ದೇಗುಲ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕರಾದ ಅಧಿಕಾರಿ ಅಂಶುಲ್ ಗಾರ್ಗ್ ತಿಳಿಸಿದ್ದಾರೆ.
ವರ್ಷಾಂತ್ಯದ ವೇಳೆಗೆ ಈ ಅಂಕಿ ಅಂಶವು 50,000 ತಲುಪುತ್ತದೆ ಎಂದು ಗಾರ್ಗ್ ನಿರೀಕ್ಷಿಸಿದ್ದು, ಈ ವರ್ಷ ದೇವರ ದರ್ಶನಕ್ಕೆ ಆಗಮಿಸುವ ಭಕ್ತರ ಸಂಖ್ಯೆ 95 ಲಕ್ಷ ಮೀರಲಿದೆ ಎಂದು ಅಂದಾಜಿಸಲಾಗಿದೆ. ಮಾತಾ ವೈಷ್ಣೋ ದೇವಿ ಭವನ ಮತ್ತು ದುರ್ಗಾ ಭವನದಲ್ಲಿ ಸ್ಕೈವಾಕ್ ಸೇರಿದಂತೆ ಸೌಲಭ್ಯಗಳ ವಿಷಯದಲ್ಲಿ ಈ ದೇವಾಲಯವು ಇತ್ತೀಚಿನ ದಿನಗಳಲ್ಲಿ ಕೆಲವು ಹೊಸ ಸೇರ್ಪಡೆಗಳನ್ನು ಕಂಡಿದೆ.
ಇದನ್ನೂ ಓದಿ: ಸೆಂಚುರಿಯನ್ನಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಕನ್ನಡಿಗ ಪ್ರಸಿದ್ಧ ಕೃಷ್ಣ; ಬೆನ್ನುನೋವಿನಿಂದ ಜಡೇಜಾ ಗೈರು
ಸ್ಕೈವಾಕ್ ಮತ್ತು ಮರುರೂಪಿಸಲಾದ ಪಾರ್ವತಿ ಭವನವನ್ನು ಭಾರತದ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರು ಇದೇ ಅಕ್ಟೋಬರ್‌ನಲ್ಲಿ ಉದ್ಘಾಟಿಸಿದರು. ಇನ್ನು ಕತ್ರಾದಲ್ಲಿರುವ ದೇಗುಲದ ಮೂಲ ಶಿಬಿರವು ಈಗ ಅತ್ಯಾಧುನಿಕ ಕಾಲ್ ಸೆಂಟರ್ ಅನ್ನು ಹೊಂದಿದ್ದು, ಇದು ದಿನದ ಸಂಪೂರ್ಣ ಅವಧಿ ಕಾರ್ಯನಿರ್ವಹಿಸುತ್ತದೆ ಮತ್ತು ಪ್ರಪಂಚದಾದ್ಯಂತ ಯಾತ್ರಾರ್ಥಿಗಳಿಂದ ಪ್ರತಿದಿನ ಬರುವ ಸುಮಾರು 2,500 ಕರೆಗಳನ್ನು ನಿರ್ವಹಿಸುತ್ತದೆ,(ಏಜೆನ್ಸೀಸ್).