ಬೆಂಗಳೂರು: ತಮ್ಮ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಬೆನ್ನಲ್ಲೇ ಸಿ.ಪಿ. ಯೋಗೇಶ್ವರ್ ಕಾಂಗ್ರೆಸ್ ಜತೆ ಕೈಜೋಡಿಸುವುದು ಖಚಿತ ಎಂದೇ ಹೇಳಲಾಗಿತ್ತು. ಆರಂಭದಲ್ಲಿ ಇದೆಲ್ಲಾ ಊಹಾಪೋಹ ಎಂದೇ ನಂಬಲಾಗಿತ್ತು. ತದನಂತರ ಸಿಪಿವೈ ಅವರ ಚಿತ್ತ 'ಕೈ'ನತ್ತ ಸಾಗಿದ್ದನ್ನು ಕಂಡ ಬಳಿಕ ವದಂತಿಗಳಿಗೆ ತೆರೆ ಎಳೆಯಲಾಯಿತು. ಇದೀಗ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಪಕ್ಷ ಸೇರಿರುವ ಯೋಗೇಶ್ವರ್, ಸದ್ಯ ಉಪ ಚುನಾವಣೆಯಲ್ಲಿ ಚನ್ನಪಟ್ಟಣದಿಂದ ಸ್ಪರ್ಧಿಸಲು ಎದುರುನೋಡುತ್ತಿದ್ದಾರೆ.
ಇದನ್ನೂ ಓದಿ: Stock market: ದೀಪಾವಳಿಗೆ ಷೇರು ಖರೀದಿಸಿದ್ರೆ ಮಹಾಲಕ್ಷ್ಮೀ ಕೃಪೆ ಇರುತ್ತದೆಯೇ? ವರ್ಷದಿಂದೀಚೆ ಎಷ್ಟು ರಿಟರ್ನ್ ಪಡೆದಿದ್ದೀರಿ?
ಈ ಕುರಿತು ಇಂದು ಚನ್ನಪಟ್ಟಣದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, "ಇಲ್ಲಿ ಸೇರಿರುವ ಜನಸಾಗರವೇ ಉಪಚುನಾವಣೆಯಲ್ಲಿ ಸಿ.ಪಿ.ಯೋಗೇಶ್ವರ್ ಅವರ ಗೆಲುವನ್ನು ಖಾತ್ರಿಪಡಿಸುತ್ತಿದೆ. ಚನ್ನಪಟ್ಟಣದಲ್ಲಿ ನಿಂತುಹೋಗಿರುವ ಅಭಿವೃದ್ಧಿ ಕಾರ್ಯಗಳಿಗೆ ಮರುಚಾಲನೆ ನೀಡಲು ನಮ್ಮ ಅಭ್ಯರ್ಥಿ ಯೋಗೇಶ್ವರ್ ಅವರಿಗೆ ಬೆಂಬಲಿಸಿ, ನನ್ನ 'ಕೈ'ಗಳನ್ನು ಬಲಪಡಿಸಬೇಕು ಎಂದು ಮನವಿ ಮಾಡುತ್ತೇನೆ" ಎಂದರು.
"ಚನ್ನಪಟ್ಟಣದಲ್ಲಿ ಯೋಗೇಶ್ವರ್ ಅವರ ಗೆಲುವು ಸಿದ್ದರಾಮಯ್ಯನ ಗೆಲುವು ಇದ್ದಂತೆ. ಇಲ್ಲಿ ಈ ಬಾರಿ ಕಾಂಗ್ರೆಸ್‌ನ ವಿಜಯದ ಪತಾಕೆ ಹಾರುವುದು ಗ್ಯಾರಂಟಿ" ಎಂದು ವಿಶ್ವಾಸ ವ್ಯಕ್ತಪಡಿಸಿದರು.