ನ್ಯೂಸ್

Professional Cuddler 1 ಗಂಟೆ ತಬ್ಬಿಕೊಂಡ್ರೆ ಸಿಗುತ್ತೆ 7500 ರೂಪಾಯಿ! ಇದೇ ಈಕೆ ಕೆಲಸ

ಲಂಡನ್: ಇಂದಿನ ಆಧುನಿಕ ಜೀವನಶೈಲಿಯಲ್ಲಿ ಯಾರ ಬಳಿಯಲ್ಲಿಯೂ ಸಮಯ ಇಲ್ಲ. ಕೆಲಸದ ಮಧ್ಯೆ ತಮಗೆ ಹಾಗೂ ಕುಟುಂಬಕ್ಕೆ ಸಮಯ ಕೊಡಲು ಸಾಧ್ಯವಾಗದೆ ಇರುವ ಪರಿಸ್ಥಿತಿ ಇದೆ. ಇಂತಹ ಕಷ್ಟವನ್ನು ಅರಿತುಕೊಂಡ ಮಹಿಳೆಯೊಬ್ಬಳು ಇದನ್ನೇ ತನ್ನ ಕೆಲಸವನ್ನಾಗಿ ಆಯ್ಕೆ ಮಾಡಿಕೊಂಡು ಜೀವನದಲ್ಲಿ ಒಂಟಿತನ ಅನುಭವಿಸುವರಿಗೆ ಸಹಾಯ ಮಾಡುತ್ತಾ ಹಣ ಸಂಪಾದನೆ ಮಾಡುತ್ತಿದ್ದಾರೆ.

ಇಂಗ್ಲೆಂಡ್‌ನ ಮ್ಯಾಂಚೆಸ್ಟರ್ ನಿವಾಸಿ 42 ವರ್ಷದ ಅನಿಕೊ ರೋಸ್ ಅವರು ನೀವು ಜೀವನದಲ್ಲಿ ಒಂಟಿತನ ಅನುಭವಿಸುತ್ತಿದ್ದರೆ ನಿಮ್ಮ ಸಹಾಯಕ್ಕೆ ಬರುತ್ತಾರೆ. ಒಂಟಿತನವನ್ನು ದೂರ ಮಾಡುವುದು ಅನಿಕೊ ರೋಸ್ ಆಯ್ಕೆ ಮಾಡಿಕೊಂಡ ಉದ್ಯೋಗ. ಒಂಟಿತನಕ್ಕೆ ಅನಿಕೋ ರೋಸ್ ಚಿಕಿತ್ಸೆ ನೀಡುತ್ತಾ ಈ ಕೆಲಸದಿಂದ ಅನಿಕೋ ರೋಸ್ ಗಂಟೆಗೆ 7 ಸಾವಿರ ರೂಪಾಯಿವರೆಗೂ ಸಂಪಾದಿಸುತ್ತಾರೆ.

ಒಂಟಿತನದಿಂದ ಬಳಲುತ್ತಿರೋ ಜನರಿಗೆ ಒಂದು ಅಪ್ಪುಗೆಯ ಅವಶ್ಯಕತೆ ಇರುತ್ತದೆ. ಇಂತಹ ವಿಶೇಷವಾದ ಅಪ್ಪುಗೆಯನ್ನು ಅನಿಕೋ ರೋಸ್ ನೀಡುತ್ತಾರೆ.  ಭಾವನಾತ್ಮಕವಾಗಿ ಸ್ಪಂದಿಸುವ ಗುಣವನ್ನು ಕರಗತ ಮಾಡಿಕೊಂಡಿರುವ ಅನಿಕೋ ರೋಸ್ ಒಂಟಿತನ ದೂರ ಮಾಡಲು ಪ್ರಯತ್ನಿಸುತ್ತಾರೆ. ಈ ಕೆಲಸಕ್ಕಾಗಿ ಪ್ರತಿ ಗಂಟೆಗೆ 7,500 ರೂಪಾಯಿ ವಿಧಿಸುತ್ತಾರೆ.

ವೆಬ್‌ಸೈಟ್ ಮೂಲಕ ಅನಿಕೋ ರೋಸ್ ಅವರನ್ನು ಬುಕ್ ಮಾಡಿಕೊಳ್ಳಬಹುದು. ಗಂಟೆಗೆ 70 ಪೌಂಡ್ ವಿಧಿಸುವ ಅನಿಕೋ ರೋಸ್, 20 ರಿಂದ 65 ವರ್ಷ ವಯಸ್ಸಿನ ಗ್ರಾಹಕರನ್ನು ಹೊಂದಿದ್ದಾರೆ.

ನಗರ ಪ್ರದೇಶಗಳಲ್ಲಿ ಹಲವರು 'ಹಗ್ಗರ್'ಗಳಾಗಿ ಕೆಲಸ ಮಾಡಿ ಹಣ ಸಂಪಾದಿಸುತ್ತಾರೆ. ವಿದೇಶಗಳಲ್ಲಿ ಹಗ್ಗರ್ ಗಳ ಬೇಡಿಕೆ ಹೆಚ್ಚಾಗಿದೆ. ಒತ್ತಡ ಮತ್ತು ಒಂಟಿತನದಿಂದ ಹೋರಾಡುವ ಜನರಿಗೆ ಅಪ್ಪುಗೆಯು ತುಂಬಾ ಸಾಂತ್ವನ ನೀಡುತ್ತದೆ.