ನವದೆಹಲಿ: ಪಾನಿಪುರಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ... ನಾಲಿಗೆ ಚಪ್ಪರಿಸಿ ಬೀದಿ ಅಂಚಿನಲ್ಲಿ ನಿಂತು ಸವಿಯುವ ಆಹಾರಗಳಲ್ಲಿ ಪಾನಿಪುರಿ ಕೂಡಾ ಒಂದಾಗಿದೆ. ಸ್ಥಳೀಯ ಅಭಿರುಚಿ ಮತ್ತು ಆದ್ಯತೆಗಳ ಆಧಾರದ ಮೇಲೆ ವಿವಿಧ ಪಾನಿಪುರಿ ಭಾರತದಾದ್ಯಂತ ಕಂಡುಬರುತ್ತದೆ.
ಪಾನಿಪುರಿ ಭಾರತದಲ್ಲಿ ಸಾಕಷ್ಟು ಪ್ರಸಿದ್ಧ ಮತ್ತು ವ್ಯಾಪಕವಾಗಿ ಸೇವಿಸುವ ಬೀದಿ ಆಹಾರವಾಗಿದೆ. ಇವುಗಳನ್ನು ಬೀದಿ ಬದಿ ವ್ಯಾಪಾರಿಗಳು ಮಾರಾಟ ಮಾಡುತ್ತಾರೆ. ಇವುಗಳನ್ನು ಮಾರುವುದರಿಂದ ಏನು ಲಾಭ ಇದ್ಯಾ? ಎಂದು ಪ್ರಶ್ನೆ ಮಾಡುವವರಿ ಪಾನಿಪುರಿ ಮಾರುವ ವ್ಯಾಪಾರಿಯ ದಿನದ ಆದಾಯ ತಿಳಿದು ಅಂತರ್ಜಾಲದಲ್ಲಿ ಚರ್ಚೆಯ ವಿಷಯವಾಗಿದೆ.
ಸೋಶಿಯಲ್ ಮೀಡಿಯಾ ಬಳಕೆ ದಾರರೊಬ್ಬರು ಪಾನಿಪುರಿ ಮಾರಾಟಗಾರ ಬಳಿ ಹೋಗಿ 'ನಿಮ್ಮ ದೈನಂದಿನ ಸಂಬಳವನ್ನು ನಾನು ತಿಳಿಯಬಹುದೇ?' ಎಂದು ಕೇಳುವುದು ಕೇಳುತ್ತಾರೆ. ವ್ಯಾಪಾರಿ 2,500 ರೂ. 'ದಿನದ ಸಂಬಳ?' ಎಂದು ಕೇಳಿದಾಗ ಹೌದು ಎಂದು ಉತ್ತರ ನೀಡಿದ್ದಾನೆ. ಇದನ್ನು ಮಾಸಿಕ ವೇತನ ಎಂದು ಲೆಕ್ಕ ಹಾಕಿದರೆ 75,000 ರೂ. ಆಗುತ್ತದೆ. ಎನ್ನುವುದನ್ನು ನಾವು ವಿಡಯೋದಲ್ಲಿ ನೋಡಬಹುದಾಗಿದೆ.
ಈ ಪಾನಿಪುರಿ ವ್ಯಾಪಾರಿಯ ಆದಾಯದ ಬಗ್ಗೆ ಅಂತರ್ಜಾಲದಲ್ಲಿ ಚರ್ಚೆ ಪ್ರಾರಂಭವಾಯಿತು. ಖಾಸಗಿ ಕಂಪನಿ ಉದ್ಯೋಗಿಗಳ ಮಾಸಿಕ ವೇತನಕ್ಕಿಂತ ಪಾನಿಪುರಿ ಬೈಯಾ ಆದಾಯ ಹೆಚ್ಚಿದೆ. ಎಂಬಿಎ ಓದುವುದು ಅನಗತ್ಯ ಎಂದೂ ಕೆಲವರು ಕಾಮೆಂಟ್ ಮಾಡಿದ್ದಾರೆ. ವೈರಲ್ ಆಗಿರುವ ವಿಡಿಯೋ 4 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದಿದೆ. ಈ ವಿಡಿಯೋ ಯಾವ ಸ್ಥಳದಲ್ಲಿ ರೆಕಾರ್ಡ್ ಮಾಡಿರುವುದು ಎನ್ನುವ ನಿಖರವಾದ ಮಾಹಿತಿ ತಿಳಿದು ಬರಬೇಕಿದೆ.