ನ್ಯೂಸ್

ಪ್ರವಾಸಿಗರೇ ಎಚ್ಚರ; ಇನ್ಮುಂದೆ ಈ ನಗರದಲ್ಲಿ ಸೆಲ್ಫಿ ತೆಗೆದರೆ ಬೀಳಲಿದೆ 24 ಸಾವಿರ ರೂ. ದಂಡ!

ಇಟಲಿ: ಪ್ರವಾಸ ಪ್ರಿಯರ ನೆಚ್ಚಿನ ದೇಶಗಳಲ್ಲಿ ಇಟಿಲಿಯೂ ಒಂದು. ಇಲ್ಲಿಗೆ ದೇಶ-ವಿದೇಶಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಸಮುದ್ರ ಕಿನಾರೆ, ಹಳೆಯ ಕಾಲದ ಕಟ್ಟಡಗಳು ಇಲ್ಲಿನ ವೈಶಿಷ್ಟ್ಯ. ಇವುಗಳನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಇಷ್ಟ ಪಡುವ ಪ್ರವಾಸಿಗರು ಸೆಲ್ಫಿ ತೆಗೆಯುವುದು ಸಾಮಾನ್ಯ.

ಇದೀಗ ಇಟಲಿ ದೇಶದ ರಿವೇರಿಯಾದಲ್ಲಿ ಪ್ರವಾಸಿಗರಿಗಾಗಿ ಹೊಸ ಕಾನೂನೊಂದನ್ನು ಜಾರಿಗೊಳಿಸಿದೆ. ಇಟಲಿಯ ಅತ್ಯಂತ ವರ್ಣರಂಜಿತ ಪಟ್ಟಣಗಳಲ್ಲಿ ಒಂದಾದ ಪೋರ್ಟೊಫಿನೊ ಪಟ್ಟಣದಲ್ಲಿ ಪ್ರವಾಸಿಗರು ಫೋಟೋ, ಸೆಲ್ಫಿ ತೆಗೆಯುವುದನ್ನು ನಿರ್ಬಂಧಿಸಿದೆ. ಇದಕ್ಕಾಗಿ ನೋ-ವೇಟಿಂಗ್ ಝೋನ್‌ಗಳನ್ನು ಪರಿಚಯಿಸಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

24,777 ರೂ. ದಂಡ!

ಪ್ರವಾಸಿಗರು ಪೋರ್ಟೊಫಿನೊ ಪಟ್ಟಣದಲ್ಲಿ ಸೆಲ್ಫಿ ತೆಗೆದರೆ 275 ಯೂರೋ(24,777ರೂ.) ದಂಡ ವಿಧಿಸಲಾಗುವುದು ಎಂದು ಸೂಚನೆ ಹೊರಡಿಸಿದೆ. ರಜಾ ದಿನಗಳಲ್ಲಿ ಈ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರಿಂದ ದಟ್ಟಣೆ ಉಂಟಾಗುತ್ತಿದೆ. ನಗರದ ಬೀದಿಗಳಲ್ಲಿ ನಿಂತು ಸೆಲ್ಫಿ ತೆಗೆಯುವುದು, ಫೋಟೋಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಹೀಗಾಗಿ ಸೆಲ್ಫಿ ತೆಗೆದರೆ ದಂಡ ವಿಧಿಸುವ ಕಾನೂನು ಜಾರಿಗೊಳಿಸಲಾಗಿದೆ. ಈ ನಿರ್ಬಂಧ ಬೆಳಗ್ಗೆ 10.30ರಿಂದ ಸಂಜೆ 6ರವರೆಗೆ ಇರಲಿದೆ ಎಂದು ಎಂದು ಪೋರ್ಟೊಫಿನೊದ ಮೇಯರ್ ಮ್ಯಾಟಿಯೊ ವಿಯಾಕಾವಾ ತಿಳಿಸಿರುವುದಾಗಿ ವರದಿಯಾಗಿದೆ. (ಏಜೆನ್ಸೀಸ್)