ನ್ಯೂಸ್

ಕ್ರಿಕೆಟ್ ಬ್ಯಾನ್! ಈ ನಗರದಲ್ಲಿ ಬ್ಯಾಟ್​ ಹಿಡಿದ್ರೆ ಬೀಳುತ್ತೆ ಭಾರೀ ಮೊತ್ತದ ದಂಡ

ಇಟಲಿ : ಉತ್ತರ ಇಟಲಿಯ ಒಂದು ಪಟ್ಟಣವು ಕ್ರಿಕೆಟ್ ಅನ್ನು ನಿಷೇಧಿಸಿದೆ, ಈ ನಿರ್ಧಾರವನ್ನು ಅಲ್ಲಿಯ ಮೇಯರ್ ತೆಗೆದುಕೊಂಡಿದ್ದಾರೆ. ಕ್ರೀಡೆಯನ್ನು ಆಡುವ ಬಾಂಗ್ಲಾದೇಶಿ ವಲಸಿಗರು ಕ್ರಿಕೆಟ್​​ ಆಡುತ್ತಿರುವುದು ಸ್ಥಳೀಯ ಸಂಸ್ಕೃತಿಯೊಂದಿಗೆ ಹೊಂದಾಣಿಕೆಯಾಗುವುದಿಲ್ಲ ಎಂದು ಪರಿಗಣಿಸುತ್ತಾರೆ.

ಇಡೀ ನಗರದಲ್ಲೇ ಯಾರೂ ಕ್ರಿಕೆಟ್ ಆಡಬಾರದು. ಒಂದು ವೇಳೆ ಆದೇಶ ಮೀರಿ ಕ್ರಿಕೆಟ್​ ಆಡಿದರೆ ಮೊತ್ತದ ದಂಡ ವಿಧಿಸಲಾಗುತ್ತದೆ ಎಂದು ಇಟಲಿಯ ಮೊನ್ಫಾಲ್ಕೋನ್​ ನಗರದ ಮೇಯರ್ ಆದೇಶಿಸಿದ್ದಾರೆ.

ಇಟಲಿಯ ಮೊನ್ಫಾಲ್ಕೋನ್ ನಗರ ಸುಮಾರು 30,000 ಜನಸಂಖ್ಯೆ ವಾಸವಾಗಿದ್ದಾರೆ ಇಲ್ಲಿ ವಾಸಿಸುವ ಸಾಕಷ್ಟು ಜನರು ವಿದೇಶಿಯರು ಎನ್ನಲಾಗಿದೆ. ಬಾಂಗ್ಲಾದೇಶದವರೇ ಅಧಿಕ ಸಂಖ್ಯೆಯಲ್ಲಿದ್ದಾರೆ.

1990ರ ದಶಕದ ಬಂದರುಗಳಲ್ಲಿ ಕೆಲಸ ಮಾಡಲು ಬಂದು ಇಲ್ಲೇ ನೆಲಸಿದ್ದಾರೆ. ಇವರು ಮೊದಲಿನಿಂದಲೂ ನಗರಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಇನ್ನು ಇವರು ಕ್ರಿಕೆಟ್​ ಆಡುತ್ತಿರುವುದು ಇಟಲಿಯ ಸ್ಥಳೀಯ ಸಂಸ್ಕೃತಿ ಜೊತೆಗೆ ಹೊಂದಾಣಿಕೆ ಆಗುತ್ತಿಲ್ಲ ಎಂದು ನಗರದ್ಯಾಂತ ಕ್ರಿಕೆಟ್ ಅನ್ನು ಬ್ಯಾನ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ವಿದೇಶಿಯರಿಂದ ನಗರದ ಇತಿಹಾಸ ಹಾಗೂ ಸಂಸ್ಕೃತಿಯನ್ನು ನಿಧಾನವಾಗಿ ಅಳಿಸಲಾಗುತ್ತಿದೆ. ಬಾಂಗ್ಲಾ ನಿವಾಸಿಗಳು ಏನನ್ನು ಕೊಡುಗೆ ನೀಡಿಲ್ಲ. ಹೀಗಾಗಿ ಈ ಸಿಟಿ ಬಿಟ್ಟು ಹೊರಗೆ ಕ್ರಿಕೆಟ್ ಆಡಬಹುದು. ಆದರೆ ನಗರದ ಒಳಗೆ ಕ್ರಿಕೆಟ್ ಆಡುವಂತೆ ಇಲ್ಲ. ಒಂದು ವೇಳೆ ಕ್ರಿಕೆಟ್ ಆಡಿದರೆ 9,331 ರೂಪಾಯಿಗಳನ್ನ ದಂಡ ಕಟ್ಟಬೇಕಾಗುತ್ತದೆ ಎಂದು ಮೊನ್ಫಾಲ್ಕೋನ್​ ನಗರದ ಮೇಯರ್ ಅನ್ನಾ ಮಾರಿಯಾ ಸಿಸಿಂಟ್ ಹೇಳಿದ್ದಾರೆ. ಮೇಯರ್​​ ಅನ್ನಾ ಮಾರಿಯ ಸಿಸಿಂತ್​​ ತ,ಮ್ಮ ಸಮುದಾಯದವನ್ನು ರಕ್ಷಿಸುವ ಹಾಗೂ ಕ್ರಿಶ್ಚಿಯನ್​​ ಪರಂಪೆಯನ್ನು ಎತ್ತಿ ಹಿಡಿಯುವ ಪಣ ತೊಟ್ಟಿದ್ದಾರೆ.

ಮೇಯರ್​​ ಸಿಸಿಂತ್​ ಮಾತನಾಡಿ, ಕ್ರಿಕೆಟ್​​ ಮೈದಾನಕ್ಕೆ ಸ್ಥಳವಿಲ್ಲ ಹಾಗೂ ಹೊಸ ಪಿಚ್​ ನಿರ್ಮಿಸಲು ನಿಧಿಯೂ ಇಲ್ಲ. ಮಾನ್​​ ಫಾಲ್ಕೋನ್​​ ಪ್ರದೇಶದಲ್ಲಿ ಬಾಂಗ್ಲಾದೇಶಿಗರಿಗೆ ಕ್ರಿಕೆಟ್​​ ಆಡಲು ಅನುಮತಿ ನೀಡುವುದಿಲ್ಲ ಎಂದು ಹೇಳಿದ್ದಾರೆ.