ನ್ಯೂಸ್

ಇದು ನೆಕ್ಸ್ಟ್ ಜೆನ್ ಜಿಎಸ್​ಟಿ

ಸುದೀಪ್​ ವಿ.ಎನ್​

ನವದೆಹಲಿ: ಪ್ರಸ್ತಾಪಿತ ಎರಡು ಸ್ಲ್ಯಾಬ್​ಗಳ ತೆರಿಗೆ ವಿಧಾನ 2047ರ ವೇಳೆಗೆ ಏಕೈಕ ತೆರಿಗೆ ದರಕ್ಕೆ ದಾರಿ ಮಾಡಿಕೊಡಲಿದೆ ಎಂದಿರುವ ಹಿರಿಯ ಅಧಿಕಾರಿಗಳು, ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಸುಧಾರಣೆಯನ್ನು ನೆಕ್ಸ್ಟೆಟ್ ಜೆನ್ ಜಿಎಸ್​ಟಿ ಎಂದು ಬಣ್ಣಿಸಿದ್ದಾರೆ.

ಶೇ. 12 ಮತ್ತು 28ರ ಸ್ಲ್ಯಾಬ್​​ಗಳನ್ನು ತೆಗೆದುಹಾಕಿ, ಕೇವಲ 5 ಮತ್ತು 18ರ ಸ್ಲ್ಯಾಬ್​ ಇರಿಸಬೇಕೆಂಬ ಪ್ರಸ್ತಾವನೆಯನ್ನು ಜಿಎಸ್​ಟಿ ಕೌನ್ಸಿಲ್ ಅನುಮೋದಿಸಿದರೆ ಆರ್ಥಿಕತೆಗೆ ಉತ್ತೇಜನ ದೊರೆಯುತ್ತದೆ. ಇದು ಸಂಪೂರ್ಣವಾಗಿ ಆಟವನ್ನೇ ಬದಲಾಯಿಸುವ ಕ್ರಾಂತಿಕಾರಿ ಸುಧಾರಣೆ. ಸಾಮಾನ್ಯ ಬಳಕೆಯ ವಸ್ತುಗಳು ಕಡಿಮೆ ತೆರಿಗೆ ಸ್ತರಕ್ಕೆ ಸ್ಥಳಾಂತರಗೊಂಡು, ಬೆಲೆ ಇಳಿಕೆಗೆ ಕಾರಣವಾಗುತ್ತದೆ. ಕಡಿಮೆ ತೆರಿಗೆಯಿಂದ ಜನರ ಜೇಬಿನಲ್ಲಿ ಹೆಚ್ಚಿನ ಹಣ ಉಳಿಯುತ್ತದೆ. ಗ್ರಾಹಕರು ಮಾಡುವ ವೆಚ್ಚದ ಪ್ರಮಾಣವೂ ಹೆಚ್ಚಲಿದೆ. ಮಧ್ಯಮ ವರ್ಗ, ಬಡವರು, ರೈತರು ಮತ್ತು ಸಣ್ಣ ಕೈಗಾರಿಕೆಗಳ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಇದನ್ನು ರೂಪಿಸಲಾಗಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆರು ತಿಂಗಳ ಚರ್ಚೆ ಮತ್ತು ಡಜನ್​ಗಟ್ಟಲೆ ಸಭೆಗಳ ನಂತರ ರೂಪಿತವಾದ ಈ ಬದಲಾವಣೆಗಳು, ತೆರಿಗೆ ತಿದ್ದುಪಡಿಗಳ ಬೇಡಿಕೆ ಬರದಂತೆ ಮತ್ತು ಇನ್​ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಸಂಗ್ರಹವಾಗದಂತೆ ಖಾತರಿಪಡಿಸುವ ರೀತಿಯಲ್ಲಿ ರೂಪಿಸಲಾಗಿದೆ. ಕೇಂದ್ರದ ಪ್ರಸ್ತಾವನೆಯನ್ನು ಸಚಿವರ ಗುಂಪು (ಜಿಒಎಂ) ಸ್ವೀಕರಿಸಿ, ಜಿಎಸ್​ಟಿ ಕೌನ್ಸಿಲ್ ಅನುಮೋದಿಸಿದರೆ, ತೆರಿಗೆ ದರಗಳ ಅಸ್ಥಿರತೆ ಕೊನೆಗೊಳ್ಳಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಪ್ರತಿ ವಸ್ತುವನ್ನೂ ಒಂದೊಂದಾಗಿ ಪರಿಶೀಲಿಸಿದ್ದೇವೆ. ಕೆಲವು ವಸ್ತುಗಳನ್ನು 3-4 ಬಾರಿ ಮರುಪರಿಶೀಲಿಸಿದ್ದೇವೆ. ರೈತರಿಗೆ ಕೀಟನಾಶಕ, ವಿದ್ಯಾರ್ಥಿಗಳಿಗೆ ಪೆನ್ಸಿಲ್, ಎಂಎಸ್​ಎಂಇಗಳಿಗೆ ಕಚ್ಚಾ ವಸ್ತುಗಳು ಹೀಗೆ ಎಲ್ಲದರ ಬಗ್ಗೆಯೂ ಸಂಪೂರ್ಣವಾಗಿ ರ್ಚಚಿಸಿ, ಮೆರಿಟ್ ಅಥವಾ ಸ್ಟಾ್ಯಂಡರ್ಡ್ ಸ್ಲಾ್ಯಬ್​ಗೆ ವರ್ಗೀಕರಿಸಲಾಗಿದೆ. ಶೇ. 12 ವರ್ಗದ ವಸ್ತುಗಳಾದ ಬೆಣ್ಣೆ, ಹಣ್ಣಿನ ರಸ, ಡ್ರೖೆಫ್ರೂಟ್ಸ್, ಶೇ. 5ರ ತೆರಿಗೆ ದರಕ್ಕೆ ಸ್ಥಳಾಂತರಗೊಳ್ಳಲಿವೆ. ಎಸಿ, ಟಿವಿ, ಫ್ರಿಜ್, ವಾಷಿಂಗ್ ಮಷಿನ್​ನಂತಹ ಎಲೆಕ್ಟ್ರಾನಿಕ್ ವಸ್ತುಗಳು, ಸಿಮೆಂಟ್ ಶೇ. 28ರಿಂದ ಶೇ. 18ರ ಸ್ಲಾ್ಯಬ್​ಗೆ ಸ್ಥಳಾಂತರಗೊಳ್ಳಲಿವೆ ಎಂದರು.