ನ್ಯೂಸ್

ಅಮೆರಿಕದ 47ನೇ ಅಧ್ಯಕ್ಷರಾದ ಬಳಿಕ ಟ್ರಂಪ್ ಜತೆ ಇದೇ ಮೊದಲ ಬಾರಿಗೆ ಮೋದಿ​ ದೂರವಾಣಿ ಮಾತುಕತೆ | Modi

ಪ್ರಧಾನಿ ನರೇಂದ್ರ ಮೋದಿ( Modi)- ಡೊನಾಲ್ಡ್​ ಟ್ರಂಪ್​ ಸೋಮವಾರ ದೂರವಾಣಿ ಕರೆ ಮೂಲಕ ಮಾತುಕತೆ ನಡೆಸಿದ್ದಾರೆ.

ಅಮೆರಿಕದ 47ನೇ ಅಧ್ಯಕ್ಷರಾಗಿ ಜ.20ರಂದು 2ನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿರುವ ಟ್ರಂಪ್​ ಜತೆ ಇದೇ ಮೊದಲ ಬಾರಿಗೆ ನರೇಂದ್ರ ಮೋದಿ ಮಾತುಕತೆ ನಡೆಸಿದ್ದಾರೆ. ಈ ಕುರಿತು ಪಿಎಂ ಮೋದಿ ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ನನ್ನ ಆತ್ಮೀಯ ಸ್ನೇಹಿತ ಅಧ್ಯಕ್ಷರೊಂದಿಗೆ ಮಾತನಾಡಲು ನನಗೆ ಸಂತೋಷವಾಯಿತು. ಡೊನಾಲ್ಡ್​ ಟಂಪ್ರ್​ ಅವರ ಐತಿಹಾಸಿಕ ಎರಡನೇ ಅವಧಿಗೆ ಅವರನ್ನು ಅಭಿನಂದಿಸುತ್ತೇನೆ. ನಾವು ಪರಸ್ಪರ ಲಾಭದಾಯಕ ಮತ್ತು ವಿಶ್ವಾಸಾರ್ಹ ಪಾಲುದಾರಿಕೆಗೆ ಬದ್ಧರಾಗಿದ್ದೇವೆ. ನಮ್ಮ ಜನರ ಕಲ್ಯಾಣಕ್ಕಾಗಿ ಮತ್ತು ಜಾಗತಿಕ ಶಾಂತಿ, ಸಮೃದ್ಧಿ ಮತ್ತು ಭದ್ರತೆಗಾಗಿ ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಮೋದಿ ಬರೆದುಕೊಂಡಿದ್ದಾರೆ.

ಇನ್ನು ವಾಷಿಂಗ್ಟನ್‌ನಲ್ಲಿ ಜ.20ರಂದು ಟ್ರಂಪ್​ ಪ್ರಮಾಣ ವಚನದ ಅದ್ಧೂರಿ ಸಮಾರಂಭದಲ್ಲಿ ಭಾರತದ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಮತ್ತು ಅವರ ಪತ್ನಿ ನೀತಾ ಅಂಬಾನಿ ಸೇರಿದಂತೆ ವಿಶ್ವದಾದ್ಯಂತದ ಗಣ್ಯರು ಭಾಗವಹಿಸಿದ್ದರು.(ಏಜೆನ್ಸೀಸ್​)