Auto Driver: ಸಾಮಾಜಿಕ ಜಾಲತಾಣಗಳಲ್ಲಿ ಒಂದು ಸಣ್ಣ ವಿಷಯ ಕೂಡ ದೊಡ್ಡದಾಗುತ್ತೆ ಮತ್ತು ವೇಗವಾಗಿ ಜನರನ್ನು ತಲುಪುತ್ತೆ. ದೇಶದ ಯಾವುದೇ ಮೂಲೆಯಲ್ಲಿ ಏನಾದರೂ ಸಂಭವಿಸಿದರೆ, ಆ ಘಟನೆಯ ಫೋಟೋ ಅಥವಾ ವಿಡಿಯೋಗಳು ಜಾಲತಾಣಗಳಲ್ಲಿ ಕ್ಷಣಮಾತ್ರದಲ್ಲಿ ಹರಿದಾಡುತ್ತವೆ. ಇದು ಹಲವರ ಗಮನ ಸೆಳೆಯುತ್ತದೆ. ಅಂತೆಯೇ ಬೆಂಗಳೂರಿನ ಆಟೋ ಚಾಲಕರೊಬ್ಬರು ತಮ್ಮ ಆಟೋದಲ್ಲಿ ಹಾಕಿರುವ ವಾರ್ನಿಂಗ್ ಫೋಟೋ ಸದ್ಯ ನೆಟ್ಟಿಗರ ನಗೆಪಾಟಲಿಗೆ ಕಾರಣವಾಗಿದೆ.
ಇದನ್ನೂ ಓದಿ: ಸರ್ಕಾರಿ ವೈದ್ಯಕೀಯ ಕಾಲೇಜ್ಗಾಗಿ ಹೋರಾಟ, ಧರಣಿ ಸ್ಥಳಕ್ಕೆ ಸಚಿವ ಎಂ.ಬಿ. ಪಾಟೀಲ ಭೇಟಿ, ಮನವಿ ಸ್ವೀಕರಿಸಿ ಹೇಳಿದ್ದೇನು?
ಬೆಂಗಳೂರು ಅಂದಮೇಲೆ ಅದೊಂದು ಹೈಫೈ ನಗರಿ. ದೇಶ-ವಿದೇಶಗಳಿಂದ ವಲಸೆ ಬಂದಿರುವ ಅದೆಷ್ಟೋ ಸಂಖ್ಯೆಯ ಜನರು ಇಲ್ಲಿ ವಾಸವಿದ್ದಾರೆ. ಕೆಲವರು ಉದ್ಯೋಗ ಅರಸಿ ಬಂದರೆ, ಇನ್ನೂ ಕೆಲವರು ಇಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ. ಈ ಮಧ್ಯೆ, ಪ್ರೀತಿ-ಪ್ರೇಮದ ಹೆಸರಿನಲ್ಲಿ ಯುವಜನತೆ ಮೋಜು-ಮಸ್ತಿ ಮಾಡುತ್ತಾರೆ. ಅದರಲ್ಲೂ ಪ್ರೇಮಿಗಳಂತು ಸಾರ್ವಜನಿಕ ಸ್ಥಳಗಳಲ್ಲಿ ತಬ್ಬಿಕೊಳ್ಳುವುದು, ಮುತ್ತಿಕ್ಕುವುದು ಮಾಡುತ್ತಾರೆ. ಇದು ಹಲವರಿಗೆ ತೀರ ಮುಜುಗರ ಉಂಟು ಮಾಡುತ್ತದೆ. ಇದು ತಪ್ಪು ಎಂದು ಗೊತ್ತಿದ್ದರೂ ಅದನ್ನೇ ಮಾಡುವವರ ಸಂಖ್ಯೆ ಹೆಚ್ಚಿದೆ ಹಾಗೂ ತೀರ ಸಾಮಾನ್ಯವಾಗಿಬಿಟ್ಟಿದೆ. ಇದೇ ಕಾರಣಕ್ಕೋ ಏನೋ ಈ ಆಟೋ ಚಾಲಕ ಬಹಳ ಅನುಭವದಿಂದಲೇ ಈ ವಿಷಯವನ್ನು ತಮ್ಮ ಪ್ಯಾಸೆಂಜರ್ಗೆ ತಿಳಿಸಿದ್ದಾರೆ.
ಈ ಆಟೋ ಖಾಸಗಿ ಕ್ಷಣಕ್ಕಾಗಿ ಅಲ್ಲ, ರೊಮ್ಯಾನ್ಸ್ ಮಾಡಲು ಜಾಗವಿಲ್ಲ. ಇದು ಕ್ಯಾಬ್ಗೆ ಒಳಪಡುತ್ತದೆ. ಓಯೋ ಅಲ್ಲ. ಹೀಗಾಗಿ ಆದಷ್ಟು ಅಂತರದಲ್ಲಿ ಕುಳಿತುಕೊಳ್ಳಿ ಮತ್ತು ಸುರಕ್ಷಿತವಾಗಿರಿ. ಗೌರವ ಕೊಡಿ ಹಾಗೂ ಗೌರವ ಪಡೆಯಿರಿ ಎಂದು ಬರೆದಿರುವ ಪೋಸ್ಟರ್ ಅನ್ನು ಹಾಕಿಕೊಂಡಿದ್ದಾರೆ. ಇದನ್ನು ಪ್ರಯಾಣಿಕರೊಬ್ಬರು ರೆಡ್ಡಿಟ್ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡ್ತಿದ್ದಂತೆ ನೆಟ್ಟಿಗರು ನಗೆಪಾಟಲಿಗೀಡಾಗಿದ್ದು, ಮಿಶ್ರ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ,(ಏಜೆನ್ಸೀಸ್).