ನ್ಯೂಸ್

ಇದು ಆಟೋ.. ರೊಮ್ಯಾನ್ಸ್ ಮಾಡೋಕೆ ಓಯೋ ರೂಮ್ ಅಲ್ಲ.. ಪ್ರಯಾಣಿಕರಿಗೆ ಎಚ್ಚರಿಕೆ ಕೊಟ್ಟ ಆಟೋ ಚಾಲಕನ ಬರಹ ವೈರಲ್ | OYO

OYO: ನಮ್ಮ ದೇಶದಲ್ಲಿ ಸಾಮಾನ್ಯವಾಗಿ ವಾಹನಗಳ ಹಿಂಭಾಗ ಮತ್ತು ಮುಂಭಾಗದಲ್ಲಿ ದೇವರ ಹೆಸರುಗಳು ಸೇರಿದಂತೆ ವಿವಿಧ ರೀತಿಯ ಹಾಸ್ಯಸ್ಪದ ಮತ್ತು ಭಾವನಾತ್ಮಕ ಸಂದೇಶಗಳನ್ನು ಬರೆಸುವ ರೂಢಿ ನಮ್ಮಲ್ಲಿದೆ. ಅದೇ ರೀತಿ ಇಲ್ಲೊಬ್ಬ ಆಟೋ ಚಾಲಕ ಪ್ರಯಾಣಿಕೆ ಎಚ್ಚರಿಕೆ ಸಂದೇಶ ಬರೆಸಿದ್ದು, ಇದೀಗ ಇದರ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಹೌದು, ಎಲ್ಲರೂ ದೇವರ ಆಶೀರ್ವಾದ ಮತ್ತು ಹಿತಾ ಶತ್ರುಗಳ ಆಶ್ರೀರ್ವಾದ ಇಲ್ಲವೆ ಲವ್ ಅಥವಾ ಲೈಫ್​ಗೆ ಸಂಬಂಧಪಟ್ಟ ಸಂದೇಶಗಳನ್ನು ನೋಡುರಿತ್ತಿರಾ ಮತ್ತು ಓದುತ್ತಿರಾ ಅಲ್ವಾ ಆದರೆ, ಇಲ್ಲಿ ಆಟೋ ಚಾಲಕ ಪ್ರಯಾಣಿಕರಿಗೆ ಮನವಿ ಮಾಡುವುದರ ಜತೆ ಎಚ್ಚರಿಸಿದ್ದಾನೆ.

ಆಟೋ ಚಾಲಕ ತನ್ನ ಸೀಟ್​ ಹಿಬಂದಿಯಲ್ಲಿ ಪ್ರಯಾಣಿಕರಿಗೆ ಕಾಣಿಸುವಂತೆ,’’ ಎಚ್ಚರಿಕೆ, ಇದು ಪ್ರಣಯ(ರೋಮ್ಯಾನ್ಸ್​) ಮಾಡುವ ಸ್ಥಳವಲ್ಲ. ಇದು ಆಟೋ. ಓಯೋ(OYO) ರೂಮ್​ ಅಲ್ಲ. ದಯವಿಟ್ಟು ಅಂತರ ಕಾಪಾಡಿಕೊಳ್ಳಿ. ಶಾಂತಾ ರೀತಿಯಿಂದ ವರ್ತಿಸಿ. ಗೌರವನ್ನು ನೀಡಿ, ಗೌರವ ಪಡೆದುಕೊಳ್ಳಿ ಎಂದು ಬರೆದುಕೊಂಡಿದ್ದಾರೆ. ಇದರ ಪೋಟೊವನ್ನು  23ರ ಯುವಕ ತನ್ನ ಸೋಷಿಯಲ್​​ ಮಿಡಿಯಾ ಫ್ಲಾಟ್​ಫಾರಂಗಳಲ್ಲಿ ಹಂಚಿಕೊಂಡಿದ್ದಾರೆ’’. ಇದೀಗ ಈ ವ್ಯಾಕ್ಯಗಳು ಸಖತ್​ ಸುದ್ದಿಯಾಗಿದೆ.

ಈ ಫೋಸ್ಟ್​ ಸೋಷಿಯಲ್​ ಮೀಡಿಯಾದಲ್ಲಿ ನೆಟ್ಟಿಗರನ್ನು ಬಹುಬೇಗ ಗಮನಸೆಳೆದಿದೆ. ಇನ್ನು ಬಳಕೆದಾರರು ಈ ಪೋಸ್ಟ್​ಗೆ ತೆರಹವಾರಿ ಕಾಮೆಂಟ್​ಗಳನ್ನು ಮಾಡಿದ್ದಾರೆ. ಕೆಲವರು ಅಸಂಬದ್ಧ ಎಂದರೆ ಇನ್ನು ಕೆಲವರು ತಮಾಷೆಯಾಗಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)