ಮುಂಬೈ: ಬಾಲಿವುಡ್ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ.
ಯೂಟ್ಯೂಬ್ನಲ್ಲಿ ಆಲಿಯಾ ಭಟ್ ಹೆಸರಿನ ಚಾನೆಲ್ ಮೂಲಕ ಫಿಟ್ನೆಸ್ ಹಾಗೂ ಸಿನಿಮಾ ಸಂಬಂಧ ಮಾಹಿತಿ ನೀಡುತ್ತಿರುವ ಆಲಿಯಾ, ಹೊಸ ಪ್ರಯತ್ನ ಎಂಬಂತೆ ಅಡುಗೆ ಮಾಡುವುದಕ್ಕೂ ಕೈಹಾಕಿದ್ದಾರೆ. ಅದರ ಭಾಗವಾಗಿ ಇದೀಗ ಎರಡನೇ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಆಲಿಯಾ, ಮತ್ತೊಮ್ಮೆ ಶೆಫ್ ಆಗಿ ಬಂದಿದ್ದೇನೆ. ನನ್ನ ಯೂಟ್ಯೂಬ್ ಚಾನೆಲ್ನಲ್ಲಿ ಹೊಸ ವಿಡಿಯೋ ಅಪ್ಲೋಡ್ ಮಾಡಿದ್ದೇನೆ. ಈ ಬಾರಿ ದಿಲೀಪ್ ಮತ್ತು ಕರೋಲ್ ತುಂಬಾ ಕಷ್ಟವಾದ ರೆಸಿಪಿಯೊಂದನ್ನು ನನಗೆ ಹೇಳಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಈಗಾಗಲೇ ಆಲಿಯಾ ಕಿಚನ್ ವಿಡಿಯೋವನ್ನು 1.70 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ. ಸಾಕಷ್ಟು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಆಲಿಯಾ ಯೂಟ್ಯೂಬ್ನಲ್ಲಿ 10 ಲಕ್ಷ ಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದ್ದಾರೆ. (ಏಜೆನ್ಸೀಸ್)