ನ್ಯೂಸ್

ಜಗತ್ತಿನಲ್ಲಿ ಅತ್ಯಧಿಕ ಜನಸಂದಣಿ​ ತುಂಬಿದ 10 ನಗರಗಳ ಪೈಕಿ ಭಾರತದ ಈ ಸಿಟಿಯೂ ಟಾಪ್​! | Crowded Cities

Crowded Cities: ಇದಾಗಲೇ ವಿಶ್ವದ ಜನಸಂಖ್ಯೆ 8 ಮಿಲಿಯನ್​​ ಅಧಿಕವಾಗಿದ್ದು, ಜನಸಂಖ್ಯೆಯಲ್ಲಿ ಭಾರತವನ್ನು ಚೀನಾ ಹಿಂದಿಕ್ಕಿದೆ. ಕೆಲವು ನಗರಗಳ ಜನಸಂಖ್ಯೆಯು ಹಲವು ರಾಜ್ಯಗಳ ಒಟ್ಟು ಜನಸಂಖ್ಯೆಗಿಂತ ಹೆಚ್ಚಾಗಿದೆ. ವೇಗವಾಗಿ ಹೆಚ್ಚುತ್ತಿರುವ ವಾಣಿಜ್ಯೀಕರಣದಿಂದಾಗಿ, ಬಹಳಷ್ಟು ಜನರು ಜೀವನೋಪಾಯಕ್ಕಾಗಿ ಈ ನಗರಗಳಿಗೆ ವಲಸೆ ಬಂದರು, ಇದರಿಂದಾಗಿ ಈ ನಗರಗಳ ಜನಸಂಖ್ಯೆಯು ವೇಗವಾಗಿ ಹೆಚ್ಚಾಯಿತಲ್ಲದೆ ಇಂದು ಅನೇಕ ನಗರಗಳಲ್ಲಿ ಜನರು ವಾಸಿಸಲು ಅಗತ್ಯವಾದ ಸಂಪನ್ಮೂಲಗಳ ಕೊರತೆಯಿದೆ.

ಅಧಿಕ ಜನಸಂಖ್ಯೆಯಿಂದ ಕೂಡಿದ ಟಾಪ್​ 10 ನಗರಗಳು

1.ಟೋಕಿಯೊ

ಜನಸಂಖ್ಯೆಯ ವಿಚಾರದಲ್ಲಿ ಜಪಾನ್​ ದೇಶದ ಟೋಕಿಯೊ ನಗರ ಜಗತ್ತಿನಲ್ಲಿ ಅಧಿಕ ಜನಸಂದಣಿ ಹೊಂದಿದ ಟಾಪ್​ ನಗರವಾಗಿದೆ. 2024 ರಲ್ಲಿ ಜಪಾನ್‌ನ ಜನಸಂಖ್ಯೆ 37,115,035ಆಗಿದ್ದರೆ, 2023 ರಲ್ಲಿ ಟೋಕಿಯೊದ ಜನಸಂಖ್ಯೆ 37,194,105 ಆಗಿತ್ತು. ಟೋಕಿಯೊದ ಜನಸಂಖ್ಯೆಯು ಒಂದು ವರ್ಷದಲ್ಲಿ -0.21 ಪ್ರತಿಶತದಷ್ಟು ಬೆಳವಣಿಗೆಯನ್ನು ಕಂಡಿತು. ಟೋಕಿಯೊ ಜಪಾನ್‌ನ ಪ್ರಮುಖ ನಗರವಾಗಿದ್ದು, ಪ್ರಪಂಚದಾದ್ಯಂತದ ಜನರು ಕೆಲಸ ಮಾಡಲು ಬರುತ್ತಾರೆ.

2.ದೆಹಲಿ

ದೇಶದ ರಾಜಧಾನಿ ದೆಹಲಿ ಜಗತ್ತಿನ ಎರಡನೇ ನಗರವಾಗಿದೆ. 2024ರಲ್ಲಿ ನಗರದ ಜನಸಂಖ್ಯೆ 33,807,403 ರಷ್ಟಿತ್ತು. ಆದರೆ, 2023ರಲ್ಲಿ 32,941,309ರಷ್ಟಿತ್ತು. ಒಂದು ವರ್ಷದಲ್ಲಿ ಜನಸಂಖ್ಯೆ ಶೇ.2.63 ರಷ್ಟು ಅಧಿಕವಾಗಿದೆ. ದಿನದಿಂದ ದಿನಕ್ಕೆ ನಗರದ ಜನಸಂದಣಿ ಅಧಿಕವಾಗುತ್ತಿದೆ. ಹಳ್ಳಿಗಳಿಂದ ನಗರದಿಂದ ಪಟ್ಟಣಕ್ಕೆ ಬರುವ ವಲಸಿಗರ ಜನಸಂಖ್ಯೆ ಹೆಚ್ಚಾಗುತ್ತಿದೆ.

3.ಶಾಂಘೈ

ಚೀನಾದ ಶಾಂಘೈ ನಗರವು ಜನಸಂದಣಿ ದೃಷ್ಠಿಯಿಂದ ಮೂರನೇ ಸ್ಥಾನದಲ್ಲಿದೆ. 2023ರಲ್ಲಿ ಶಾಂಘೈ ನಗರದ ಜನಸಂಖ್ಯೆ 29,210,808 ರಷ್ಟಿತ್ತು. 2024ರಲ್ಲಿ 29,867,918 ರಷ್ಟಾಗಿದೆ. ಒಂದು ವರ್ಷದಲ್ಲಿ ಜನಸಂಖ್ಯೆ ಶೇ.2.25 ರಷ್ಟು ಅಧಿಕವಾಗಿದೆ.

4.ಢಾಕಾ

ನಮ್ಮ ನೆರೆಯ ದೇಶ ಬಾಂಗ್ಲಾದೇಶದ ರಾಜಧಾನಿ ಢಾಕಾದ ಹೆಸರು ನಾಲ್ಕನೇ ಸ್ಥಾನದಲ್ಲಿದೆ. ಹಡಾಕಾದ ಜನಸಂಖ್ಯೆಯು 2023 ರಲ್ಲಿ 23,209,616 ರಷ್ಟಿತ್ತು, ಇದು 2024 ರಲ್ಲಿ 23,935,652 ಕ್ಕೆ ಏರಿತು. 2023 ಮತ್ತು 2024 ರ ನಡುವೆ, ಬಾಂಗ್ಲಾದೇಶದ ಜನಸಂಖ್ಯೆಯು ಶೇಕಡಾ 3.13ರಷ್ಟು ಹೆಚ್ಚಾಗಿದೆ.

5. ಬ್ರೆಜಿಲ್​ನ ಸಾವೋ

ಸಾವೋ ನಗರವು ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ನಗರಗಳಲ್ಲಿ ಐದನೇ ಸ್ಥಾನದಲ್ಲಿದೆ, 2023 ರಲ್ಲಿ ದೇಶದ ಜನಸಂಖ್ಯೆ 22,619,736 ರಷ್ಟಿತ್ತು, ಇದು 2024 ರಲ್ಲಿ 0.83ರಷ್ಟು ಹೆಚ್ಚಾಗಿ 22,806,704 ಕ್ಕೆ ತಲುಪಿತು.

ಇವುಗಳ ಹೊರತಾಗಿ, 2024 ರಲ್ಲಿ 22,623,874 ಜನಸಂಖ್ಯೆಯಲ್ಲಿ ಈಜಿಪ್ಟ್​ನ ಕೈರೋ ಆರನೇ ಸ್ಥಾನದಲ್ಲಿದೆ, 22,505,315 ಜನಸಂಖ್ಯೆಯಲ್ಲಿ ಮೆಕ್ಸಿಕೋಡ ಮೆಕ್ಸಿಕೋ ನಗರ ಏಳನೇ ಸ್ಥಾನದಲ್ಲಿದೆ, ಮತ್ತು 22,189,082 ಜನಸಂಖ್ಯೆಯು ಚೀನಾದ ಬಿಜಿಂಗ್ ನಗರ ಎಂಟನೇ ಸ್ಥಾನದಲ್ಲಿದೆ. ಒಂಬತ್ತನೇ ಸ್ಥಾನದಲ್ಲಿ 21,673,149 ಜನಸಂಖ್ಯೆ ಹೊಂದಿರುವ ಭಾರತದ ಮುಂಬೈ ನಗರವಿದೆ. ಜಪಾನ್‌ನ ಒಸಾಕಾ ನಗರದ ಹೆಸರು ಹತ್ತನೇ ಮತ್ತು ಕೊನೆಯ ಸ್ಥಾನದಲ್ಲಿದೆ.(ಏಜೆನ್ಸೀಸ್​)