ನ್ಯೂಸ್

ಸೌತ್​ ಇಂಡಿಯಾದ ಈ ಖ್ಯಾತ ನಟಿ ಇಂದಿಗೂ ತಮ್ಮ ಬಟ್ಟೆಗಳನ್ನು ತಾವೇ ಒಗೆಯುತ್ತಾರಂತೆ! South Actress

South Actress : ಓ ಕಾದಲ್​ ಕಣ್ಮಣಿ, 100 ಡೇಸ್​ ಆಫ್​ ಲವ್​, ಕಾಂಚನ -2 ನಂತಹ ಅನೇಕ ಚಲಚಿತ್ರಗಳಲ್ಲಿ ನಟಿಸಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದಂತಹ ನಟಿ ನಿತ್ಯಾ ಮೆನನ್​ ತಮ್ಮ ಬಟ್ಟೆಗಳನ್ನು ತಾವೇ ತೊಳೆಯುತ್ತಾರೆ ಎಂಬ ಮಾತು ಈಗ ಎಲ್ಲಾ ಕಡೆ ಕೇಳಿಬರುತ್ತಿದೆ. ಓ ಕಾದಲ್​ ಕಣ್ಮಣಿ ಚಿತ್ರದ ಸಮಯದಲ್ಲಿ ನಾನು ಡಿಟರ್ಜೆಂಟ್​ ಕೇಳಿದ್ದೆ ಎಂದು ರಮ್ಯಾ ಸುಬ್ರಮಣ್ಯರ ಜೊತೆ ಸಂಭಾಷಣೆಯ ಸಮಯದಲ್ಲಿ ನಟಿ ನಿತ್ಯ ಈ ಮಾತನ್ನು ಹೊರಹಾಕಿದ್ದಾರೆ.

ಮನೆಕೆಲಸಗಾರರ ಕೊರತೆಯಿಂದ ಜನ ಕಂಗಾಲಾಗಿದ್ದನ್ನು ನೋಡಿ, ಜನರು ಇತರರರ ಮೇಲೆ ಎಷ್ಟು ಅವಲಂಭಿತರಾಗಿದ್ದಾರೆ ಎಂದು ಅರಿತುಕೊಂಡಿದ್ದೇನೆ. ಇದು ಒಂದು ರೀತಿಯಲ್ಲಿ ಎಚ್ಚರಿಕೆಯ ಕರೆಯಾಗಿ ನನ್ನ ಮೇಲೆ ಪ್ರಭಾವ ಬೀರಿತು. ಹಾಗಾಗಿ ನನ್ನ ಕೆಲಸವನ್ನು ನಾನೇ ಮಾಡಿಕೊಳ್ಳುತ್ತೇನೆ ಎಂದು ನಿತ್ಯಾ ಬಹಿರಂಗಪಡಿಸಿದ್ದಾರೆ. ತನ್ನ ತಂದೆ ಸಹ ನಾನು ಬಟ್ಟೆ ತೊಳೆಯುವುದನ್ನು ನೋಡಿದ್ದಾರೆ ಆದರೆ, ಯಾರು ಇದನ್ನು ನಂಬುವುದಿಲ್ಲ ಎಂದು ನಿತ್ಯಾ ಹಾಸ್ಯ ಚಟಾಕಿ ಹಾರಿಸಿದರು.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ತ್ಯಾ ನಟನೆಯ ಹೊಸ ಚಲನಚಿತ್ರ ತಲೈವನ್ ತಲೈವಿ ಇದೇ ತಿಂಗಳ ಜುಲೈ 25 ರಂದು ತೆರೆಯ ಮೇಲೆ ಅಬ್ಬರಿಸಲಿದೆ. ಪಡಿರಾಜ್​ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ನಿತ್ಯ ಮೆನನ್​ ಹಗೂ ವಿಜಯ್​ ಸೇತುಪತಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹಾಗೆಯೇ ತಮಿಳು ಸೂಪರ್​ಸ್ಟಾರ್​ ಧನುಷ್​ ಜೊತೆ ಇಡ್ಲಿ ಕಡಾಯ್​ ಚಲನಚಿತ್ರದಲ್ಲಿ ನಟಿಸುತ್ತಿದ್ದಾರೆ.

ನಟಿ, ಗಾಯಕಿ ಹಾಗೂ ಸಿನಿಮಾ ರಂಗದ ಶಕ್ತಿ ನಿತ್ಯಾ ಮೆನನ್

ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಗೌರವಾನ್ವಿತ ಕಲಾವಿದೆಯಾಗಿರುವ ನಿತ್ಯಾ ಮೆನೆನ್, ನಟಿಯಾಗಿ ಮತ್ತು ಹಿನ್ನೆಲೆ ಗಾಯಕಿಯಾಗಿ ಹೊರಹೊಮ್ಮಿದ್ದಾರೆ. ಅವರ ಕಲಾತ್ಮಕ ಕೊಡುಗೆಗಳು ಪ್ರಧಾನವಾಗಿ ಮಲಯಾಳಂ, ತಮಿಳು ಮತ್ತು ತೆಲುಗು ಭಾಷೆಯ ಚಲನಚಿತ್ರಗಳಲ್ಲಿ ವ್ಯಾಪಿಸಿವೆ. ಆದರೂ ಅವರು ಆಯ್ದ ಕನ್ನಡ ಚಲನಚಿತ್ರಗಳಲ್ಲೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. 62 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಇವರು ನಟಿಸಿದ್ದು, ತಮ್ಮ ವೃತ್ತಿಜೀವನದೊಂದಿಗೆ, ಶಕ್ತಿಯುತ ಮಹಿಳಾ ಪಾತ್ರಗಳಿಗೆ ಜೀವ ತುಂಬಿದ್ದಕ್ಕಾಗಿ ನಿತ್ಯಾ ಮೆಚ್ಚುಗೆ ಪಡೆದಿದ್ದಾರೆ.

ಸಿನಿಮಾ ರಂಗದಲ್ಲಿ ಆರಂಭಿಕ ಪಾತ್ರ

ನಿತ್ಯಾ ಫ್ರೆಂಚ್-ಭಾರತೀಯ ಚಲನಚಿತ್ರ ಹನುಮಾನ್ (1998) ನಲ್ಲಿ ಬಾಲನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ಟಬು ತಂಗಿಯ ಪಾತ್ರವನ್ನು ನಿರ್ವಹಿಸಿದರು. 2006 ರಲ್ಲಿ ಕನ್ನಡ ಚಲನಚಿತ್ರ 7 'ಓ'ಕ್ಲಾಕ್' ನಲ್ಲಿ ಕಾಣಿಸಿಕೊಳ್ಳುವ ಮೂಲಕ ನಿತ್ಯಾ ನಟಿಯಾಗಿ ಬಡ್ತಿ ಪಡೆದರು. ಆದಾಗ್ಯೂ, 2011ರಲ್ಲಿ ತೆರೆಕಂಡ ತೆಲುಗು ಪ್ರಣಯ ಹಾಸ್ಯ ಚಿತ್ರ ಅಲಾ ಮೊದಲೈಂಡಿ ನಿತ್ಯಾ ವೃತ್ತಿ ಬದುಕಿನಲ್ಲಿ ಮಹತ್ವದ ತಿರುವು ನೀಡಿತು. ಈ ಚಿತ್ರದ ಯಶಸ್ಸು ಅವರಿಗೆ ಗಮನಾರ್ಹವಾಗಿ ಮನ್ನಡೆಯಲು ಪ್ರೇರೇಪಿಸಿತು. ಹಾಗೇ ಇವರು ಅತ್ಯುತ್ತಮ ನಟಿ ಎಂದು ಪ್ರತಿಷ್ಠಿತ ನಂದಿ ಪ್ರಶಸ್ತಿಗೂ ಭಾಜನರಾದರು.

ತೆಲುಗು ಚಿತ್ರರಂಗದಲ್ಲಿ ಮೆಚ್ಚುಗೆ

ತೆಲುಗು ಚಿತ್ರರಂಗದಲ್ಲಿ ಸತತ ಹಿಟ್​ಗಳಿಂದ ಅವರು ಉನ್ನತಕ್ಕೇರಿದರು. ಅವರು (2012) ಇಷ್ಕ್ ಚಿತ್ರದಲ್ಲಿ ನಟಿಸಿದರು, ನಂತರ (2013)ರಲ್ಲಿ ಗುಂಡೆ ಜಾರಿ ಗಲ್ಲಂತಯ್ಯಿಂಡೆ ಚಿತ್ರದಲ್ಲಿ ನಟಿಸಿದರು, ಈ ಚಿತ್ರದಲ್ಲಿ ಅತ್ಯುತ್ತಮ ನಟನೆಗಾಗಿ ಫಿಲ್ಮ್​ಫೇರ್​ ಪ್ರಶಸ್ತಿ ದೊರೆತಿದೆ. ಮಲ್ಲಿ ಮಲ್ಲಿ ಇದಿ ರಾಣಿ ರೋಜು (2015) ಚಿತ್ರದಲ್ಲಿನ ಪಾತ್ರದೊಂದಿಗೆ ನಿತ್ಯಾ ಅವರ ಖ್ಯಾತಿ ಮತ್ತಷ್ಟು ಹೆಚ್ಚಾಯಿತು. ಈ ಸಿನಿಮಾ ಫಿಲ್ಮ್‌ಫೇರ್ ವಿಮರ್ಶಕರ ಪ್ರಶಸ್ತಿಯನ್ನು ತಂದುಕೊಟ್ಟಿತು.

ತಮಿಳು ಮಲಯಾಳಂ ಚಿತ್ರದಲ್ಲಿ ಯಶಸ್ಸು

ತಮಿಳು ಚಿತ್ರರಂಗದಲ್ಲಿ, ನಿತ್ಯಾ ಮಣಿರತ್ನಂ ಅವರ ಓ ಕಾದಲ್ ಕಣ್ಮಣಿ (2015) ಎಂಬ ಪ್ರಣಯ ಚಿತ್ರದೊಂದಿಗೆ ಪ್ರಾಮುಖ್ಯತೆ ಪಡೆದರು. ಮಲಯಾಳಂ ಚಿತ್ರರಂಗದಲ್ಲಿ ಅವರ ವೃತ್ತಿಜೀವನವು ಉಸ್ತಾದ್ ಹೋಟೆಲ್ (2012), ಸಮಗ್ರ ನಾಟಕ ಬೆಂಗಳೂರು ಡೇಸ್ (2014), ಮತ್ತು 100 ಡೇಸ್ ಆಫ್ ಲವ್ (2015) ನಂತಹ ಸಿನಿಮಾಗಳು ಅವರ ಖ್ಯಾತಿಯನ್ನು ಹೆಚ್ಚಿಸಿತು. ಅವರ ಜನಪ್ರಿಯತೆಯನ್ನು ಹೆಚ್ಚಿಸಿದ ಇತರ ತಮಿಳು ಚಿತ್ರಗಳು ಕಾಂಚನಾ 2 , 24 ಹಾಗೂ ಮೆರ್ಸಲ್ (2017) ನಟನೆಗೆ ಫಿಲ್ಮ್​ ಫೇರ್​ ಪ್ರಶಸ್ತಿ ಕೂಡಾ ಲಭ್ಯವಾಗಿದೆ.

ಇತ್ತೀಚಿನ ಪುರಸ್ಕಾರಗಳು ಮತ್ತು ಪರಂಪರೆ

2022 ರಲ್ಲಿ, ತಿರುಚಿತ್ರಂಬಲಂ ಚಿತ್ರದಲ್ಲಿನ ಅವರ ಅಭಿನಯವು ಅದ್ಭುತ ಪ್ರಶಂಸೆಗೆ ಪಾತ್ರವಾಯಿತು. ಅವರಿಗೆ ತಮಿಳು ಚಿತ್ರದ ನಟನೆಗೆ ಫಿಲ್ಮ್‌ಫೇರ್ ವಿಮರ್ಶಕರ ಪ್ರಶಸ್ತಿ, ಹಾಗೂ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ದೊರೆತಿದೆ. ನಿತ್ಯಾ ಮೆನನ್ ತಮ್ಮ ಪ್ರತಿಭೆ, ಬಹು ಪಾತ್ರಗಳಿಗೆ ಜೀವ ತುಂಬಿದ್ದು, ಎಲ್ಲಾ ಭಾಷೆಗಳ ಪ್ರೇಕ್ಷಕರನ್ನು ಪ್ರೇರೇಪಿಸುತ್ತಿದ್ದಾರೆ. (ಏಜೆನ್ಸೀಸ್​)