ನ್ಯೂಸ್

ಈ ಮುದ್ದು ಮಗು ಮುಂದೆ ಬಿಗ್ ಬಾಸ್ ಖ್ಯಾತಿ ಗಳಿಸಿದಾಕೆ... ಯಾರೆಂದು ಊಹಿಸಬಲ್ಲಿರಾ?!

ನವದೆಹಲಿ : ಬಿಗ್ ಬಾಸ್​ ಶೋಗೂ ಈಕೆಗೂ ಅದೇನೋ ನಂಟು! 2006 ರಲ್ಲಿ ಹಿಂದಿ ಬಿಗ್ ಬಾಸ್ ಸರಣಿಯ ಮೊದಲನೇ ಕಂತು ಬಂದಾಗ ಅದರಲ್ಲಿ ಭಾಗಿಯಾಗಿ ಭಾರೀ ಸುದ್ದಿ ಮಾಡಿದ್ದಳು. ಇತ್ತೀಚೆಗೆ ಪೂರೈಸಿದ ಬಿಗ್ ಬಾಸ್ 14 ರಲ್ಲೂ ಚಾಲೆಂಜರ್ ಆಗಿ ವಾಪಸ್ ಬಂದಿದ್ದಳು. ಯಾರೆಂದು ಗೊತ್ತಾಯಿತೇ? ಹೌದು, ಇದು ನಟಿ ಮತ್ತು ರೂಪದರ್ಶಿಯಾದ ರಾಖಿ ಸಾವಂತ್.

ನಲವತ್ತೆರಡು ವರ್ಷ ವಯಸ್ಸಿನ ರಾಖಿ, ಇತ್ತೀಚೆಗೆ ತಮ್ಮ ಇನ್ಸ್​ಸ್ಟಾಗ್ರಾಂ ಖಾತೆಯಲ್ಲಿ ಕೆಲವು ಹಳೆಯ ಫೋಟೋಗಳನ್ನು ಶೇರ್ ಮಾಡಿದ್ದರು. ಅವುಗಳಲ್ಲಿ ತಮ್ಮ ಮಗುವಾಗಿನ ಫೋಟೋ ಜೊತೆಗೆ ಮಾಡೆಲ್ಲಿಂಗ್ ದಿನಗಳ ಫೋಟೋಗಳೂ ಇದ್ದವು. ಎಷ್ಟೋ ಚಿತ್ರಗಳಲ್ಲಿ ಅವರನ್ನು ಗುರುತು ಹಿಡಿಯುವುದೂ ಕಷ್ಟವಾಗಿತ್ತು. ಈ ಆಲ್ಬಂನೊಂದಿಗೆ ರಾಖಿ, "ಬಾಲ್ಯದಿಂದ ಇಲ್ಲಿನವರೆಗಿನ ಪಯಣ.. ನನ್ನ ಜೀವನದಲ್ಲಿ ಏಳುಬೀಳುಗಳನ್ನು ಕಂಡಿರುವ ಬಗ್ಗೆ ನನಗೆ ಸಂತೋಷವಿದೆ" ಎಂದು ಬರೆದಿದ್ದರು.

ರಾಖಿ ಸಾವಂತ್, 2006 ರಲ್ಲಿ ಮೊದಲ ಬಾರಿ ಬಿಗ್ ಬಾಸ್ ಮನೆಗೆ ಬಂದಾಗ ತಮ್ಮ ವಿಭಿನ್ನ ಶೈಲಿಗಳಿಂದ ಪ್ರೇಕ್ಷಕರ ಗಮನ ಸೆಳೆದಿದ್ದರು. ಇದೀಗ ಬಿಗ್ ಬಾಸ್ 14 ಸರಣಿಯಲ್ಲಿ ಭಾಗವಹಿಸಿದ ಹಲವಾರು ಸೆಲೆಬ್ರಿಟಿಗಳೊಂದಿಗೆ ಚಾಲೆಂಜರ್ ಆಗಿ ಪುನಃ ಎಂಟ್ರಿ ಕೊಟ್ಟಿದ್ದರು. 2021 ರ ಫೆಬ್ರವರಿ 21 ರ ಕೊನೆಯ ಎಪಿಸೋಡ್​ನ ದಿನ ಆಕೆ 14 ಲಕ್ಷ ರೂಪಾಯಿ ಪಡೆದು ಶೋನಿಂದ ಹೊರಬಂದರು. ಈ ಹಣವನ್ನು ಗೆದ್ದ ಸದಸ್ಯರಿಂದ ಮುಂಚಿನ ಒಂದು ಟ್ಯಾಸ್ಕ್ ಸಮಯದಲ್ಲಿ ಕಡಿತಗೊಳಿಸಲಾಗಿತ್ತು. ತಮ್ಮ ತಾಯಿಗೆ ಕ್ಯಾನ್ಸರ್ ಚಿಕಿತ್ಸೆ ಮಾಡಿಸುತ್ತಿರುವ ರಾಖಿ ಈ ಹಣವನ್ನೂ ಅದಕ್ಕಾಗೇ ಬಳಸುವುದಾಗಿ ಹೇಳಿದ್ದರು. (ಏಜೆನ್ಸೀಸ್)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ