ನ್ಯೂಸ್

580% ಮಧ್ಯಂತರ ಲಾಭಾಂಶ ನೀಡಲು ಸಜ್ಜಾಗಿದೆ ಈ ಕಂಪನಿ: ಈ ಸಂಸ್ಥೆಯ ಷೇರಿಗೆ ಈಗ ಕುದುರಿದೆ ಬೇಡಿಕೆ

ಮುಂಬೈ: ಬರುವ ಜ. 26ರಂದು ಈ ಕಂಪನಿಯು ತನ್ನ ಷೇರುದಾರರಿಗೆ ಮಧ್ಯಂತರ ಲಾಭಾಂಶ (ಇಂಟರಿಮ್​ ಡಿವಿಡೆಂಡ್​ ) ನೀಡಲು ಸಜ್ಜಾಗಿದೆ.

ಅದು ಎಷ್ಟು ಲಾಭಾಂಶ ನೀಡಲಿದೆಯೇ ಗೊತ್ತೆ? ಬರೋಬ್ಬರಿ 580% ಇಂಟರಿಮ್​ ಡಿವಿಡೆಂಡ್: 10 ರೂಪಾಯಿ ಮುಖಬೆಲೆಯ ಪ್ರತಿ ಈಕ್ವಿಟಿ ಷೇರಿಗೆ 58 ರೂಪಾಯಿ ಲಾಭಾಂಶವನ್ನು ನೀಡಲಿದೆ.

ಈ ಕಂಪನಿಯ ಹೆಸರು ಕೆಡಿಡಿಎಲ್ ಲಿಮಿಟೆಡ್​​ (KDDL Ltd). ರತ್ನಗಳು, ಆಭರಣಗಳು ಮತ್ತು ಕೈಗಡಿಯಾರಗಳ ವ್ಯವಹಾರದಲ್ಲಿ ತೊಡಗಿರುವ ಕಂಪನಿ ಇದಾಗಿದೆ.

ಸ್ಮಾಲ್ ಕ್ಯಾಪ್ ಕಂಪನಿಯಾದ ಕೆಡಿಡಿಎಲ್ ಷೇರುಗಳು ಗುರುವಾರ ಶೇಕಡಾ 1.11% ರಷ್ಟು ಏರಿಕೆ ಕಂಡಿವೆ. ಅಲ್ಲದೆ, ಶುಕ್ರವಾರದಂದು ಈ ಕಂಪನಿಯ ಷೇರು ಅಂದಾಜು 70 ರೂಪಾಯಿ (ಶೇ. 2.3ರಷ್ಟು) ಏರಿಕೆ ಕಂಡು, ಅಂದಾಜು 2826 ರೂಪಾಯಿಗೆ ಮಾರಾಟವಾಗಿದೆ.

2023-24 ರ ಆರ್ಥಿಕ ವರ್ಷಕ್ಕೆ ಪ್ರತಿ ಈಕ್ವಿಟಿ ಷೇರಿಗೆ 58 ರೂ (ಅಂದರೆ 580%) ಮಧ್ಯಂತರ ಲಾಭಾಂಶ ನೀಡುವುದು ಕಂಪನಿಯ ನಿರ್ದೇಶಕರ ಮಂಡಳಿ ಪರಿಗಣಿಸಿ ಅನುಮೋದಿಸಿದೆ ಎಂದು ಪ್ರಕಟಣೆ ಹೊರಡಿಸಿದ ನಂತರ ಈ ಕಂಪನಿಯ ಷೇರು ಬೆಲೆಯಲ್ಲಿ ಸಾಕಷ್ಟು ಹೆಚ್ಚಳವಾಗಿದೆ.

ಕಳೆದ ಒಂದು ವರ್ಷದ ಅವಧಿಯಲ್ಲಿ ಕೆಡಿಡಿಎಲ್​ ಷೇರುಗಳು 160% ಹೆಚ್ಚಾಗಿವೆ. ಕಳೆದ ಆರು ತಿಂಗಳ ಅವಧಿಯಲ್ಲಂತೂ ಈ ಕಂಪನಿಯ ಷೇರುಗಳ ಬೆಲೆ ಶೇಕಡಾ 188 ರಷ್ಟು ಹೆಚ್ಚಾಗಿದೆ. ಮೂರು ವರ್ಷಳಲ್ಲಿ 1,103.38%ರಷ್ಟು ಏರಿಕೆಯಾಗಿವೆ.

ಕೆಡಿಡಿಎಲ್ ಲಿಮಿಟೆಡ್‌ನ ("ಕಂಪನಿ") ನಿರ್ದೇಶಕರ ಮಂಡಳಿಯು ಗುರುವಾರ, ಜನವರಿ 18, 2024 ರಂದು ನಡೆದ ಸಭೆಯಲ್ಲಿ, ಪ್ರತಿ ಈಕ್ವಿಟಿ ಷೇರಿಗೆ ರೂ 58 (ಅಂದರೆ 580%) ಮಧ್ಯಂತರ ಲಾಭಾಂಶ ನೀಡಲು ಅನುಮೋದಿಸಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

2023-24 ರ ಹಣಕಾಸು ವರ್ಷಕ್ಕೆ ಮಧ್ಯಂತರ ಲಾಭಾಂಶ ಪಾವತಿಗಾಗಿ ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಪಟ್ಟಿ ಮಾಡುವ ಹೊಣೆಗಾರಿಕೆಗಳು ಮತ್ತು ಬಹಿರಂಗಪಡಿಸುವಿಕೆಯ ಅಗತ್ಯತೆಗಳು) ನಿಯಮಗಳು, 2015 ರ ನಿಯಮಾವಳಿ 42 ರ ಮೂಲಕ ಇದನ್ನು ನಿಮಗೆ ತಿಳಿಸಲಾಗುತ್ತಿದೆ ಎಂದು ಕಂಪನಿ ಹೇಳಿದೆ.

ಕೆಡಿಡಿಎಲ್​ಲಿಮಿಟೆಡ್ ಸ್ಟಾಕ್‌ನ 52 ವಾರದ ಗರಿಷ್ಠವು ರೂ 3,110 ಮತ್ತು 52 ವಾರಗಳ ಕನಿಷ್ಠ ರೂ 984.65 ಆಗಿದೆ. ಕಂಪನಿಯ ಮಾರುಕಟ್ಟೆ ಬಂಡವಾಳ 3,548.74 ಕೋಟಿ ರೂಪಾಯಿಗೆ ಏರಿದೆ.

ಕೆಡಿಡಿಎಲ್​ ಲಿಮಿಟೆಡ್​, 1981 ರಲ್ಲಿ ಸ್ಥಾಪನೆಯಾದ ಭಾರತ ಮೂಲದ ಎಂಜಿನಿಯರಿಂಗ್ ಕಂಪನಿಯಾಗಿದೆ. ಕಂಪನಿಯು ವಾಚ್ ಡಯಲ್‌ಗಳು, ವಾಚ್ ಹ್ಯಾಂಡ್‌ಗಳು ಮತ್ತು ನಿಖರ ಎಂಜಿನಿಯರಿಂಗ್ ಘಟಕಗಳನ್ನು ತಯಾರಿಸುತ್ತದೆ.

ಕಂಪನಿಯ ವಿಭಾಗಗಳಲ್ಲಿ ಕೈಗಡಿಯಾರಗಳು ಮತ್ತು ಪರಿಕರಗಳು, ಮಾರ್ಕೆಟಿಂಗ್ ಬೆಂಬಲ ಮತ್ತು ಇತರ ಸೇವೆಗಳು, ಐಷಾರಾಮಿ ಕಾರುಗಳು ಮತ್ತು ಇತರವು ಸೇರಿವೆ.

ಮಾರ್ಕೆಟಿಂಗ್ ಬೆಂಬಲ ಮತ್ತು ಇತರ ಸೇವೆಗಳ ವಿಭಾಗವು ಮಾಹಿತಿ ತಂತ್ರಜ್ಞಾನ ಆಧಾರಿತ ವ್ಯಾಪಾರ ಪರಿಹಾರಗಳನ್ನು ನೀಡುತ್ತದೆ. ಇತರ ವಿಭಾಗವು ಪ್ಯಾಕೇಜಿಂಗ್ ಬಾಕ್ಸ್‌ಗಳನ್ನು ತಯಾರಿಸುತ್ತದೆ ಮತ್ತು ವಿತರಿಸುತ್ತದೆ.

ಕಂಪನಿಯ ಅಂಗಸಂಸ್ಥೆಯಾದ ಎಥೋಸ್ ಲಿಮಿಟೆಡ್, ಸಂಘಟಿತ ವಲಯದಲ್ಲಿ ಐಷಾರಾಮಿ ಸ್ವಿಸ್ ವಾಚ್‌ಗಳ ಚಿಲ್ಲರೆ ಸರಪಳಿಯನ್ನು ನಿರ್ವಹಿಸುತ್ತದೆ. ಕಂಪನಿಯು ಪವನ್ಯೂ, ದೇರಾಬಸ್ಸಿ ಮತ್ತು ಬೆಂಗಳೂರಿನಲ್ಲಿ ಉತ್ಪಾದನಾ ಸೌಲಭ್ಯಗಳನ್ನು ಹೊಂದಿದೆ.