ಹಾಥರಸ್ ಸಾಮೂಹಿಕ ಅತ್ಯಾಚಾರ ಪ್ರಕರಣದ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಅದರಲ್ಲೂ ಕಾಂಗ್ರೆಸ್ ಸೇರಿ..ಪ್ರತಿಪಕ್ಷಗಳಂತೂ ಯೋಗಿ ಆದಿತ್ಯನಾಥ್ ಸರ್ಕಾರ, ಉತ್ತರ ಪ್ರದೇಶ ಪೊಲೀಸರ ಕ್ರಮವನ್ನು ತೀವ್ರವಾಗಿ ಖಂಡಿಸುತ್ತಿವೆ. ಪ್ರತಿಭಟನೆ, ಹೋರಾಟವನ್ನು ದೊಡ್ಡಮಟ್ಟದಲ್ಲಿಯೇ ಮಾಡುತ್ತಿವೆ.
ಪ್ರತಿಪಕ್ಷಗಳ ಈ ವರ್ತನೆ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರು ಕಿಡಿಕಾರಿದ್ದಾರೆ. ಪ್ರತಿಪಕ್ಷಗಳು ಅಂತಾರಾಷ್ಟ್ರೀಯ ಧನ ಸಹಾಯ ಪಡೆದು, ಇಲ್ಲಿ ಜಾತಿ ಮತ್ತು ಕೋಮುಗಲಭೆಯನ್ನು ಸೃಷ್ಟಿಸಲು ಅಡಿಪಾಯ ಹಾಕುವ ಮೂಲಕ ನಮ್ಮ ವಿರುದ್ಧ ಪಿತೂರಿ ನಡೆಸುತ್ತಿವೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಶಿಕ್ಷಣ ಸಚಿವ ಸುರೇಶ್ ಕುಮಾರ್ಗೆ ಕರೊನಾ ಸೋಂಕು; ಮನೆಯಲ್ಲೇ ಕ್ವಾರಂಟೈನ್
ಕಳೆದ ಒಂದು ವಾರದಿಂದಲೂ ವಿರೋಧ ಪಕ್ಷಗಳು ಎಬ್ಬಿಸುತ್ತಿರುವ ಗಲಭೆಯನ್ನು ನೋಡುತ್ತಲೇ ಇದ್ದೇವೆ. ಈ ಪಿತೂರಿನ ಮಧ್ಯೆ ನಾವು ಮುಂದೆ ಹೆಜ್ಜೆ ಇಡಬೇಕಾಗಿದೆ ಎಂದು ಯೋಗಿ ಹೇಳಿದರು.
ನಮ್ಮ ರಾಜ್ಯದಲ್ಲಿ ಆಗಿರುವ ಅಭಿವೃದ್ಧಿಯನ್ನು ಸಹಿಸಲು ದೇಶ ವಿರೋಧಿಗಳಿಗೆ ಸಾಧ್ಯವಾಗುತ್ತಿಲ್ಲ. ಬಿಜೆಪಿ ಕಾರ್ಯಕರ್ತರು ಈ ರಾಷ್ಟ್ರದ ಅಭಿವೃದ್ಧಿಗೆ ಹೆಚ್ಚು ಶ್ರಮಿಸಬೇಕು. ಸಮರ್ಪಣಾ ಭಾವದಿಂದ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. (ಏಜೆನ್ಸೀಸ್)