ನ್ಯೂಸ್

ಈ ಮೂರು ರಾಶಿಯವರಿಗೆ ಜಗಳ ಆಡುವುದರೆಂದರೆ ಬಲು ಇಷ್ಟ! ನೀವು ಕೂಡ ಇದೇ ರಾಶಿನಾ? Zodiac Signs

Zodiac Signs : ಜಗಳ ಅನ್ನೋದು ನಮ್ಮ ಜೀವನದ ಒಂದು ಭಾಗ. ಎಲ್ಲಿ ಜಗಳ ಇರುತ್ತದೋ ಅಲ್ಲಿ ಪ್ರೀತಿ ಕೂಡ ಇರುತ್ತದೆ ಎನ್ನುತ್ತಾರೆ. ಜಗಳಗಳು ಇಲ್ಲದ ಮನೆಯೇ ಇಲ್ಲ. ಹಾಗಾಂತ ಜಗಳ ತುಂಬಾ ಒಳ್ಳೆಯದಲ್ಲ. ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಜಗಳ ತನ್ನ ಮಿತಿ ಮೀರಿದರೆ ಅಪಾಯಕ್ಕೂ ಎಡೆಮಾಡಿಕೊಡುತ್ತದೆ. ಹೀಗಾಗಿ ಯಾವುದೇ ಜಗಳ ಆಗಿರಲಿ ಹಿಡಿತದಲ್ಲಿರಬೇಕು. ಹಿಡಿತ ತಪ್ಪಿದರೆ ಒಬ್ಬರ ಪ್ರಾಣವನ್ನು ಕೂಡ ಕಸಿದುಕೊಳ್ಳಬಲ್ಲದು.

ಇನ್ನು ಮನುಷ್ಯನ ಸ್ವಭಾವ ಹೇಗೆಂದರೆ, ಕೆಲವರಿಗೆ ಜಗಳ ಅಂದರೆ ಅಲರ್ಜಿ. ಯಾರಾದರೂ ಜಗಳ ಆಡುತ್ತಿದ್ದರೆ ಅದನ್ನು ನೋಡಲು ಕೂಡ ಇಷ್ಟಪಡುವುದಿಲ್ಲ. ಇನ್ನು ಕೆಲವರಿಗೆ ಜಗಳ ಎಂದರೆ ಏನೋ ಒಂದು ಕುತೂಹಲ. ಅಲ್ಲದೆ, ಜಗಳ ಆಡಲು ಸದಾ ಮುಂದಾಗಿರುತ್ತಾರೆ. ಯಾವುದಾದರೂ ಸಣ್ಣ ಸಮಸ್ಯೆ ಎದುರಾದಾಗ ಕೆಲವರು ಅದನ್ನು ಮಾತಿನಿಂದಲೇ ಬಗೆಹರಿಸಿಕೊಂಡರೆ, ಕೆಲವರು ಅದೇ ನೆಪ ಮಾಡಿಕೊಂಡು ಜಗಳಕ್ಕೆ ನಿಂತು ಬಿಡುತ್ತಾರೆ. ಇದೆಲ್ಲವು ಮನಷ್ಯನ ವ್ಯಕ್ತಿತ್ವ ಮತ್ತು ಗುಣದ ಮೇಲೆ ಅವಲಂಬಿತವಾಗಿರುತ್ತದೆ.

ಅಂದಹಾಗೆ, ಒಬ್ಬ ವ್ಯಕ್ತಿಯ ಜನ್ಮ ರಾಶಿ ಮತ್ತು ನಕ್ಷತ್ರವು ಆತನ ಭವಿಷ್ಯ ಜೀವನ, ಆರ್ಥಿಕ ಪರಿಸ್ಥಿತಿ, ಪ್ರೇಮ ಜೀವನ, ವಿಶೇಷ ವ್ಯಕ್ತಿತ್ವಗಳು ಮತ್ತು ಅವರ ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ. ಅದೇ ರೀತಿ, ಕೆಲವು ರಾಶಿಗಳಲ್ಲಿ ಜನಿಸಿದ ಜನರು ಎಲ್ಲಾ ಸಂದರ್ಭಗಳಲ್ಲಿಯೂ ಜಗಳ ಮಾಡುವ ಪ್ರವೃತ್ತಿ ಹೊಂದಿರುತ್ತಾರಂತೆ. ಅಲ್ಲದೆ, ಅವರ ತ್ವರಿತ ಕೋಪ ಮತ್ತು ಆತುರದ ಸ್ವಭಾವವು ಅವರಿಗೆ ಸಮಸ್ಯೆಗಳನ್ನು ಉಂಟುಮಾಡುವ ಸಾಧ್ಯತೆ ಹೆಚ್ಚಿಸುತ್ತದೆ. ಹಾಗಾದರೆ, ಯಾವಾಗಲೂ ಘರ್ಷಣೆಗಳನ್ನು ಉಂಟುಮಾಡುವ ಜಗಳಗಂಟಿ ರಾಶಿಗಳು ಯಾವುವು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

ಮೇಷ ರಾಶಿ

ಸಣ್ಣದೊಂದು ಸಮಸ್ಯೆಗೂ ಜ್ವಾಲಾಮುಖಿಯಂತೆ ಸ್ಫೋಟಗೊಳ್ಳುವ ಮೇಷ ರಾಶಿಯವರು ಸ್ವಾಭಾವಿಕವಾಗಿಯೇ ಜಗಳದ ಮೇಲೆ ಹೆಚ್ಚು ಉತ್ಸುಕರಾಗಿರುತ್ತಾರೆ. ಅವರು ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಬಹುದಾದರೂ, ಸಂಘರ್ಷಗಳನ್ನು ಸೃಷ್ಟಿಸುವುದರಲ್ಲೇ ತೃಪ್ತರಾಗಿರುತ್ತಾರೆ. ಯುದ್ಧ ಮತ್ತು ಧೈರ್ಯದ ಗ್ರಹವಾದ ಮಂಗಳ ಗ್ರಹದ ಆಳ್ವಿಕೆಯಲ್ಲಿ, ಈ ರಾಶಿಯವರು ಸ್ವಾಭಾವಿಕವಾಗಿ ದಂಗೆಯನ್ನು ಪ್ರೋತ್ಸಾಹಿಸುವ ಪ್ರವೃತ್ತಿಯನ್ನು ಹೊಂದಿರುತ್ತಾರೆ.

ಮಿಥುನ ರಾಶಿ

ಸಂವಹನ ಗ್ರಹವಾದ ಬುಧದಿಂದ ಆಳಲ್ಪಡುವ ಮಿಥುನ ರಾಶಿಯವರು ತಮ್ಮ ಕರುಣಾಳು ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಅವರು ಹೊರಗೆ ಶಾಂತವಾಗಿ ಕಾಣಿಸಿಕೊಂಡರೂ, ಜಗಳವಾಡುವ ಬಲವಾದ ಬಯಕೆಯನ್ನು ಹೊಂದಿರುತ್ತಾರೆ. ಮಾತನಾಡಲು ಮತ್ತು ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು ಇಷ್ಟಪಡುತ್ತಾರೆ. ಆದರೆ, ಆಗಾಗ ಅವರ ಸಂದೇಶಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತದೆ. ಇದು ಜಗಳಗಳಿಗೆ ಪ್ರಮುಖ ಕಾರಣವಾಗಬಹುದು. ಈ ಜನರಿಗೆ ಅರ್ಥಮಾಡಿಕೊಳ್ಳುವ ಬಯಕೆ ಇಲ್ಲದಿರುವುದರಿಂದ, ಸಂಘರ್ಷದ ಸಾಧ್ಯತೆ ಹೆಚ್ಚು. ವಿಶೇಷವಾಗಿ ಈ ರಾಶಿಚಕ್ರ ಚಿಹ್ನೆಯು ಮಾತನಾಡುವ ಮೊದಲು ಯೋಚಿಸುವುದಿಲ್ಲ.

ಸಿಂಹ ರಾಶಿ

ಹುಟ್ಟಿನಿಂದಲೇ ಸೂರ್ಯನ ಆಳ್ವಿಕೆಗೆ ಒಳಪಡುವ ಸಿಂಹ ರಾಶಿಯವರು ತಮ್ಮ ಹೆಮ್ಮೆ ಮತ್ತು ಪ್ರಾಬಲ್ಯದ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಅವರಿಗೆ ತಾಳ್ಮೆ ಕಡಿಮೆ. ಅವರು ಯಾವಾಗಲೂ ಜನಪ್ರಿಯರಾಗಿರಲು ಬಯಸುತ್ತಾರೆ ಮತ್ತು ಅವರಿಗೆ ಅರ್ಹವಾದ ನಾಯಕತ್ವ ಸಿಗದಿದ್ದಾಗ ಅವರು ಖಂಡಿತವಾಗಿಯೂ ಸಂಘರ್ಷಕ್ಕೆ ಇಳಿಯುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಅವರು ಗೌರವ ಮತ್ತು ಗಮನವನ್ನು ಪಡೆಯುವ ದೃಢನಿಶ್ಚಯ ಹೊಂದಿರುತ್ತಾರೆ. ಅದು ಸಂಭವಿಸದಿದ್ದಾಗ, ಅವರು ಸುಲಭವಾಗಿ ಕೋಪಗೊಳ್ಳುತ್ತಾರೆ ಮತ್ತು ಪರಿಸ್ಥಿತಿಯನ್ನು ಆಕ್ರಮಣಕಾರಿಯಾಗಿ ಪರಿವರ್ತಿಸಲು ಹಿಂಜರಿಯುವುದಿಲ್ಲ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.