ನ್ಯೂಸ್

ಈ ಹದಿನೇಳು ಔಷಧ ಕಸದ ಬುಟ್ಟಿಗೆ ಎಸೆಯುವಂತಿಲ್ಲ!

ನವದೆಹಲಿ: ಸಾರ್ವಜನಿಕರ ಸುರಕ್ಷತೆ ಮತ್ತು ಪರಿಸರ ಸಂರಕ್ಷಣೆಗಾಗಿ ಅವಧಿ ಮೀರಿದ ಅಥವಾ ಬಳಸದ ಈ 17 ಔಷಧಗಳನ್ನು ಕಸದ ಬುಟ್ಟಿಗೆ ಎಸೆಯಬಾರದು, ಅದರ ಬದಲು ಶೌಚಗೃಹದಲ್ಲಿ ಹಾಕಿ ಫ್ಲಷ್ ಮಾಡಬೇಕು ಎಂದು ಸೆಂಟ್ರಲ್ ಡ್ರಗ್ಸ್ ಸ್ಟಾ್ಯಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್ (ಸಿಡಿಎಸ್​ಸಿಒ) ಸಲಹೆ ನೀಡಿದೆ.

ಸಾಮಾನ್ಯವಾಗಿ ಜನರು ಅವಧಿ ಮೀರಿದ ಅಥವಾ ಬಳಸದ ಔಷಧಗಳನ್ನು ಕಸದ ಬುಟ್ಟಿಗೆ ಎಸೆಯುತ್ತಾರೆ. ಅಂಥ ಔಷಧಗಳ ದುರ್ಬಳಕೆ ತಡೆಯಲು ಮತ್ತು ಅದರಿಂದ ಪರಿಸರದ ಮೇಲೆ ಆಗುತ್ತಿರುವ ಹಾನಿ ತಗ್ಗಿಸಲು ಸಿಡಿಎಸ್​ಸಿಒ ಕ್ರಮಕೈಗೊಳ್ಳಲು ಮುಂದಾಗಿದ್ದು, ಕಸದ ಬುಟ್ಟಿಗೆ ಎಸೆಯಬಾರದ 17 ಔಷಧಗಳ ಪಟ್ಟಿ ಬಿಡುಗಡೆ ಮಾಡಿದೆ. ಅಂಥ ಔಷಧವನ್ನು ಅವಧಿ ಮುಗಿದ ಬಳಿಕ ಆಕಸ್ಮಿಕವಾಗಿ ಸೇವಿಸಿದರೆ ಜೀವಕ್ಕೆ ಹಾನಿ ಆಗಬಹುದು ಅಥವಾ ಅವುಗಳ ದುರ್ಬಳಕೆ ಸಾಧ್ಯತೆ ಇರುತ್ತದೆ. ಹಾಗಾಗಿ ಕಸದ ಬುಟ್ಟಿಗೆ ಎಸೆಯದೆ ಶೌಚಗೃಹದಲ್ಲಿ ಹಾಕಿ ಫ್ಲಷ್ ಮಾಡಬೇಕು ಎಂದು ಸಿಡಿಎಸ್​ಸಿಒ ತಿಳಿಸಿದೆೆ. ಇತ್ತೀಚೆಗೆ ಏಮ್್ಸ ತಜ್ಞರು ನಡೆಸಿದ ಅಧ್ಯಯನದಲ್ಲಿ ಸಿಡಿಎಸ್​ಸಿಒ ಪಟ್ಟಿ ಮಾಡಿರುವ ಆಂಟಿಬಯೊಟಿಕ್​ಗಳು ಸೇರಿ ಹಲವು ಆಂಟಿಬಯೊಟಿಕ್​ಗಳ ಅಂಶ ಯಮುನಾ ನದಿ ಮತ್ತು ಗಾಜಿಪುರ ಕಸ ವಿಲೇವಾರಿ ಘಟಕದ ಬಳಿ ಹೆಚ್ಚಿನ ಪ್ರಮಾಣದಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸಲು ಈ ಕ್ರಮಕೈಗೊಂಡಿದೆ.

ಯಾವ್ಯಾವ ಔಷಧ ?

ಪ್ರಬಲ ಒಪಿಯಾಯ್್ಡಳು, ಸೈಕೋ ಟ್ರೋಫಿಕ್ ರಾಸಾಯನಿಕಗಳಿರುವ ಫೆಂಟನಿಲ್, ಟ್ರಾಮಾಡಾಲ್, ಮಾರ್ಫಿನ್ ಸಲ್ಪೇಟ್, ಬುಪ್ರೆನಾರ್ಫಿನ್, ಮೀಥೈಲ್ಪಿನಿಡೇಟ್, ಟ್ಯಾಪೆಂಟಾಡಾಲ್, ಆಕ್ಸಿಕೊಡೋನ್ ಮತ್ತು ಡಯಾಜೆಪಮ್ ಸೇರಿ 17 ಔಷಧಗಳಿಗೆ ಇದು ಅನ್ವಯ.