ನ್ಯೂಸ್

ಈ ಟಿವಿ ಶೋಗಳು ಭಾರತದಲ್ಲಿ ಮಾತ್ರವಲ್ಲದೆ, ವಿದೇಶಗಳಲ್ಲೂ ಜನಪ್ರಿಯವಾಗಿವೆ..!

ಕಿರುತೆರೆಯಲ್ಲಿ ಪ್ರಸಾರವಾಗುವ ಅನೇಕ ಧಾರಾವಾಹಿಗಳು ಹಲವಾರು ವರ್ಷಗಳಿಂದ ಜನ ಮನ ಗೆಲ್ಲುತ್ತಿವೆ. ಅನೇಕ ಧಾರಾವಾಹಿಗಳಿಗೆ ಪ್ರೇಕ್ಷಕರು ಎಷ್ಟರ ಮಟ್ಟಿಗೆ ಅಡಿಕ್ಟ್ ಆಗಿದ್ದಾರೆ ಎಂದರೆ ಮರುಪ್ರಸಾರವಾದರೂ ಅದನ್ನು ಕಣ್ಣ ರೆಪ್ಪೆ ಮುಚ್ಚದಂತೆ ನೋಡುತ್ತಾರೆ. ಇಲ್ಲಿ ಭಾರತದಲ್ಲಿ ಮಾತ್ರವಲ್ಲದೆ, ವಿದೇಶಗಳಲ್ಲಿಯೂ ಜನರು ವೀಕ್ಷಿಸುವ ಆ ಹಿಂದಿ ಧಾರಾವಾಹಿಗಳು ಯಾವುದೆಂದು ತಿಳಿಯೋಣ ಬನ್ನಿ...

ಬಡೇ ಅಚ್ಚೆ ಲಗ್ತೆ ಹೈ
ನಕುಲ್ ಮತ್ತು ದಿಶಾ ಪರ್ಮಾರ್ ನಟನೆಯ ಬಡೇ ಅಚ್ಚೆ ಲಗ್ತೆ ಹೈ 2 ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿತು. ವರದಿಗಳ ಪ್ರಕಾರ ಇದು 2011 ರಲ್ಲಿ ಭಾರತದಲ್ಲಿ ಅತಿ ಹೆಚ್ಚು ವೀಕ್ಷಿಸಿದ ಏಳನೇ ದೂರದರ್ಶನ ಕಾರ್ಯಕ್ರಮವಾಗಿದೆ.

ಅನುಪಮಾ
ಅನುಪಮಾ ಅತಿ ಹೆಚ್ಚು ಟಿಆರ್​​ಪಿ ಕಂಡ ಶೋ ಆಗಿದೆ. ಈ ಧಾರವಾಹಿ ಕೂಡ ಭಾರತೀಯರಿಗೆ ಮಾತ್ರವಲ್ಲದೆ, ವಿದೇಶಿಯರಿಗೂ ತುಂಬಾ ಇಷ್ಟವಾಗಿದೆ. ಇದು 13 ಜುಲೈ, 2020 ರಂದು ಪ್ರಸಾರವಾಯಿತು. ಧಾರಾವಾಹಿಯಲ್ಲಿ ರೂಪಾಲಿ ಗಂಗೂಲಿ, ಸುಧಾಂಶು ಪಾಂಡೆ , ಮದಾಲ್ಸಾ ಶರ್ಮಾ ಚಕ್ರವರ್ತಿ ಮತ್ತು ಗೌರವ್ ಖನ್ನಾ ನಟಿಸಿದ್ದಾರೆ.

ಫನಾ-ಇಷ್ಕ್​​​ ಮೇ ಮರ್ಜವಾನ್
ಫನಾ ಕಥೆಯು ಜನರನ್ನು ಬಹಳ ರಂಜಿಸಿತು ಎಂದರೆ ತಪ್ಪಾಗಲಾರದು. ಇದು ಕೂಡ ಭಾರತದಲ್ಲಿ ಮತ್ತು ವಿದೇಶದಲ್ಲಿ ಜನಪ್ರಿಯವಾಯಿತು.

ಕುಂಡಲಿ ಭಾಗ್ಯ
ಕುಂಡಲಿ ಭಾಗ್ಯ 2017 ರಂದು ಪ್ರಸಾರವಾಯಿತು. ಆರಂಭದಲ್ಲಿ ಶ್ರದ್ಧಾ ಆರ್ಯ, ಧೀರಜ್ ಧೂಪರ್ ಮತ್ತು ಮನೀರ್ ಜೌರಾ ನಾಯಕರಾಗಿ ನಟಿಸಿದ್ದರು. 2022 ರಲ್ಲಿ ಧೂಪರ್ ಬದಲಿಗೆ ಶಕ್ತಿ ಅರೋರಾ ನಟಿಸಿದರು. ಈ ಜನಪ್ರಿಯ ಧಾರವಾಹಿಯನ್ನೂ ಜನರು ತುಂಬಾ ಇಷ್ಟಪಡುತ್ತಾರೆ.

ಗಮ್ ಹೈ ಕಿಸಿ ಕೆ ಪ್ಯಾರ್ ಮೇ
ಗಮ್ ಹೈ ಕಿಸಿ ಕೆ ಪ್ಯಾರ್ ಮೇ ಧಾರಾವಾಹಿಯನ್ನು ಭಾರತದಲ್ಲಿ ಮಾತ್ರವಲ್ಲದೆ, ವಿದೇಶದಲ್ಲಿಯೂ ವೀಕ್ಷಿಸಲಾಗುತ್ತದೆ. ಈ ಧಾರವಾಹಿಯ ನಟರು ಕೂಡ ಬಹಳ ಜನಪ್ರಿಯರಾಗಿದ್ದಾರೆ.