ನ್ಯೂಸ್

ರಾಜ್ಯಸಭಾ ಸದಸ್ಯರಾಗಿ ವೀರೇಂದ್ರ ಹೆಗ್ಗಡೆ, ಪಿ.ಟಿ. ಉಷಾ, ಇಳಯರಾಜ, 'ಬಾಹುಬಲಿ' ಕಥೆಗಾರ ನೇಮಕ..

ನವದೆಹಲಿ: ರಾಜ್ಯಸಭೆಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಅಚ್ಚರಿಯ ಹೆಸರನ್ನು ಸೂಚಿಸಿದ್ದ ಆಡಳಿತಾರೂಢ ಬಿಜೆಪಿ, ಇದೀಗ ನಾಮನಿರ್ದೇಶನದಲ್ಲೂ ವಿಶೇಷ ಎನಿಸುವ ನಾಲ್ವರ ಹೆಸರನ್ನು ನೇಮಕ ಮಾಡಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ.

ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಖ್ಯಾತ ಕ್ರೀಡಾಪಟು ಪಿ.ಟಿ.ಉಷಾ, ಖ್ಯಾತ ಸಂಗೀತ ಸಂಯೋಜಕ ಇಳಯರಾಜ ಹಾಗೂ ಖ್ಯಾತ ಚಿತ್ರಸಾಹಿತಿ, ಬಾಹುಬಲಿ ಸಿನಿಮಾದ ಕಥೆಗಾರ ಕೆ.ವಿ. ವಿಜಯೇಂದ್ರ ಪ್ರಸಾದ್ (ಎಸ್​.ಎಸ್.ರಾಜಮೌಳಿಯ ತಂದೆ) ಅವರನ್ನು ನೇಮಕ ಮಾಡಲಾಗಿದೆ.