Aadhaar Update: ಪ್ರತಿಯೊಬ್ಬ ಭಾರತೀಯನಿಗೂ ಬಹಳ ಮುಖ್ಯವಾದ ದಾಖಲಾತಿ ಎಂದರೆ ಅದು ಆಧಾರ್ ಕಾರ್ಡ್. ಒಂದು ರೀತಿ ಎಲ್ಲಾ ಡಾಂಕ್ಯೂಮೆಂಟ್ಗಳ ಕಾರ್ಡ್ಗಳಿಗೆ ಅಧಿಪತಿಯೇ ಈ ಆಧಾರ್ ಕಾರ್ಡ್. ಇದೊಂದು ಚೀಟಿ ಸರಿಯಿದ್ದರೇ ಉಳಿದೆಲ್ಲವೂ ಕೂಡ ಬಹಳ ಸರಳ ಹಾಗೂ ಸುಲಭ. ನಾವು ಪಡಿತರ ಚೀಟಿ, ವಾಹನ ಪರವಾನಗಿ, ಪಾನ್ ಕಾರ್ಡ್, ಬ್ಯಾಂಕ್ ಖಾತೆ ಹೀಗೆ ಹಲವು ದಾಖಲಾತಿ ಪಡೆಯಲು ಸೇವಾ ಕೇಂದ್ರಗಳಿಗೆ ಭೇಟಿ ಕೊಟ್ಟಾಗ ಅವರು ನಮ್ಮನ್ನು ಮೊದಲು ಕೇಳುವುದೇ ‘ಎಲ್ಲಿ ನಿಮ್ಮ ಆಧಾರ್ ಕೊಡಿ’ ಎಂದು. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಈ 12 ಅಂಕಿಗಳ ವಿಶಿಷ್ಟ ಗುರುತಿನ ಸಂಖ್ಯೆ ಮಹತ್ವ ಬಹಳ ಇದೆ. ಇದೀಗ ಆಧಾರ್ ಕಾರ್ಡ್ ನವೀಕರಣಕ್ಕೆ ಯುಐಡಿಎಐ ಹೊಸ ನಿಮಯಗಳನ್ನು ಜಾರಿಗೊಳಿಸಿದೆ.
ಇದನ್ನೂ ಓದಿ: 100 ಮೈಲಿ ಓಟದಲ್ಲಿ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳೆ ಕನ್ನಡತಿ ಅಶ್ವಿನಿ ಗಣಪತಿ! Deep Japan Ultra 100 event
ಈಗಿರುವ ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಬೇಕೇ? ಹಳೆಯ ಆಧಾರ್‌ನಲ್ಲಿ ಹೆಸರು, ಮನೆ ವಿಳಾಸ ಅಥವಾ ಫೋಟೋವನ್ನು ಬದಲಾಯಿಸಲು ನೀವು ಬಯಸಿದರೆ (ಆಧಾರ್ ಕಾರ್ಡ್ ನವೀಕರಣ), ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಪರಿಚಯಿಸಿರುವ ಈ ಹೊಸ ನಿಯಮಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಉತ್ತಮ. 2025-26 ವರ್ಷಕ್ಕೆ ಆಧಾರ್ ಅನ್ನು ನವೀಕರಿಸಲು ಅಗತ್ಯವಿರುವ ದಾಖಲೆಗಳ ಹೊಸ ಪಟ್ಟಿಯನ್ನು ಯುಐಡಿಎಐ ಇತ್ತೀಚೆಗಷ್ಟೇ ಬಿಡುಗಡೆಗೊಳಿಸಿದೆ.
ಒಬ್ಬ ವ್ಯಕ್ತಿಯ ಹೆಸರಿನಲ್ಲಿ ತಪ್ಪಾಗಿ ಎರಡು ಅಥವಾ ಹೆಚ್ಚಿನ ಆಧಾರ್ ಸಂಖ್ಯೆಗಳು ಜನರೇಟ್ ಆಗಿದ್ದರೆ, ಮೊದಲು ನೀಡಲಾದ ಆಧಾರ್ ಸಂಖ್ಯೆ ಮಾತ್ರ ಮಾನ್ಯವಾಗಿರುತ್ತದೆ ಎಂದು ಯುಐಡಿಎಐ ಸ್ಪಷ್ಟಪಡಿಸಿದೆ. ಮೊದಲ ಸಂಖ್ಯೆಯನ್ನು ಹೊರತುಪಡಿಸಿ ಉಳಿದೆಲ್ಲ ಆಧಾರ್ ಸಂಖ್ಯೆಗಳನ್ನು ರದ್ದುಗೊಳಿಸಲಾಗುತ್ತದೆ.
1. ಗುರುತಿನ ಚೀಟಿ: ನೀವು ಪಾಸ್‌ಪೋರ್ಟ್, ಪ್ಯಾನ್ ಕಾರ್ಡ್ (ಇ-ಪ್ಯಾನ್ ಕಾರ್ಡ್), ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿ, ಸರ್ಕಾರಿ ಸಂಸ್ಥೆಯಿಂದ ನೀಡಲಾದ ಫೋಟೋ ಗುರುತಿನ ಚೀಟಿ, ನರೇಗಾ ಉದ್ಯೋಗ ಕಾರ್ಡ್, ಪಿಂಚಣಿದಾರರ ಗುರುತಿನ ಚೀಟಿ, ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ/ಮಾಜಿ ಸೈನಿಕರ ಸಹಕಾರಿ ಆರೋಗ್ಯ ಯೋಜನೆ ಕಾರ್ಡ್, ತೃತೀಯ ಲಿಂಗಿ ಗುರುತಿನ ಚೀಟಿಯನ್ನು ದಾಖಲೆಗಳಾಗಿ ಪ್ರಸ್ತುತಪಡಿಸಬಹುದು.
2. ವಿಳಾಸ ಪುರಾವೆ: ವಿದ್ಯುತ್/ನೀರು/ಅನಿಲ/ಲ್ಯಾಂಡ್‌ಲೈನ್ ಬಿಲ್ (3 ತಿಂಗಳಿಗಿಂತ ಕಡಿಮೆ ಹಳೆಯದು), ಬ್ಯಾಂಕ್ ಪಾಸ್‌ಬುಕ್ ಅಥವಾ ಬ್ಯಾಂಕ್ ಸ್ಟೇಟ್‌ಮೆಂಟ್, ಪಡಿತರ ಚೀಟಿ, ಪಾಸ್‌ಪೋರ್ಟ್, ಚಾಲನಾ ಪರವಾನಗಿ, ಬಾಡಿಗೆ ಒಪ್ಪಂದ (ನೋಂದಾಯಿತ), ಪಿಂಚಣಿ ದಾಖಲೆ, ರಾಜ್ಯ/ಕೇಂದ್ರ ಸರ್ಕಾರ ನೀಡಿದ ನಿವಾಸ ಪ್ರಮಾಣಪತ್ರವನ್ನು ವಿಳಾಸ ಪುರಾವೆಯಾಗಿ ನೀಡಬಹುದು.
ಇದನ್ನೂ ಓದಿ: ರಾತ್ರಿ ಊಟಕ್ಕೆ ಬರುತ್ತೇನೆ..! ಡೆತ್ನೋಟ್ ಇಲ್ಲ, ಕೊನೆ ಸಂದೇಶವಿಲ್ಲ; ವೈದ್ಯನ ಕೊನೆ ಮಾತಿಗೆ ತಾಯಿ ಕಣ್ಣೀರು | Missing Doctor3. ಜನನ ಪ್ರಮಾಣಪತ್ರ: ಶಾಲಾ ಅಂಕಪಟ್ಟಿ, ಪಾಸ್‌ಪೋರ್ಟ್, ಜನ್ಮ ದಿನಾಂಕದೊಂದಿಗೆ ಪಿಂಚಣಿ ದಾಖಲೆ, ಜನ್ಮ ದಿನಾಂಕದೊಂದಿಗೆ ರಾಜ್ಯ ಅಥವಾ ಕೇಂದ್ರ ಸರ್ಕಾರದ ಪ್ರಮಾಣಪತ್ರವನ್ನು ಒದಗಿಸಬಹುದು.
ಆಧಾರ್ ಕಾರ್ಡ್ (UIDAI) ಜೂನ್ 14, 2026 ರವರೆಗೆ ಉಚಿತ ಆನ್‌ಲೈನ್ ಆಧಾರ್ ನವೀಕರಣ ಸೌಲಭ್ಯವನ್ನು ಒದಗಿಸಿದೆ. ಈಗ ಮನೆಯಲ್ಲೇ ಕುಳಿತು ನವೀಕರಣ ಮಾಡಿಕೊಳ್ಳುವುದು ಹೇಗೆ? ಎಂಬುದರ ವಿವರ ಹೀಗಿದೆ ಅನುಸರಿಸಿ.
1. myAadhaar ಪೋರ್ಟಲ್‌ಗೆ ಲಾಗಿನ್ ಮಾಡಿ.
2. ಅಗತ್ಯವಿರುವ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.
3. ಬಯೋಮೆಟ್ರಿಕ್ ಅಥವಾ OTP ಮೂಲಕ ಪರಿಶೀಲಿಸಿ.
4. ನವೀಕರಣದ ನಂತರ ಇ-ಆಧಾರ್ ಡೌನ್‌ಲೋಡ್ ಮಾಡಿಕೊಳ್ಳಿ.